+91 8255-266211
info@shreeodiyoor.org

ಹೃದಯವನ್ನು ಗೆಲ್ಲುವ ಜತೆಗೆ ಬದುಕನ್ನು ಸರಿಪಡಿಸುವ ಕಾರ್ಯ ಶ್ರೀಮದ್ಭಾಗವತದಿಂದ ಸಾಧ್ಯ

“ಹೃದಯವನ್ನು ಗೆಲ್ಲುವ ಜತೆಗೆ ಬದುಕನ್ನು ಸರಿಪಡಿಸುವ ಕಾರ್ಯ ಶ್ರೀಮದ್ಭಾಗವತದಿಂದ ಸಾಧ್ಯ”
ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತಮಹಾಯಾಗ ಸಪ್ತಾಹಕ್ಕೆ ಚಾಲನೆ ನೀಡಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ದ.20: “ರಾಗ ದ್ವೇಷವನ್ನು ದೂರ ಮಾಡಿ ಪ್ರೀತಿ ಭಾವವನ್ನು ತುಂಬಿಕೊಳ್ಳುವ ಕಾರ್ಯವಾಗಬೇಕು. ಹೃದಯವನ್ನು ಗೆಲ್ಲುವ ಜತೆಗೆ ಬದುಕನ್ನು ಸರಿಪಡಿಸುವ ಕಾರ್ಯವನ್ನು ಶ್ರೀಮದ್ಭಾಗವತ ಮಾಡುತ್ತದೆ. ಗೊಂದಲಗಳಿಗೆ ಪರಿಹಾರ ನೀಡುವ, ಬದುಕಿನ ಕತ್ತಲನ್ನು ದೂರ ಮಾಡುವ ಕಾರ್ಯ ಗುರುತತ್ವದ ಅನುಷ್ಠಾನದಿಂದ ಸಾಧ್ಯ. ಮನಸ್ಸಿಗೆ ಸದ್ವಿಚಾರಗಳನ್ನು ನೀಡಿದಾಗ ಉತ್ತಮ ಹಾದಿಯಲ್ಲಿ ನಡೆಯಲು ಸಾಧ್ಯ” ಎಂದು ಪೂಜ್ಯ ಶ್ರೀಗಳವರು ಶ್ರೀ ಸಂಸ್ಥಾನದಲ್ಲಿ ಗುರುಬಂಧುಗಳಿಗೆ ಶ್ರೀದತ್ತಮಾಲಾಧಾರಣೆಗೈದು, ಶ್ರೀ ದತ್ತಮಹಾಯಾಗ ಸಪ್ತಾಹ ಚಾಲನೆ ನೀಡಿ ಆಶೀರ್ವಚನ ಮಾಡಿದರು.
ಸಾಧ್ವೀ ಶ್ರೀ ಮಾತಾನಂದಮಯೀ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಶ್ರೀಮದ್ಭಾಗವತ ಪ್ರವಚನಗೈದರು. ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಅಮೇರಿಕಾದ ಉದ್ಯಮಿ ಶ್ರೀ ಆನಂದ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್ ಕುಮಾರ್ ಬಿಜೈ, ಒಡಿಯೂರು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಯಶವಂತ ವಿಟ್ಲ ಸ್ವಾಗತಿಸಿ, ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಶ್ರೀ ಸಂತೋಷ್ ಭಂಡಾರಿ ವಂದಿಸಿದರು.
ಬೆಳಗ್ಗೆ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆ ನಡೆಯಿತು. ಅಪರಾಹ್ನ ‘ಆದಿನಾರಾಯಣ ದರ್ಶನ’ ಯಕ್ಷಗಾನ ತಾಳಮದ್ದಳೆ, ಸಂಜೆ ಶ್ರೀ ದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ, ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ. ರಾತ್ರಿ ಶ್ರೀ ಕೋದಂಡರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ರಾಜಾಂಗಣದ ಮುಂಭಾಗದಲ್ಲಿ ‘ಭಾರತ ಜನನಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top