+91 8255-266211
info@shreeodiyoor.org

ಆನಂದದ ಸೆಲೆ ರಾಮನ ಆದರ್ಶದಲ್ಲಿದೆ

“ಆನಂದದ ಸೆಲೆ ರಾಮನ ಆದರ್ಶದಲ್ಲಿದೆ”
ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಇರುವತ್ತನಾಲ್‌ನೇ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಸಂದೇಶ
ಫೆ.18: “ಮಧ್ವ ನವಮಿಯ ಶುಭಸಂದರ್ಭದಲ್ಲಿ ನಾವಿಲ್ಲಿ ಸೇರಿದ್ದೇವೆ. ಆನಂದದ ಸೆಲೆ ರಾಮನ ಆದರ್ಶದಲ್ಲಿದೆ. ರಾಮನ ಬದುಕೆ ಆನಂದ. ಆತ್ಮಾರಾಮನ ಬಗೆಗಿನ ತಿಳುವಳಿಕೆ ಅಗತ್ಯ. ವಿಶ್ವವೇ ರಾಮಮಯವಾಗಿರುವ ಹಿನ್ನೆಲೆಯಲ್ಲಿ ‘ಸಿರಿರಾಮೆ’ ಎಂಬ ನಾಮಧೇಯದಲ್ಲಿ ಈ ಭಾರಿಯ ತುಳು ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ. ಅಶ್ವತ್ಥ ವೃಕ್ಷವನ್ನು ಸನಾತನ ಹಿಂದೂ ಧರ್ಮಕ್ಕೆ ಹೋಲಿಸಲಾಗಿದೆ. ಎರಡೂ ವಿಚಾರಗಳೂ ನಾಶವಿಲ್ಲದ್ದು. ತ್ಯಾಗ ಮತ್ತು ಸೇವೆ ದೇಶದ ಪ್ರಾಧಾನ್ಯತೆ. ಸೇವೆಗೆ ಇನ್ನೊಂದು ಹೆಸರು ಹನುಮಂತ. ತ್ಯಾಗ ಪೂರ್ಣ ಸೇವೆ ನಮ್ಮದಾಗಬೇಕು. ರಾಮಾಯಣ ಬದುಕಿನ ಬೆಳಕು” ಎಂದು ಪೂಜ್ಯ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದ ಆತ್ರೇಯ ಮಂಟಪದಲ್ಲಿ ಜರಗಿದ 24ನೇ ‘ಸಿರಿರಾಮೆ’ ತುಳು ಸಾಹಿತ್ಯ ಸಮ್ಮೇಳನವನ್ನು ದೀಪೋಜ್ವಲನದೊಂದಿಗೆ ಉದ್ಘಾಟಿಸಿ ಆಶೀರ್ವಚನಗೈದರು.
ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕರಾದ ಡಾ. ವಸಂತಕುಮಾರ್ ಪೆರ್ಲರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ “ಪ್ರತಿ ವರ್ಷ ಒಂದಲ್ಲ ಒಂದು ವಿಚಾರವನ್ನು ಇಟ್ಟುಕೊಂಡು ತುಳು ಭಾಷೆಯನ್ನು ಬೆಳೆಸುವ ಕೆಲಸ ತುಳು ಸಾಹಿತ್ಯ ಸಮ್ಮೇಳನದ ಮುಖಾಂತರ ಶ್ರೀ ಸಂಸ್ಥಾನದಿAದ ಆಗುತ್ತಿದೆ. ಜಾನಪದ ಉಳಿದರೆ ಸಂಸ್ಕೃತಿ ಉಳಿಯುತ್ತದೆ ಎನ್ನುವ ದೂರದೃಷ್ಟಿಯನ್ನಿರಿಸಿಕೊಂಡು ಪೂಜ್ಯ ಶ್ರೀಗಳು ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಾ ಬರುತ್ತಿದ್ದಾರೆ. ತುಳುವಿನ ಉಳಿವಿಗೆ ಶ್ರೀಗಳ ಕೊಡುಗೆ ಅಪಾರ” ಎಂದರು.
