+91 8255-266211
info@shreeodiyoor.org

ಮತ್ತೊಬ್ಬನನ್ನು ಅರಿಯುವ ಗೌರವಿಸುವ ಭಾವನೆ  ನಮ್ಮಲ್ಲಿ ಬೆಳೆದಾಗ ಬದುಕು ಸಾರ್ಥಕ

“ಮತ್ತೊಬ್ಬನನ್ನು ಅರಿಯುವ ಗೌರವಿಸುವ ಭಾವನೆ 
ನಮ್ಮಲ್ಲಿ ಬೆಳೆದಾಗ ಬದುಕು ಸಾರ್ಥಕ” 
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಮುಂಬಯಿ ಘಟಕದ 22ನೇ ವಾರ್ಷಿಕೋತ್ಸವ ಸಂಭ್ರಮ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಕುರ್ಲಾ, ಜು.23: “ಶ್ರೀ ಗುರುದೇವ ಸೇವಾ ಬಳಗವೆಂದರೆ  ಗುರು ಸೇವೆಯ ಮೂಲಕ ಸಮಾಜದ ಸೇವೆ ಮಾಡುವ ಬಳಗ. ಆ ಮನೋಭಾವದಿಂದ ಭಕ್ತರು ಒಡಿಯೂರು ಸಂಸ್ಥಾನವನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಹಲವಾರು ಯೋಜನೆಗಳು ಸಾಕಾರಗೊಳ್ಳುವಲ್ಲಿ ಮಹಾರಾಷ್ಟ್ರದ ಭಕ್ತರ ಕೊಡುಗೆ ಅಪಾರ. ಇಲ್ಲಿಯ ಯುವ ಬಳಗದವರು ಕೂಡ ದಾನ ರೂಪದ ದೇಣಿಗೆಯನ್ನು ಭಕ್ತಿಯಿಂದ ಸೇರಿಸಿಕೊಂಡು ಕ್ಷೇತ್ರಕ್ಕೆ ನೀಡುವ

ಮಾನವೀಯತೆಯ ಗುಣವನ್ನು ಬೆಳೆಸಿಕೊಂಡಿದ್ದಾರೆ. ಅಂತಹ ದೃಢ ಭಕ್ತಿ ಇದ್ದಾಗ ಮಾತ್ರ ನಾವು ಬೆಳೆಯುತ್ತೇವೆ, ಸಮಾಜ ಕೂಡ ಬೆಳೆಯುತ್ತದೆ. ಮತ್ತೊಬ್ಬನನ್ನು ಅರಿಯುವ, ಗೌರವಿಸುವ ಭಾವನೆ ನಮ್ಮಲ್ಲಿ  ಬೆಳೆದಾಗ ಬದುಕು ಸಾರ್ಥಕ” ಎಂದು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ, ಭಂಡಾರಿ ಆಡಿಟೋರಿಯಂನಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬಯಿ ಘಟಕದ 22ನೇ ವಾರ್ಷಿಕೋತ್ಸವ ಸಂಭ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

