+91 8255-266211
info@shreeodiyoor.org

ಒಳಿತು ಮಾಡುವ ಕೆಲಸ ಎಲ್ಲರಿಂದ ಆಗಬೇಕಿದೆ

“ಒಳಿತು ಮಾಡುವ ಕೆಲಸ ಎಲ್ಲರಿಂದ ಆಗಬೇಕಿದೆ”
‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನದ ಮುಗಿತಲದ ಲೇಸ್ – ‘ತುಳುಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಸಾಧಕನಿಗೆ ವಿರೋಧಿಗಳಿಲ್ಲ. ಒಳಿತು ಮಾಡುವ ಕೆಲಸ ಎಲ್ಲರಿಂದ ಆಗಬೇಕಿದೆ. ನಮ್ಮ ಬಗ್ಗೆ ಮಾತನಾಡುವವರಿದ್ದರೆ ಮಾತ್ರ ನಾವು ಎಚ್ಚರದಿಂದ ಇರಲು ಸಾಧ್ಯ. ಸಿರಿರಾಮೆ ಸಮ್ಮೇಳನದ ಉದ್ದೇಶವೇ ಸಮಾಜದ ಉನ್ನತಿಗೆ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಿದೆ” ಎಂದು ಪೂಜ್ಯ ಶ್ರೀಗಳವರು ಆಶೀರ್ವಚನ ನೀಡಿದರು. ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ ಬಹಳ ಸುಂದರವಾಗಿ ಕೊನೆಗೊಂಡಿದೆ. ನಾವು ನಮ್ಮ ಕರ್ತವ್ಯವನ್ನು ಮಾಡುತ್ತಾ ಸಾಗಿದರೆ ಜೀವನ ಪಾವನವಾಗುವುದು. ಈ ಕಾರ್ಯಕ್ರಮವು ಬೆಳ್ಳಿಹಬ್ಬ ಕಾರ್ಯಕ್ರಮಕ್ಕೆ ಮುನ್ನುಡಿಯಾಗಿದೆ. ನಮ್ಮೊಳಗಿನ ಒಗ್ಗಟ್ಟು ನಮ್ಮನ್ನು ಮತ್ತಷ್ಟು ಬಲಗೊಳಿಸುತ್ತದೆ” ಎಂದರು.
ಕವಿ ಹಾಗೂ ಸಾಹಿತ್ಯ ಕ್ಷೇತ್ರದ ಸಾಧಕ ಭಾಸ್ಕರ ರೈ ಕುಕ್ಕುವಳ್ಳಿರವರು ‘ತುಳುಸಿರಿ’ ಮಾನಾದಿಗೆ ಸ್ವೀಕರಿಸಿ ಮಾತನಾಡಿ “ತುಳುವಿನ ಉಳಿವಿಗೆ ಪೂಜ್ಯ ಸ್ವಾಮೀಜಿಯವರ ಪಾತ್ರ ಅಪಾರ. ಇಲ್ಲಿ ನಡೆದ ಕೆಲಸ ಕಾರ್ಯಗಳೆಲ್ಲವೂ ಜನಪರವಾಗಿದೆ. ತುಳುವಿನ ಉಳಿವಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ. ರಾಮ ರಾಜ್ಯ ಹೇಗಿತ್ತು ಎಂಬುದನ್ನು ತುಳುನಾಡನ್ನು ಕಂಡರೆ ಸಾಕು. ಜಾನಪದವನ್ನು ಉಳಿಸಿ ನಮ್ಮ ಮಕ್ಕಳಿಗೆ ಸಂಸ್ಕೃತಿಯನ್ನು ತಿಳಿಸುವ ಕೆಲಸವಾಗಬೇಕು. ಈ ಒಂದು ಕಾರ್ಯಕ್ರಮದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವಾಗುತ್ತಿರುವುದು ಸಂತಸದ ವಿಚಾರ” ಎಂದರು.
