+91 8255-266211
info@shreeodiyoor.org

ತ್ಯಾಗ ಮತ್ತು ಸೇವೆಯಿಂದ ಸಮಾಜಾಭಿವೃದ್ದಿ ಸಾಧ್ಯ

“ತ್ಯಾಗ ಮತ್ತು ಸೇವೆಯಿಂದ ಸಮಾಜಾಭಿವೃದ್ದಿ ಸಾಧ್ಯ” ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಪುಣೆ ಘಟಕದ 20ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಪುಣೆ: “ಅಧ್ಯಾತ್ಮಿಕತೆಯೊಂದಿಗೆ ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು. ಜೀವನ ಮೌಲ್ಯಾದರ್ಶಗಳಿಂದ ಸಂಸ್ಕಾರಯುತವಾದ ಜೀವನ ಸಾಧ್ಯ. ಪೌರಾಣಿಕ ಹಿನ್ನಲೆಯ ಯಕ್ಷಗಾನದಿಂದ ಭಾಷಾ ಶುದ್ಧಿಯಾಗುವ ಜೊತೆಗೆ ಪುರಾಣ, ಚರಿತ್ರೆಗಳನ್ನು ತಿಳಿದಂತಾಗುತ್ತದೆ. ಭಕ್ತಿ ಮತ್ತು ಸಂಸ್ಕಾರ ಪಾಠವನ್ನು ಭಜನೆ ಕಲಿಸುತ್ತದೆ.  ಸುಜ್ಞಾನದಿಂದ  ಕೂಡಿದ ಉತ್ತಮ ವಿಚಾರಗಳೊಂದಿಗೆ ಮಕ್ಕಳಿಗೆ ಸಂಸ್ಕಾರ, ಧರ್ಮದ ಪ್ರಜ್ಞೆಯನ್ನು ಕಲಿಸಿ-ತಿಳಿಸುವ ಕಾರ್ಯವಾಗಬೇಕು. ಅದು ಇಂದು ಇಲ್ಲಿ ನಡೆದಿದೆ, ಉತ್ತಮ ಕಾರ್ಯ ಸೇವಾ ಬಳಗದಿಂದಾಗಿದೆ. ಭಾರತದ ಮೂಲ ಕೃಷಿ ಸಂಸ್ಕøತಿಯ ಮೂಲಕ ಹಳ್ಳಿಯಿಂದ ದೇಶದ ಪ್ರಗತಿಯಾದಂತೆ, ಋಷಿ ಪರಂಪರೆಯಿಂದ, ಸಂಸ್ಕೃತಿಯಿಂದ ಧರ್ಮ ಸಂರಕ್ಷಣೆ ಕಾರ್ಯ ಆಗುತ್ತಿದೆ. ತ್ಯಾಗ ಮತ್ತು ಸೇವೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಸದ್ವಿಚಾರ, ಸಂಸ್ಕಾರಯುತ ಜೀವನದಿಂದ ಸದೃಢ ಸಮಾಜ ನಿರ್ಮಾಣವಾಗಬಹುದು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅನುಗ್ರಹ ಸಂದೇಶವಿತ್ತರು.
  ನವೆಂಬರ್ 26ರಂದು ಪುಣೆಯ ಬಾಣೇರ್‍ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಕೇಂದ್ರದಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಪುಣೆ ಘಟಕದ 20ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ  ಭಗವದ್ಭಕ್ತರನ್ನು ಉದ್ದೇಶಿಸಿ ಅಶಿರ್ವಚನ ನೀಡಿದ ಪೂಜ್ಯ ಶ್ರೀಗಳವರು “ಜೀವನದಲ್ಲಿ ದಾರಿ ತಪ್ಪಿದರೆ ಮತ್ತು ಮಾತು ತಪ್ಪಿದರೆ ಕಷ್ಟ. ನಡೆ ನುಡಿಯಲ್ಲಿ  ಧರ್ಮದ ಮಾರ್ಗವಿರಬೇಕು. ಆತ್ಮಾವಲೋಕನ ಮಾಡಿಕೊಂಡು ಧರ್ಮದ ಚೌಕಟ್ಟಿನಲ್ಲಿ ನಡೆದರೆ ಆತ್ಮೋದ್ಧಾರದ ಮೂಲ ಸಿಗಬಹುದು. ಸೇವಾ ಬಳಗ ಮತ್ತು ಮಹಿಳಾ ವಿಕಾಸ ಕೇಂದ್ರ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸುವ ಕಾರ್ಯ ಮುಂದುವರಿಯಲಿ” ಎಂದರು.