“ತಂತ್ರಜ್ಞಾನ ಎತ್ತರಕ್ಕೆ ಬೆಳೆದಿದೆ. ಆದರೆ ಅದರೊಂದಿಗೆ ತುಂಬಾ ತೊಂದರೆಗಳು ಕೂಡ ಎದುರಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸಂಸ್ಕೃತೀಯ ಅರಿವಿನ ಕೊರತೆಯಾಗಿದೆ. ಕೇವಲ ಜ್ಞಾನ ಇದ್ದರೆ ಸಾಲದು ಹೃದಯದಲ್ಲಿ ಪ್ರೀತಿ ಇರಬೇಕು. ಕೇಳುವ ಕಿವಿಗಳು, ದಾನ ಮಾಡುವ ಕೈಗಳು ಪರಿಶುದ್ಧವಿದ್ದಾಗ ಒಳ್ಳೆಯ ಮನುಷ್ಯನಾಗಿ ಬೆಳೆಯುವುದಕ್ಕೆ ಸಾಧ್ಯ. ಒಳ್ಳೆಯ ಕೆಲಸಗಳು ನಡೆಯುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಅದರಿಂದ ಭಗವಂತನ ಸೇವೆಯನ್ನು ಮಾಡಿದ ಆನಂದವಾಗುತ್ತದೆ. ಮುಂದಿನ ವರ್ಷ ಸೇವಾಬಳಗಕ್ಕೆ 25ನೇ ವರ್ಷದ ಸಂಭ್ರಮ. ಈ ಸಂಭ್ರಮ ಬಹಳ ಅರ್ಥಪೂರ್ಣವಾಗಿ ನಡೆಯುವಂತಾಗಲಿ. ಬದುಕನ್ನು ಒಳ್ಳೆಯ ರೀತಿಯಲ್ಲಿ ನಡೆಸುವುದಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು” ಎಂದರು.ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡುತ್ತಾ “ಉನ್ನತ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕದ ಚಿಂತನೇಯ ಮಾರ್ಗದರ್ಶನ ಇಲ್ಲದಿರುವುದರಿಂದ ಹಲವಾರು ಯುವ ಜನಾಂಗ ದಾರಿ ತಪ್ಪುವ ಜೊತೆಗೆ ಸಮಾಜಕ್ಕೆ ತೊಂದರೆಗಳನ್ನು ಎಸಗುತ್ತಿದ್ದಾರೆ. ಯುವಕರಿಗೆ ಸರಿಯಾದ ಬೋಧನೆಗಳು ಮನೆಯಲ್ಲಿ ನೀಡುವಂತಾಗಬೇಕು. ಇಲ್ಲದಿದ್ದಲ್ಲಿ ಅನಾಹುತಗಳು ಎದುರಾಗಬಹುದು. ಧರ್ಮಜಾಗೃತಿಯ ಜೊತೆಗೆ ಪ್ರತಿಯೊಬ್ಬರೂ ಉದ್ದಾರ ಆಗಬೇಕು, ಅದರೊಂದಿಗೆ ಸಮಾಜ ಕೂಡ ಬಲಿಷ್ಠವಾಗಬೇಕೆನ್ನುವ ಕನಸು ಪೂಜ್ಯ ಸ್ವಾಮೀಜಿಯವರದು. ಶ್ರೀ ವಜ್ರಮಾತ ಮಹಿಳಾವಿಕಾಸ ಕೇಂದ್ರದ ಸದಸ್ಯೆಯರು ಮುಂಬೈಯ ನಗರದ ಮನೆ ಮನೆಗಳಲ್ಲಿ ಭಜನೆ ಸತ್ಸಂಗದ ಮಾಡುವುದರಿಂದ ಮನೆಯವರಿಗೆ ಮತ್ತು ಮಕ್ಕಳಿಗೆ ಬಹಳಷ್ಟು ಪರಿಣಾಮಕಾರಿ ಆಗುತ್ತದೆ. ಅವರು ಧರ್ಮದ ಹಾದಿಯಲ್ಲಿ ನಡೆಯಲು ಇದು ಪ್ರೇರಣೆಯಾಗುತ್ತದೆ. ಶ್ರೀ ಸಂಸ್ಥಾನದ ಬೆಳವಣಿಗೆಗೆ ನಿಮ್ಮೆಲ್ಲರ ಭಕ್ತಿಯ ಸಹಕಾರ ಬೇಕಿದೆ” ಎಂದರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬಂಟರ ಸಂಘ, ಮುಂಬಯಿ ಇದರ ಅಧ್ಯಕ್ಷ ಶ್ರೀ ಚಂದ್ರಹಾಸ ಕೆ.ಶೆಟ್ಟಿ ಮಾತನಾಡುತ್ತಾ “ಪೂಜ್ಯ ಸ್ವಾಮೀಜಿಯವರ ಅರ್ಥಪೂರ್ಣವಾದ ಮಾತುಗಳು ಯುವಜನಾಂಗ ನಮ್ಮ ಭಾಷೆಯ ಮೇಲೆ, ಸಮಾಜದ ಮೇಲೆ ಅಭಿಮಾನ ಹೇಗೆ ಬೆಳೆಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ. ಬಂಟರ ಸಂಘ ಶಿಕ್ಷಣಕ್ಕಾಗಿ ಮಹತ್ವದ ಸೇವೆಗಳನ್ನು ಈ ನಗರದಲ್ಲಿ ಮಾಡಿದೆ. ಮುಂದೆ ಬೋರಿವಲಿ ಪರಿಸರದಲ್ಲಿ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡುವ ಶಾಲೆ ನಿರ್ಮಾಣ ಮಾಡುವುದಕ್ಕೆ ಎಲ್ಲ ಕೆಲಸ ಕಾರ್ಯಗಳು ನಡೆಯುತ್ತಿದೆ. ಪೂಜ್ಯ ಸ್ವಾಮೀಜಿಯವರ ಆಶೀರ್ವಾದ ಸದಾ ನಮ್ಮ ಸಂಸ್ಥೆ ಮೇಲೆ ಇರಲಿ” ಎಂದು ಆಶಿಸಿದರು.
 

