+91 8255-266211
info@shreeodiyoor.org

ಆಧ್ಯಾತ್ಮಿಕತೆ-ಆರ್ಥಿಕತೆ ಒಂದಾದಾಗ ಬದುಕು ಸುಂದರ

“ಆಧ್ಯಾತ್ಮಿಕತೆ-ಆರ್ಥಿಕತೆ ಒಂದಾದಾಗ ಬದುಕು ಸುಂದರ”
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಒಡಿಯೂರು ಶಾಖೆ ಹಾಗೂ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ನೂತನ ಕಛೇರಿಯನ್ನು ಉದ್ಘಾಟಿಸಿ ಪೂಜ್ಯ ಸ್ವಾಮೀಜಿಯವರಿಂದ ಆಶೀರ್ವಚನ
ಜ.21: “ಬದುಕಿನಲ್ಲಿ ಸಂಸ್ಕಾರ ಅತೀ ಅಗತ್ಯ. ಬಾಲ್ಯದಲ್ಲಿ ಸಂಸ್ಕಾರ ಸಿಕ್ಕಿದಾಗ ಬದುಕು ಹಸನಾಗುತ್ತದೆ. ನೆನಪಿನಲ್ಲಿ ಉಳಿಯುವ ದಿನ ಇದಾಗಿದೆ. ಸಹಕಾರಿ ಹಾಗೂ ಗ್ರಾಮ ವಿಕಾಸ ಯೋಜನೆ ಎರಡು ಕಣ್ಣುಗಳಿದ್ದಂತೆ. ಅವೆರಡರ ದೃಷ್ಟಿಯೂ ಒಂದೇ. ಅರ್ಪಣಾಭಾವದ ಸೇವೆ ನಮ್ಮದಾಗಬೇಕು. ಆಧ್ಯಾತ್ಮಿಕತೆ ಹಾಗೂ ಆರ್ಥಿಕತೆ ಒಂದಾದಾಗ ಬದುಕು ಸುಂದರವಾಗಲು ಸಾಧ್ಯ. ಗ್ರಾಮ ವಿಕಾಸವನ್ನು ಆರ್ಥಿಕವಾಗಿ ಮೇಲಕ್ಕೆತ್ತುವಲ್ಲಿ ಸಹಕಾರಿಯ ಪಾತ್ರ ಮಹತ್ವದ್ದು” ಎಂದು ಪೂಜ್ಯ ಸ್ವಾಮೀಜಿಯವರು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಒಡಿಯೂರು ಶಾಖೆ ಹಾಗೂ ಒಡಿಯೂರು ಶ್ರೀ ಚ್ಯಾರಿಟೇಬಲ್ ಟ್ರಸ್ಟ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ನೂತನ ಕಛೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾದ್ವಿ ಶ್ರೀ ಮಾತಾನಂದಮಯೀರವರು ಆಶೀರ್ವಚನ ನೀಡಿ “ತುಂಬಾ ಸಂತಸದ ವಾತಾವರಣ ಇದಾಗಿದೆ. ಪಾರಮಾರ್ಥಿಕ ಹಾಗೂ ಪ್ರಾಪಂಚಿಕ ಎರಡೂ ಸಮಾಜಕ್ಕೆ ಅತೀ ಅಗತ್ಯ. ಸುಸಂಸ್ಕøತ ವ್ಯಕ್ತಿಯಿಂದ ಸುಸಂಸ್ಕøತ ಸಮಾಜದ ನಿರ್ಮಾಣ ಸಾಧ್ಯ. ಸೇವೆಯಿಂದ ಮಾತ್ರ ಸಾರ್ಥಕ್ಯ ಪಡೆಯಲು ಸಾಧ್ಯ. ಒಗ್ಗಟ್ಟಿದ್ದರೆ ಯಶಸ್ಸು ಹೆಚ್ಚು” ಎಂದರು.
ಯಕ್ಷಧ್ರುವ ಪಟ್ಲ ಪೌಂಡೇಶನ್ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಲ| ಎ.ಸುರೇಶ್ ರೈ, ಮುಂಬೈ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಶ್ರೀ ಎ.ಸಿ.ಭಂಡಾರಿ, ನ್ಯಾಯವಾದಿ ಶ್ರೀ ರವೀಂದ್ರನಾಥ ಪಿ.ಎಸ್., ಪಂಜಾಜೆ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಅಶೋಕ್ ಕುಮಾರ್ ಎ., ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಪ್ರಗತಿಪರ ಕೃಷಿಕ ಶ್ರೀ ಮಹಾಬಲ ಭಟ್ ಕಾಡೂರು, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಶ್ರೀ ಕಿರಣ್ ಯು., ಉಡುಪಿ ವಲಯಾಧ್ಯಕ್ಷ ಶ್ರೀ ಪ್ರಭಾಕರ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್, ಶ್ರೀಮತಿ ಸುರೇಖ ಸುರೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರರತ್ನ ಪ್ರಶಸ್ತಿ ಪುರಸ್ಕøತ ಲ| ಎ.ಸುರೇಶ್ ರೈಯವರನ್ನು ಶ್ರೀ ಸಂಸ್ಥಾನದ ಸಹಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.ಸಂಘದ ನಿರ್ದೇಶಕ ಶ್ರೀ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಶ್ರೀ ದೇವಪ್ಪ ನಾಯ್ಕ ಬೆಟ್ಟಂಪಾಡಿ ವಂದಿಸಿದರು. ಶ್ರೀ ಲೋಕೇಶ್ ರೈ ಬಾಕ್ರಬೈಲು ಕಾರ್ಯಕ್ರಮ ನಿರೂಪಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top