“ಜಗತ್ತಿನಲ್ಲೇ ಶ್ರೇಷ್ಠ ಸಂಸ್ಕøತಿಯನ್ನು ಹೊಂದಿರುವ ದೇಶ ಭಾರತ. ಎಷ್ಟೇ ಆಕ್ರಮಣ ಆದರು ನಮ್ಮ ಸಂಸ್ಕøತಿ ಅಳಿಯಲಿಲ್ಲ. ಅದನ್ನು ಉಳಿಸಿಕೊಂಡವರು ನಾವುಗಳು. ಇದು ನಿರಂತರವಾಗಿ ನಡೆಯಬೇಕು. ಇಲ್ಲಿ ಇಂದು ಅಂತಹ ವೈಭವದ ಕಾರ್ಯಕ್ರಮವನ್ನು ನೋಡುವ ಅವಕಾಶ ಸಿಕ್ಕಿದೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗಿನ ಕುಣಿತ ಭಜನೆ ಮನ ತುಂಬಿ ಬಂತು. ಇದನ್ನು ಕೇಳಿದರೆ ಸಾಲದು ನೋಡಿ ತಿಳಿಯಬೇಕು. ಇಂತಹ  ಉತಮ ಸಂಸ್ಕಾರವನ್ನು ಮಕ್ಕಳಿಗೆ ನೀಡಬೇಕು. ಪುಣೆಯ ಬಳಗ ಪ್ರತಿ ವರ್ಷ ವಿಶಿಷ್ಟ ಉತ್ತಮ ಸಂಸ್ಕಾರ ನೀಡುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಪೂಜ್ಯ ಶ್ರೀಗಳವರ ದಿವ್ಯೋಕ್ತಿಯಂತೆ ಸಮಾಜದಲ್ಲಿ ತಾನು ಬದುಕಿ ಅನ್ಯರನ್ನು ಬದುಕಬಿಡಬೇಕು ಎಂಬ  ಚಿಂತನೆಯ ಮೂಲಕ ಸಮಾಜಮುಖಿಯಾದ ಸೇವೆಯನ್ನು ಮಾಡುತ್ತಿದ್ದಾರೆ.  ಸೇವೆ ಮಾಡುವಂತಹ ಸದಾವಕಾಶವನ್ನು ಭಗವಂತ ನಮಗೆಲ್ಲರಿಗೂ ಕರುಣಿಸಿದ್ದಾನೆ. ಗುರು ಅನುಗ್ರಹ ಮತ್ತು  ಸಂಕಲ್ಪದಂತೆ ನಡೆದಾಗ, ಸದ್ಭಾವನೆಯು ನಮ್ಮಲ್ಲಿದ್ದರೆ ಸಮಾಜ ಸದೃಢವಾಗಬಹುದು. ಮಕ್ಕಳಿಗೆ  ಉತ್ತಮ  ಸಂಸ್ಕಾರ  ಸಿಕ್ಕಿದರೆ ಸತ್ಪ್ರಜೆಗಳಾಗಿ ಮುಂದೆ ಸಮಾಜದ ಶಕ್ತಿಗಳಾಗಿ ಬೆಳೆಯುತ್ತಾರೆ. ನಮ್ಮ ಜೀವನದಲ್ಲಿ ಸಾರ್ಥಕತೆ ಪಡೆಯಬೇಕೆಂದರೆ ಸಂಸ್ಕಾರ, ಸಂಸ್ಕøತಿ ಮುಖ್ಯ. ಉತ್ತಮ ಸಂಸ್ಕಾರ  ದೊಂದಿಗೆ ನಿಸ್ವಾರ್ಥ ಸೇವೆಯಿಂದ ದೇವರ, ಗುರುವರ್ಯರ ಅನುಗ್ರಹ ಪಡೆಯಲು ಸಾಧ್ಯ” ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನಗೈದರು.