ಇನ್ನೋರ್ವ ಅತಿಥಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಶ್ರೀ ಹರೀಶ್ ಜಿ. ಅಮೀನ್ ಮಾತನಾಡುತ್ತಾ “ಪೂಜ್ಯ ಸ್ವಾಮೀಜಿಯವರ ಆಧ್ಯಾತ್ಮಿಕದ ಚಿಂತನೆಗಳು, ಅವರ ಕಾರ್ಯಗಳು ಬಹಳ ಹತ್ತಿರದಿಂದ ತಿಳಿದುಕೊಂಡಿದ್ದೇನೆ. ಪೂಜ್ಯ ಸ್ವಾಮೀಜಿಯವರು ನೋಡುತ್ತಿರುವಾಗ ನಿತ್ಯಾನಂದ ಸ್ವಾಮಿಯನ್ನು ನೋಡಿದಂತೆ ಆಕರ್ಷಣೆಯಾಗಿರುತ್ತಾರೆ. ಬಿಲ್ಲವ ಭವನ ನಿರ್ಮಾಣ ಆಗುವ ಸಂದರ್ಭದಲ್ಲಿಯೂ ಪೂಜ್ಯ ಶ್ರೀಗಳವರ ಮಾರ್ಗದರ್ಶನ ನಮ್ಮ ಸಮಾಜಕ್ಕೆ ಲಭಿಸಿದೆ” ಎಂದು ನುಡಿದರು.ತುಂಗಾ ಗ್ರೂಫ್ಸ್ ಹೋಟೆಲ್‍ನ ಆಡಳಿತ ನಿರ್ದೇಶಕ ಶ್ರೀ ಸುಧಾಕರ್ ಹೆಗ್ಡೆ ಮಾತನಾಡುತ್ತಾ “ಗುರುದೇವರ ಪಾದಪೂಜೆ ಮಾಡಬೇಕೆನ್ನುವ ನನ್ನ ಆಸೆಗೆ ಈ ಬಳಗದ ಭಕ್ತರು ಅವಕಾಶ ಮಾಡಿಕೊಟ್ಟಿದ್ದಾರೆ. ಅದು ನನಗೆ ಬಹಳ ಸಂತೋಷವನ್ನು ನೀಡಿದೆ ಅವರ ಮಾತುಗಳು ಮತ್ತೆ ಮತ್ತೆ ಕೇಳುವ ಹಾಗೆ ಆನಂದವಾಗುತ್ತದೆ” ಎಂದು ನುಡಿದರು.ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಉಮಾ ಕೃಷ್ಣ ಶೆಟ್ಟಿ ಮಾತನಾಡುತ್ತಾ “ಪೂಜ್ಯ ಸ್ವಾಮೀಜಿಯವರು ಆಶೀರ್ವದಿಸಿದರೆ ನಮ್ಮ ಎಲ್ಲಾ ಕೆಲಸಗಳು ಪರಿಪೂರ್ಣವಾಗಿ ನಡೆಯುತ್ತದೆ. ಬಳಗದ ಮಹಿಳಾ ಸದಸ್ಯರು ಬಹಳ ಉತ್ತಮ ರೀತಿಯಲ್ಲಿ ಭಜನೆಯನ್ನು ಮಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಪೂಜ್ಯ ಸ್ವಾಮೀಜಿಯವರು ಕೇವಲ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿಲ್ಲ ಆ ಪರಿಸರದ ಎಲ್ಲಾ ಗ್ರಾಮಗಳನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವರ ಈ ಉತ್ತಮ ಸೇವಾ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸುವ. ಭಜನೆ ಮಾಡುವ ಬಾಯಿಯಂತೆ ದಾನ ಮಾಡುವ ಕೈಗಳೂ  ಶ್ರೇಷ್ಠವಂತೆ ಆದ್ದರಿಂದ ಉತ್ತಮ ಕಾರ್ಯ ಮಾಡಲು ದಾನ ರೂಪದ ದೇಣಿಗೆಯನ್ನು ನೀಡುವ ಮನಸ್ಸನ್ನು ಬೆಳೆಸುವ” ಎಂದು ನುಡಿದರು.ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀ ಸಿಎ| ಸುರೇಂದ್ರ ಶೆಟ್ಟಿಯವರು ಮಾತನಾಡಿ ಒಡಿಯೂರಿನಲ್ಲಿ ತುಳು ಭಾಷೆ, ಸಂಸ್ಕೃತಿ ಸಂಸ್ಕಾರಗಳು ಉಳಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಕೆಲಸ ನಡೆಯುತ್ತಿದೆ ಎನ್ನುವುದನ್ನು ನಾನು ಅರಿತುಕೊಂಡಿದ್ದೇನೆ. ಮಕ್ಕಳು ಮೊಬೈಲಿನಿಂದ ದೂರ ಇರಬೇಕಿದ್ದರೆ ಭಗವದ್ಗೀತೆಯನ್ನು ಓದುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ನಮ್ಮನ್ನು ಎಲ್ಲರನ್ನೂ ಅಂಧಕಾರದಿಂದ ಬೆಳಕಿನೆಡೆಗೆ ತರುವವರು ಸ್ವಾಮೀಜಿಯವರು. ಅವರ ಮಾರ್ಗದರ್ಶನವನ್ನು ನಾವು ಪಡೆದಾಗ ಬದುಕು ಸಾರ್ಥಕವಾಗುತ್ತದೆ” ಎಂದರು.ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಶ್ರೀ ರಘು ಮೂಲ್ಯ  ಪಾದೆಬೆಟ್ಟು ಮಾತನಾಡುತ್ತಾ “ಯುವಜನಾಂಗ ಈಗ ಸಂಘ ಸಂಸ್ಥೆಗಳಲ್ಲಿ  ತೊಡಗಿಸಿಕೊಳ್ಳುವುದು ಕಡಿಮೆಯಾಗುತ್ತಿದೆ. ಗುರುದೇವರ ಮಾರ್ಗದರ್ಶನದಲ್ಲಿ ಬಳಗದ ಯುವ ಸದಸ್ಯರು ಸುಮಾರು 7.50 ಲಕ್ಷ ರೂಪಾಯಿಯನ್ನು ಸಂಗ್ರಹಿಸಿ  ಕ್ಷೇತ್ರದಲ್ಲಿ ನಡೆಯುವ ಶಿಕ್ಷಣದ ಅಭಿವೃದ್ಧಿಗೆ ನೀಡಿದ್ದಾರೆ. ಇದು ಸಮಾಜಕ್ಕೆ ಆದರ್ಶವಾಗಿದೆ. ಪ್ರತಿ ಸಂಘ