ತಜ್ಞ ವೈದ್ಯ ಡಾ| ಭಾಸ್ಕರಾನಂದ ಕುಮಾರ್ ಕಟೀಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ರಾಮನ ಆದರ್ಶವನ್ನು ನಾವು ಜೀವನದಲ್ಲಿ ಅಳವಡಿಸಬೇಕು. ಒಡಿಯೂರು ಹೆಸರಿನಲ್ಲಿಯೇ ರಾಮನ ಆದರ್ಶವಿದೆ. ಕ್ಷೇತ್ರದಿಂದ ತುಳುವಿನ ಉಳಿವಿಗಾಗಿ ನಡೆಸುವ ಪ್ರಯತ್ನಕ್ಕೆ ನಾವೆಲ್ಲರೂ ಸಹಕಾರ ನೀಡಬೇಕಾಗಿದೆ” ಎಂದರು.
ಉದ್ಯಮಿ ಶ್ರೀ ಚಂದ್ರಶೇಖರ ಶೆಟ್ಟಿ ಅನೆಯಾಲಮಂಟಮೆ, ವಿಠಲ್ ಕನ್‍ಸ್ಟ್ರಕ್ಷನ್ಸ್‍ನ ಶ್ರೀ ಸುರೇಶ್ ಬನಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
‘ತುಳುಸಿರಿ ಮಾನಾದಿಗೆ’: ಸಮಾರಂಭದಲ್ಲಿ ಕೃಷಿ ಕ್ಷೇತ್ರದ ಸಾಧನೆಗಾಗಿ ಶ್ರೀ ಮಹಾಭಲ ಭಟ್ ಕಾಡೂರು, ಶ್ರೀ ಕುಂಬ್ರ ವೆಂಕಪ್ಪ ರೈ ಕುರ್ಲೆತ್ತಿಮಾರ್, ಶ್ರೀ ಮೋನಪ್ಪ ಪೂಜಾರಿ ಕೆರೆಮಾರ್ ಕಾವು, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಶ್ರೀ ಚಂದ್ರಹಾಸ ಕಣಂತೂರು, ಕವಿ, ಸಾಹಿತಿ, ಶಿಕ್ಷಕ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದ ಸಾಧಕ ಶ್ರೀ ರವಿರಾಜ್ ಶೆಟ್ಟಿ ಒಡಿಯೂರು, ಸಮಾಜಸೇವೆಗಾಗಿ ಶ್ರೀ ಕಮಲಾಕ್ಷ ಬಜಿಲಕೇರಿ ಮಂಗಳೂರು, ಶ್ರೀ ವಸಂತ ಉರ್ವಸ್ಟೋರ್, ತುಳು ರಂಗಭೂಮಿಯಲ್ಲಿ ಮಾಡಿದ ಸಾಧನೆಗಾಗಿ ಶ್ರೀ ಡಿ. ಶಶಿಧರ ಆಳ್ವ ದಾಸರಗುಡ್ಡೆ, ಶ್ರೀ ಅರುಣ್ ಶೆಟ್ಟಿ ಮುಳಿಹಿತ್ಲು, ನಾಟಿವೈದ್ಯೆ ಶ್ರೀಮತಿ ಭಾಗೀರಥಿ ಕೊಡಿಯಾಲ, ಸಂಘಟಕ ಸೋಮಪ್ಪ ನಾಯ್ಕ್ ಕಡಬರವರಿಗೆ ‘ತುಳುಸಿರಿ’ ಪ್ರಶಸ್ತಿ ನೀಡಿ ಪೂಜ್ಯ ಶ್ರೀಗಳವರು ಆಶೀರ್ವದಿಸಿದರು.
ಶ್ರೀ ಒಡಿಯೂರು ರಥೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಸ್ವಾಗತಿಸಿದರು. ಶ್ರೀ ಮಾತೇಶ್ ಭಂಡಾರಿ ವಂದಿಸಿದರು. ಶ್ರೀ ವಿಜೇತ್ ರೈ ಅಂಕತಡ್ಕ ಕಾರ್ಯಕ್ರಮ ನಿರೂಪಿಸಿದರು.
ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿಯವರ ಸೇವೆಯಾಗಿ ಸಾಯಂಕಾಲ ಪಾವಂಜೆ ಮೇಳದವರಿಂದ ‘ಅಯೋಧ್ಯಾ ದೀಪ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top