“ಒಡಿಯೂರು ಶ್ರೀಗಳವರ ಸಮಾಜ ಮುಖಿ ಸೇವಾ ಕಾರ್ಯಗಳು ಸಮಾಜಾಭಿವೃದ್ಧಿಯ ದಿಟ್ಟ ನಿಲುವಿನಲ್ಲಿ ನಡೆಯುತ್ತಿದೆ. ಕೃಷಿ ಆಧಾರಿತ ನಮ್ಮ ಸಂಸ್ಕøತಿಯ ಜೊತೆಯಲ್ಲಿ ಆಧ್ಯಾತ್ಮಿಕ ಚಿಂತನೆ, ಶೈಕ್ಷಣಿಕ, ಆಯುರ್ವೇದ ಚಿಕಿತ್ಸೆ ಮತ್ತು ಹಲವಾರು ಸೇವಾ ಯೋಜನೆಗಳ ಕೇಂದ್ರವಾಗಿ ಶ್ರೀಗಳು ಕೈಗೊಂಡ ಕಾರ್ಯಗಳು ದೇಶ ಕಟ್ಟುವಲ್ಲಿ ಫಲಪ್ರದವಾಗಿ ಪರಿಣಮಿಸಲಿದೆ. ನಾವು ಎಲ್ಲೇ ಹೋದರು ಎಲ್ಲೇ ಇದ್ದರು ಎಷ್ಟೇ ದೊಡ್ಡ ವ್ಯಕ್ತಿಯಾಗಿ ಗುರುತಿಸಿಕೊಂಡರೂ ನಮ್ಮ ಜನ್ಮಭೂಮಿಯ ಪ್ರೀತಿ ನಮಲ್ಲಿರಲಿ. ತಾಯ್ನಾಡಿನ ನಮ್ಮತನವನ್ನು ಉಳಿಸಿಕೊಂಡು ಹೋಗುವ ಕಾರ್ಯ ನಮ್ಮಿಂದ ಆಗಲಿ” ಎಂದು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬಂಟ್ವಾಳ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳೆಪ್ಪಾಡಿಗುತ್ತು ಶುಭಹಾರೈಸಿದರು.
“ದೈವ ದೇವರು ಮತ್ತು ಗುರುವಿನ ಆಶೀರ್ವಾದದಿಂದ ನಮ್ಮ ಸತ್ಕರ್ಮಗಳು ತನ್ನಿಂತಾನೆ ನಿರ್ವಿಘ್ನವಾಗಿ ನಡೆಯುತ್ತವೆ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಜ್ಞಾನಧಾರೆ ನೀಡುವ ಗುರುವಿನ ಆಶಿರ್ವಾದ ನಮಗೆ ಸಿಗಬೇಕು. ಗುರುಚರಣದ ಸ್ಪರ್ಶ ನಮ್ಮನ್ನು ಮತ್ತಷ್ಟು ಶುದ್ಧವಾಗಿಸುತ್ತದೆ. ಪುಣೆಯ ಶ್ರೀ ಗುರುದೇವ ಸೇವಾ ಬಳಗ ಉತ್ತಮ ಕಾರ್ಯಗಳ ಮೂಲಕ ಸೇವಾಗೈಯುತ್ತಿದೆ. ಗುರುವಿನ ಸತ್ಕಾರ್ಯಗಳಲ್ಲಿ ನಾವು ಕೂಡ ಬಾಗಿಗಳಾಗೋಣ” ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಶ್ರೀ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‍ಬೆಟ್ಟು ಮಾತನಾಡಿದರು.