ಸಂಸ್ಥೆಗಳಲ್ಲಿ ಯುವಸಮುದಾಯ ಮುಂದೆ ಬಂದಾಗ ಸಂಘ ಬಲಿಷ್ಠಗೊಳ್ಳಲು ಸಾಧ್ಯ. ಪೂಜ್ಯ ಸ್ವಾಮೀಜಿಯವರ ಆಧ್ಯಾತ್ಮಿಕದ ಸೇವಾಕಾರ್ಯಗಳಿಗೆ ನಾವೆಲ್ಲರೂ ಸಹಕಾರ ನೀಡುವ” ಎಂದು ನುಡಿದರು.ವೇದಿಕೆಯಲ್ಲಿ ನವಿಮುಂಬಯಿ ಡಿ. ವೈ. ಪಾಟೀಲ್ ಆಸ್ಪತ್ರೆಯ ಪ್ರಸಿದ್ಧ ವೈದ್ಯ ಡಾ| ಭಾಸ್ಕರ್ ಸೇಮಿತ, ಬಂಟರ ಸಂಘ ಮುಂಬೈಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಒಡಿಯೂರು  ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಘಟಕದ ಅಧ್ಯಕ್ಷ ಶ್ರೀ ದಾಮೋದರ್ ಎಸ್. ಶೆಟ್ಟಿ, ಒಡಿಯೂರು ಶ್ರೀ ವಜಮಾತಾ ಮಹಿಳಾ ವಿಕಾಸ ಕೇಂದ್ರ ಅಧ್ಯಕ್ಷೆ ಶ್ರೀಮತಿ ಶ್ವೇತಾ ಚಂದ್ರಾಹಾಸ ರೈ, ಒಡಿಯೂರು ಶ್ರೀ ಯುವ ಸೇವಾ ಬಳಗ ಅಧ್ಯಕ್ಷ  ಡಾ. ಅದೀಪ್ ಕೆ. ಶೆಟ್ಟಿ ಉಪಸ್ಥಿತರಿದ್ದರು.ತುಂಗಾ ಗ್ರೂಪ ಹೋಟೆಲ್‍ನ ಆಡಳಿತ ನಿರ್ದೇಶಕ ಶ್ರೀ ಸುಧಾಕರ್ ಹೆಗ್ಡೆ ಮತ್ತು ರಂಜನಿ ಸುಧಾಕರ್ ಹೆಗ್ಡೆ ದಂಪತಿ ಪಾದುಕಾರಾಧನೆಗೈದರು.ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಯುವ ಸೇವಾ ಬಳಗದ ಸದಸ್ಯರು ಶ್ರೀ ಸಂಸ್ಥಾನದ ಶಾಲಾಭಿವೃದ್ಧಿಗೆ ಸಂಗ್ರಹಿಸಿದ ಸುಮಾರು ಏಳುವರೆ ಲಕ್ಷ ರೂಪಾಯಿಯ ಚೆಕ್‍ನ್ನು ಸ್ವಾಮೀಜಿಗೆ ಸಮರ್ಪಿಸಿದರು.ಸಮಾರಂಭದಲ್ಲಿ ಸಾಹಿತಿ ಶ್ರೀಮತಿ ರಾಜಶ್ರೀ ಟಿ. ರೈ ಅವರ ತುಳು ಕಾದಂಬರಿ ‘ಮುಸ್ರಾಲೊ ಪಟ್ಟೊ’ ಇದರ ಮೊದಲ ಆವೃತ್ತಿಯನ್ನು ಪೂಜ್ಯ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ತುಳು