ಯಕ್ಷಗಾನ ಕಲಾವಿದರು, ಸಾಹಿತಿ, ತಜ್ಞ ವೈದ್ಯ ಡಾ| ಭಾಸ್ಕರಾನಂದ ಕಟೀಲ್ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಮುಗುಳಿ ತಿರುಮಲೇಶ್ವರ ಭಟ್, ಕನ್ಯಾನ ಶ್ರೀ ದತ್ತಕೃಪಾ ಪೈನಾನ್ಸ್ ಕಾರ್ಪೊರೇಶನ್‌ನ ಮಾಲಕರಾದ ಶ್ರೀ ಶ್ರೀಧರ ಕೆ.ಶೆಟ್ಟಿ ಗುಬ್ಯ ಮೇಗಿನಗುತ್ತು, ಶ್ರೀ ಒಡಿಯೂರು ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಶ್ರೀ ಒಡಿಯೂರು ರಥೋತ್ಸವ ಸಮಿತಿ ಕೋಶಾಧಿಕಾರಿ ಶ್ರೀ ಎ. ಸುರೇಶ್ ರೈ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರ ತುಳುಲಿಪಿ ಸ್ವ-ಹಸ್ತಾಕ್ಷರದ ಅಧ್ಯಾತ್ಮ ರಾಮಾಯಣಾಂತರ್ಗತೊ ‘ಸುಂದರಕಾAಡ’ ಹಾಗೂ ಡಾ. ವಸಂತಕುಮಾರ್ ಪೆರ್ಲ ಅವರ ಸಂಪಾದಕತ್ವದ ‘ತೂಪರಿಕೆ’ ಕೃತಿ ಬಿಡುಗಡೆಗೊಂಡಿತು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಪ್ರಾರ್ಥಿಸಿದರು. ತುಳು ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಸಂಚಾಲಕ ಶ್ರೀ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿ ಸಂಚಾಲಕರಾದ ಪಿ.ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು.
ತುಳು ಸಾಹಿತ್ಯ ಸಮ್ಮೇಳನದ ತುಳು ತುಲಿಪು ವಿಚಾರಗೋಷ್ಠಿಯಲ್ಲಿ ‘ರಾಮಾಯಣೊಡು ದೆಂಗ್‌ನ ಮಾನವೀಯ ಮೌಲ್ಯ’ದ ವಿಚಾರದಲ್ಲಿ ಮಂಡಿಸಿದ ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಶಕುಮಾರ್ ಎಂ.ಕೆ. ಇವರು “ಯಾರಿಗೂ ನೋವು ನೀಡದೆ ಬದುಕುವ ಕಾರ್ಯವಾಗಬೇಕು. ರಾಮನ ಜೀವನ ಮೌಲ್ಯವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಕರ್ತವ್ಯ ಪ್ರಜ್ಞೆಯಲ್ಲಿ ಅಚಲತೆಯನ್ನು ಹೊಂದಿದಾಗ ಭವಿಷ್ಯ ಉತ್ತಮವಾಗಿರುತ್ತದೆ” ಎಂದರು.
ದೈವನರ್ತಕ ಡಾ. ರವೀಶ್ ಪಡುಮಲೆರವರು ‘ಜಾನಪದ ಪಿಂದರಿಕೆಡ್ ರಾಮಾಯಣ’ ಎಂಬ ವಿಷಯದಲ್ಲಿ ಮಾತನಾಡಿ “ರಾಮಾಯಣ 300ಕ್ಕೂ ಅಧಿಕ ಭಾಷೆಯಲ್ಲಿ ಹೊರ ಬಂದಿದೆ. ಪ್ರಕೃತಿಯ ನಡುವಿನಲ್ಲಿ ಬದುಕು ಕಟ್ಟಿದವರಿಂದ ಜಾನಪದ ರಾಮಾಯಣ ನಿರ್ಮಾಣವಾಗಿದೆ. ಪಾರ್ದನಗಳಲ್ಲಿಯೂ ಸೀತೆಯ ಉಲ್ಲೇಖಗಳಿದೆ. ತುಳುವರು ಜನಪದ ಬದುಕು ಕಟ್ಟಿಕೊಂಡು ಬಂದಿದ್ದಾರೆ” ಎಂದರು.