“ಗುರುವಿನ ಮಾರ್ಗದರ್ಶನದಲ್ಲಿ ನಡೆದರೆ ಜೀವನದ ಪಯಣ ಸುಖಕರವಾಗಿ ಇರುತ್ತದೆ. ಯಾವುದೇ ಅಧಿಕಾರ ಪದವಿ, ಸನ್ಮಾನ ಸತ್ಕಾರದ  ಆಸೆಯನ್ನು ಮೀರಿ ನಾವು ಮಾಡುವ ಸೇವಾಕಾರ್ಯ ಸಮಾಜಕ್ಕೆ ಅರ್ಪಣೆಯಾದಾಗ  ಸಮಾಜ ನಮ್ಮನ್ನು ಗುರುತಿಸುತ್ತದೆ. ಅದುವೇ ನಮಗೆ ದೊಡ್ಡ ಸತ್ಕಾರ. ಗುರುಗಳ ಆಶಿರ್ವಾದ ಸದಾ ನಮಗೆ ಇರಲಿ” ಎಂದು ಪುಣೆ ತುಳುಕೂಟದ ಅಧ್ಯಕ್ಷ ಶ್ರೀ ದಿನೇಶ್ ಶೆಟ್ಟಿ ಕಳತ್ತೂರು ಶುಭಹಾರೈಸಿದರು.    
“ಒಡಿಯೂರು ಕ್ಷೇತ್ರದ ಮುಖಾಂತರ  ಸಮಾಜದ ಒಳಿತನ್ನು ಬಯಸುವ  ಸಮಾಜಮುಖಿ ಸೇವೆಯಲ್ಲಿ ನಗುವನ್ನು ಕಾಣುವ, ಒಡಿಯೂರು ಗುರುವಿನಂತಹವರಿಗೆ ನಮ್ಮ ಭಕ್ತರ ಸಹಕಾರ ಸದಾ ಇರುತ್ತದೆ. ಕ್ಷೇತ್ರ ಇಂದು ಬೃಹತ್ ರೂಪದಲ್ಲಿ ಬೆಳೆದಿದೆ ಹಾಗೆಯೇ ಸೇವಾ ಕಾರ್ಯಗಳು ನಿರಂತವಾಗಿ ನಡೆಯುತ್ತಿದೆ. ಇಂತಹ ಕ್ಷೇತ್ರದಲ್ಲಿ ನಡೆಯುವ ಸೇವಾ ಕಾರ್ಯಗಳನ್ನು ಮತ್ತು ದೇವಸ್ಥಾನದ ಸೊಬಗನ್ನು ನಮ್ಮ ಮಕ್ಕಳಿಗೆ  ಜನಮಾನಸಕ್ಕೆ ತಿಳಿಸುವ ಕಾರ್ಯ ಮಾಡೋಣ” ಎಂದು ಪಿಂಪ್ರಿಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ಶ್ರೀ ರಾಕೇಶ್ ಶೆಟ್ಟಿ ಬೆಳ್ಳಾರೆ ಹೇಳಿದರು. 
“ಸಮಾಜಮುಖಿ ಚಿಂತನೆಯ ಮೂಲಕ ಒಡಿಯೂರು ಶ್ರೀಗಳು ಕೈಗೊಂಡ ಸೇವಾ ಕಾರ್ಯಗಳು ಎಲ್ಲೆಡೆ ಹರಡಿದೆ. ಜನರ ಮಧ್ಯೆ ಇದ್ದುಕೊಂಡು ಕಷ್ಟ ಸುಖ ಅರಿತು, ಸಮಾಜಕ್ಕಾಗಿ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ  ಸೇವಾ ಕಾರ್ಯಗಳು ನಡೆಯುತ್ತಿವೆ. ಆಧ್ಯಾತ್ಮಿಕ ಚಿಂತನೆಯಲ್ಲಿ, ಧರ್ಮ ಸಂರಕ್ಷಣೆಯಲ್ಲಿ ಶ್ರೀಗಳು ತನ್ನನ್ನು ತೊಡಗಿಸಿಕೊಂಡವರು. ಪೂಜ್ಯ ಶ್ರೀಗಳವರ ಸಂಸ್ಥೆ ಶ್ರೀ ಗುರುದೇವ ಸೇವಾ ಬಳಗದ ಕುಣಿತ ಭಜನೆಯಿಂದ ಉತ್ತಮ ಸಂಸ್ಕೃತಿಯ ಅನಾವರಣ ಆಗಿದೆ” ಎಂದು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ಶ್ರೀ ವಿಶ್ವನಾಥ್ ಪೂಜಾರಿ ಕಡ್ತಲ ಶುಭಹಾರೈಸಿದರು.