ಭಾಷೆ ಮತ್ತು ಸಂಸ್ಕøತಿಯ ಸಮೃದ್ಧಿಯನ್ನು ಬಿಂಬಿಸುವ ಕಾದಂಬರಿ ‘ಮುಸ್ರಾಲ ಪಟ್ರೊ’ ಹಳೆಯ ತುಳುನಾಡಿನ ಸಾಮಾಜಿಕ ಸ್ಥಿತಿಗತಿ, ಧಣಿ-ಒಕ್ಕಲು, ಆಚರಣೆ, ಆರಾಧನೆ ಇತ್ಯಾದಿ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಕೃತಿಯಾಗಿದೆ. ಕಾರ್ಯಕ್ರಮವನ್ನು ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಶೆಟ್ಟಿ ನಿರೂಪಿಸಿ ವಂದಿಸಿದರು. ಶ್ರೀಮತಿ ಜಯಂತಿ ವಿಶ್ವನಾಥ ಬಂಗೇರ ಅವರು ಪ್ರಾರ್ಥನಾಗೀತೆ ಹಾಡಿದರು.ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಮುಂಬಯಿ ಇದರ ಕಲಾವಿದರಿಂದ ‘ಮಹಿಷಮರ್ದಿನಿ’ ಯಕ್ಷಗಾನ ಪ್ರದರ್ಶನಗೊಂಡಿತು. ಒಡಿಯೂರು ಶ್ರೀ ಯುವ ಸೇವಾ ಬಳಗದ ಅಧ್ಯಕ್ಷ  ಡಾ. ಅದೀಪ್ ಕೆ. ಶೆಟ್ಟಿ, ತಂಡದವರಿಂದ ಮಧ್ಯಾಹ್ನದಿಂದ ಸಂಜೆ ವರೆಗೆ ಉಚಿತ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಕಾರ್ಯಕ್ರಮವು ನಡೆಯಿತು. ಡಾ| ತೃಪ್ತಿ ಶೆಟ್ಟಿ, ಶ್ರೀ ದರ್ಶನ್ ಡಿ. ಶೆಟ್ಟಿ, ಕು| ಭಾರ್ಗವಿ ನೊಂಡ ಮತ್ತಿತರರು ಸಹಕರಿಸಿದರು.

 

‘ಆತ್ಮೋನ್ನತಿಯೊಂದಿಗೆ ಸಮಸ್ತ ಸಮಾಜದ ಹಿತದ ರಕ್ಷಣೆಯೂ ಯತಿವರರ ಕಾಯಕವಾಗಬೇಕು. ಹಾಗಾದರೆ ಅಂತಹ ರಾಷ್ಟ್ರ ಎಂದಿಗೂ ಸಾಂಸ್ಕ್ರತಿಕ ಚೈತನ್ಯದ ಕುಸಿತಕ್ಕೆ ಒಳಗಾಗುವುದಿಲ್ಲ. ತಾನು ಬದುಕಿ ಇತರರನ್ನು ಬದುಕಗೊಡುವ ಜೀವನ ಮಾರ್ಗದ ಶಿಕ್ಷಣ ಗುರುಪೀಠದಿಂದ ದೊರಕಬೇಕಾಗಿದೆ.’

 
Shree Gurudevananda Swamiji
Back To Top