ಪೂಜ್ಯ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕ ಶ್ರೀ ಶೇಖರ್ ಶೆಟ್ಟಿ ಬಾಯಾರು ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬಂಟ್ವಾಳ ಮೇಲ್ವಿಚಾರಕಿ ಶ್ರೀಮತಿ ಲೀಲಾ ಕೆ. ಪಾದೆಕಲ್ಲು ವಂದಿಸಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ವಿವಿಧ ಕವಿಗಳಿಂದ ಚಿಟ್ಕ ಕಬಿಕೂಟ ನಡೆಯಿತು. ಈ ಸಂದರ್ಭದಲ್ಲಿ ಆಕಾಶ್ ಗೇರುಕಟ್ಟೆ, ಕೆ. ಶಶಿಕಲಾ ಭಾಸ್ಕರ್ ದೈಲಾ, ಶ್ಯಾಮ್‌ಪ್ರಸಾದ್ ಭಟ್ ಕಾರ್ಕಳ, ನಳಿನಿ ಭಾಸ್ಕರ ರೈ ಮಂಚಿ, ಆರ್ಯನ್ ಸವನಾಲ್, ಅಶೋಕ ಎನ್. ಕಡೇಶಿವಾಲಯ, ಭಾಸ್ಕರ್ ಎ. ವರ್ಕಾಡಿ, ಸೌಮ್ಯ ಆರ್. ಶೆಟ್ಟಿ ಆನೇಕಲ್ಲು, ಮಲ್ಲಿಕಾ ಜೆ. ರೈ ಗುಂಡ್ಯಡ್ಕ, ಅಶ್ವಿನಿ ತೆಕ್ಕುಂಜ ಕುರ್ನಾಡ್, ಚಂದ್ರಹಾಸ ಕುಂಬಾರ ಬಂದಾರು, ನಾರಾಯಣ ನಾಯ್ಕ್ ಕುದುಕೋಳಿ, ಡಾ. ಸುರೇಶ ನೆಗಳಗುಳಿ, ಮುರಳೀಧರ ಆಚಾರ್ಯ ಕಂಗೊಟ್ಟು, ಪದ್ಮನಾಭ ಮಿಜಾರ್, ರೇಮಂಡ್ ಡಿಕೂನಾ ತಾಕೊಡೆ, ಸುಮಂಗಲಾ ದಿನೇಶ್ ಶೆಟ್ಟಿ, ಪದ್ಮನಾಭ ಪೂಜಾರಿ ನೇರಂಬೋಳು, ಜಯರಾಮ ಪಡ್ರೆ, ನಿರ್ಮಲಾ ಶೇಷಪ್ಪ ಖಂಡಿಗೆ, ಹಿತೇಶ್ ಕುಮಾರ್ ಎ., ಸತೀಶ್ ಬಿಳಿಯೂರು, ರಾಜೇಶ್ವರಿ ಎಚ್. ಬಜ್ಪೆ, ವಿಂಧ್ಯಾ ಎಸ್. ರೈ, ಅನುರಾಧ ರಾಜೀವ್ ಸುರತ್ಕಲ್, ಗುಲಾಬಿ ಸುರೇಂದ್ರ ಸುರತ್ಕಲ್, ವಸಂತಿ ಟಿ. ನಿಡ್ಲೆ, ಅಶ್ವಿಜ ಶ್ರೀಧರ್, ಜನಾರ್ದನ ದುರ್ಗಾ, ಉಮೇಶ್ ಶಿರಿಯ, ಹರೀಶ್ ಕುಮಾರ್ ಮೆಲ್ಕಾರ್, ವಾಣಿ ಲೋಕಯ್ಯ, ರವೀಂದ್ರ ಕುಲಾಲ್ ವರ್ಕಾಡಿ, ಅಶ್ವತ್ ಬರಿಮಾರು, ಸತೀಶ್ ಸಾಲಿಯಾನ್ ನೆಲ್ಲಿಕುಂಜೆ, ಸುಜಯ ಎಸ್. ಸಜಂಗದ್ದೆ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಸೌಮ್ಯ ರಾಮ್ ಕಲ್ಲಡ್ಕ, ನವ್ಯ ದಾಮೋದರ್, ಸತೀಶ್‌ಕುಮಾರ್ ಕುಂಪಲ, ನವ್ಯಶ್ರೀ ಸ್ವರ್ಗ, ಅಪೂರ್ವ ಕಾರಂತ್, ಆಕೃತಿ ಐ.