ಪುಣೆ ಕಾತ್ರಜ್‍ನ ಶ್ರೀ ಅಯ್ಯಪ್ಪ ಸ್ವಾಮೀ ಸೇವಾ ಸಂಘದ ಅಧ್ಯಕ್ಷ ಶ್ರೀ ಸುಭಾಶ್ ಶೆಟ್ಟಿ ಮಾತನಾಡಿ “ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ಗುರುವಿನ ಸಾನಿಧ್ಯ ಬೇಕು. ಸಮಾಜದ ಒಳಿತನ್ನು ಬಯಸುವ, ಸಮಾಜಮುಖಿ ಸೇವೆಯಲ್ಲಿ ನಗುವನ್ನು ಕಾಣುವ ಒಡಿಯೂರು ಗುರುವಿನಂತಹವರಿಗೆ ನಮ್ಮ ಭಕ್ತರ ಸಹಕಾರ ಸದಾ ಇರುತ್ತದೆ. ಪುಣೆ ಬಳಗದವರು ಉತ್ತಮ ಕಾರ್ಯಕ್ರಮಗಳ ಮೂಲಕ ಜನರಿಗೆ ಮತ್ತು  ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯವನ್ನು ವರ್ಷಂಪ್ರತಿ ಮಾಡುತ್ತಾ ಇದ್ದಾರೆ. ನಮ್ಮ ಸಹಕಾರ ಸದಾ ಇದೆ” ಎಂದರು.
ಮುಖ್ಯ ಅಥಿತಿಗಳಾಗಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ಶ್ರೀ ದಾಮೋದರ ಎಸ್. ಶೆಟ್ಟಿ ನೇರೊಲ್, ಉಪಸ್ಥಿತರಿದ್ದರು. ಮಹಿಳಾ ವಿಕಾಸ ಕೇಂದ್ರದ ಪುಣೆ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ ಪಿ. ಶೆಟ್ಟಿಯವರು ವೇದಿಕೆಯಲ್ಲಿದ್ದರು. 
ಶ್ರೀಗುರುಪಾದುಕಾ ಪೂಜೆಯನ್ನು ಪುಣೆ ಭಕ್ತರ ಪರವಾಗಿ ಪುಣೆಯ  ಖ್ಯಾತ ಉದ್ಯಮಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಶ್ರೀ ಪ್ರವೀಣ್ ಶೆಟ್ಟಿ ಪುತ್ತೂರು ಹಾಗೂ ಶ್ರೀಮತಿ ಆಶಾ ಪಿ. ಶೆಟ್ಟಿ  ದಂಪತಿಗಳು ನೆರವೇರಿಸಿದರು. ಈ ಸುಸಂದರ್ಭ ಮುತ್ತೈದೆಯರು ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಬಳಗದ ಸೇವಾರ್ಥಿಗಳಿಗೆ ಪ್ರಶಸ್ತಿ ನೀಡಿ ಹರಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ  ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇವರಿಂದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು. ಶ್ರೀಮತಿ ಶ್ವೇತಾ ಎಚ್. ಮೂಡಬಿದ್ರಿ ಮತ್ತು ತಂಡದ ನಿರ್ದೇಶನದಲ್ಲಿ ಶ್ರೀ ಗುರುದೇವ ಚಿಣ್ಣರ ಬಳಗ ಮತ್ತು ಸದಸ್ಯರಿಂದ ಕುಣಿತ ಭಜನೆ ನಡೆಯಿತು. 
ಪುಣೆ ಬಳಗದ ಅಧ್ಯಕ್ಷ ಶ್ರೀ ಪ್ರಭಾಕರ ವಿ.ಶೆಟ್ಟಿ ಸ್ವಾಗತಿಸಿದರು. ಪೂಜ್ಯ ಸ್ವಾಮಿಜಿಯವರು ಅಥಿತಿಗಣ್ಯರಿಗೆ ಹಾಗೂ ನೆರೆದ ಎಲ್ಲಾ ಗುರುಭಕ್ತರಿಗೆ ಪಲ ಮಂತ್ರಾಕ್ಷತೆ ನೀಡಿ ಹರಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು ಬಳಗದ ಸಮಾಜ ಸೇವಾ ಕಾರ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಶ್ರೀ ತಾರಾನಾಥ್ ಶೆಟ್ಟಿ  ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top