ಎಸ್.ಭಟ್, ಸುಶೀಲಾ ಕೆ. ಪದ್ಯಾಣ, ದೀಪ್ತಿ ಅಡ್ಡಂತಡ್ಕ, ಚಂದ್ರಿಕಾ ಕೈರಂಗಳ, ಪೂವಪ್ಪ ನೇರಳಕಟ್ಟೆ, ನವೀನ್ ಚಿಪ್ಪಾರು, ಮಂಜುಶ್ರೀ ಯನ್., ಅನಿತಾ ಶೆಟ್ಟಿ ಮೂಡಬಿದ್ರೆ, ರಂಜಿತ್ ಸಸಿಹಿತ್ಲು, ಬಾಲಿನಿ ಎನ್. ಕರ್ಕೇರ, ಎಂ.ಎಸ್. ವೆಂಕಟೇಶ ಗಟ್ಟಿ, ಭವ್ಯಜ್ಯೋತಿ ಕೆ., ಪರಿಮಳ ಮಹೇಶ್ ರಾವ್, ರವಿ ಪಾಂಬಾರ್, ನವ್ಯ ಪ್ರಸಾದ್ ನೆಲ್ಯಾಡಿ, ರೇಖಾ ಸುದೇಶ್ ರಾವ್, ಹೇಮಂತ್ ಕುಮಾರ್ ಡಿ., ಮಿತ ಆಳ್ವಾ ಮೊದಲಾದ ಕವಿಗಳು ತಮ್ಮ ಚಿಟ್ಕವನ್ನು ವಾಚಿಸಿದರು.
ಕಬಿತೆ-ಪದ-ಚಿತ್ರೊ ಕಾರ್ಯಕ್ರಮ:
ಕವಿಗಳಾದ ಶ್ರೀ ಕದ್ರಿ ನವನೀತ ಶೆಟ್ಟಿ, ಶ್ರೀಮತಿ ವಸಂತಿ ಎ. ವಿಟ್ಲ, ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲ, ಶ್ರೀಮತಿ ವಿಜಯಾ ಶೆಟ್ಟಿ ಸಾಲೆತ್ತೂರು, ಶ್ರೀ ಟಿ. ಸುಬ್ರಹ್ಮಣ್ಯ ಒಡಿಯೂರು ಕವಿತೆ ಹೇಳಿದರು. ಹಿರಿಯ ಕಲಾವಿದ ಪ್ರೊ. ಗಣೇಶ ಸೋಮಾಯಾಜಿ ಬಿ., ಕಲಾವಿದೆ ಜಯಶ್ರೀ ಶರ್ಮ ಚಿತ್ರ ಬಿಡಿಸಿದರು. ಹಿರಿಯ ಕಲಾವಿದ ಪ್ರೊ. ಅನಂತಪದ್ಮನಾಭ ರಾವ್ ಸಹಕರಿಸಿದರು.
ಶ್ರೀ ರವಿರಾಜ್ ಶೆಟ್ಟಿ ಒಡಿಯೂರು ರಾಗ ಸಂಯೋಜನೆಯಲ್ಲಿ ಶ್ರೀಮತಿ ರೇಣುಕಾ ಎಸ್.ರೈ, ಶ್ರೀ ಶೇಖರ ಶೆಟ್ಟಿ ಬಾಯಾರು, ಶ್ರೀ ಶಿವಪ್ರಸಾದ್, ಶ್ರೀ ರವಿರಾಜ್ ಶೆಟ್ಟಿ ಹಾಡಿದರು.
ಸ್ವಯಂಸೇವಕ ಸಮಿತಿಯ ಸಂಚಾಲಕ ಶ್ರೀ ಯಶೋಧರ ಸಾಲ್ಯಾನ್ ಸ್ವಾಗತಿಸಿದರು. ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಕಾವ್ಯಲಕ್ಷ್ಮಿ ವಂದಿಸಿದರು. ಡಾ. ವಸಂತ ಕುಮಾರ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top