+91 8255-266211
info@shreeodiyoor.org

“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” – ಒಡಿಯೂರು ಶ್ರೀ ಆಶೀರ್ವಚನ

“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” ಶ್ರೀ ದತ್ತ ಜಯಂತ್ಯುತ್ಸವ-ಹರಿಕಥಾ ಸತ್ಸಂಗ ಸಪ್ತಾಹ ಸಮಾರೋಪದಲ್ಲಿ ಒಡಿಯೂರು ಶ್ರೀ ಆಶೀರ್ವಚನ ದ. 18.: “ಗುರುದೇವರ ಜಯಂತಿ ಉತ್ಸವ ತತ್ತ್ವಾದರ್ಶಗಳಿಗೆ ಶಕ್ತಿ ತುಂಬಲಿದೆ. ಮೋಹ ಕ್ಷಯವಾಗದೆ ಮೋಕ್ಷ ಪ್ರಾಪ್ತಿಯಾಗದು. ದತ್ತತತ್ತ್ವ ಶ್ರೇಷ್ಠವಾದದ್ದು. ವಿಶ್ವಮಾನವಧರ್ಮದ ತತ್ತ್ವ ದತ್ತತತ್ತ್ವದಲ್ಲಿ ಅಡಗಿದೆ. ಭಾರತೀಯ ಸಂಸ್ಕøತಿ ಉಜ್ಜೀವನದ ಮೂಲ. ಆತ್ಮನಿಷ್ಠ ಸಂಸ್ಕøತಿ ಭಾರತೀಯತೆಯಲ್ಲಿ ಹುದುಗಿದೆ. ನಿಜವಾದ ಶಾಂತಿ ನಮ್ಮ ಹೃದಯದೊಳಡಗಿದೆ. ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ. ಷಷ್ಠ್ಯಬ್ದ ಸಂಭ್ರಮದ ಜ್ಞಾನವಾಹಿನಿಯ ಮೂಲಕ […]

Read More

ಸಾಧು ಸಮಾವೇಶ

“ಹಿಂದೂ ಸಮಾಜ ಮುನ್ನಡೆಯಲು ಮೂಲ ಕಾರಣವೇ ಸಂತರು” ಸಾಧು ಸಮಾವೇಶ-ಧರ್ಮಸಂದೇಶ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ದ.11: “ನಿಷ್ಕಲ್ಮಶ ಭಕ್ತಿಗೆ ಭಗವಂತನೊಲಿಯುತ್ತಾನೆ. ತುಳು ತೇರಿನ ಮೂಲಕ ತುಳುನಾಡಿಗೆ ಒಡಿಯೂರು ಶ್ರೀಗಳ ಕೊಡುಗೆ ಅಪಾರ. ತುಳುನಾಡಿಗೆ ಮೇರು ಕಿರೀಟವಿಡುವ ಕಾರ್ಯವಾಗಿದೆ. ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಪ್ರಸಿದ್ಧಿ ಪಡೆದಿರುವ ಒಡಿಯೂರು ಶ್ರೀಗಳಿಂದ ಇನ್ನಷ್ಟು ಸತ್ಕರ್ಮಗಳಾಗಲಿ. ಸಂತರಿಂದಾಗಿ ಇಂದು ಸಂಸ್ಕೃತಿ  ಉಳಿದಿದೆ. ಹಿಂದೂ ಸಮಾಜ ಮುನ್ನಡೆಯಲು ಮೂಲ ಕಾರಣವೇ ಎಲ್ಲಾ ಸಂತರು” ಎಂದು ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮಪೂಜ್ಯ ಶ್ರೀ […]

Read More

ರಾಜಾಂಗಣ ಲೋಕಾರ್ಪಣೆಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ

“ಒಡಿಯೂರು ಶ್ರೀಗಳವರು ತಾನೂ ಬೆಳಗುವುದರ ಜೊತೆಗೆ ಅನ್ಯರನ್ನು ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ” ರಾಜಾಂಗಣ ಲೋಕಾರ್ಪಣೆಗೈದ ಡಾ. ಡಿ. ವೀರೇಂದ್ರ ಹೆಗ್ಗಡೆ ದ.08: “ಸಾಧನೆ ನಮ್ಮ ಜೀವನದ ಆಯಸ್ಸಿನ ಗುಟ್ಟು. ಒಡಿಯೂರು ಶ್ರೀಗಳವರು ತಮ್ಮ ಸಾಧನೆಯ ಮೂಲಕ ಅಧ್ಯಾತ್ಮ ಸಂಪತ್ತನ್ನು ಸಂಪಾದಿಸಿದ್ದಾರೆ. ಇವರು ಪ್ರತಿಯೊಬ್ಬರಲ್ಲೂ ಭಗವಂತನನ್ನು ಕಾಣುತ್ತಾರೆ. ತಾನೂ ಬೆಳಗುವುದರ ಜೊತೆಗೆ ಅನ್ಯರನ್ನು ಬೆಳಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಗೆಯೇ ನಾವು ಸಹ ಅಧ್ಯಾತ್ಮ ಸಂಪತ್ತನ್ನು ಗಳಿಸಲು ಪ್ರಯತ್ನಪಡಬೇಕು. ಅಂತರಂಗದಲ್ಲಿ ಬೆಳಕನ್ನು ಕಂಡುಕೊಳ್ಳಬೇಕು. ಪ್ರತಿಯೊಬ್ಬರ ಅಂತರಂಗ ಬೆಳಗುವುದನ್ನು ಅರ್ಥಾತ್ ಅವರ […]

Read More

‘ಚಲನಶೀಲ ಬದುಕಿಗೆ ಆಧ್ಯಾತ್ಮದ ಬೆಳಕು ಅವಶ್ಯ’ – ಪೂಜ್ಯ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಕಾರ್ಯಕ್ರಮಗಳ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ

ಒಡಿಯೂರು, ನ.05: “ಜನಸೇವೆಯೇ ಜನಾರ್ದನ ಸೇವೆ. ಮನುಷ್ಯನ ಬದುಕಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯ ಮೌಲ್ಯವರ್ಧನೆಗೆ ಪೂರಕವಾಗಿ ಜ್ಞಾನವಾಹಿನಿ ನಿರಂತರ ನಡೆಯಲು ಚಾಲನೆ ನೀಡಿದ್ದೇವೆ. ಸುಖ-ದುಃಖವನ್ನು ಹಂಚಿ ಬಾಳಬೇಕು. ಇದರ ಸಮತೋಲನಕ್ಕೆ ಅಧ್ಯಾತ್ಮ ನಮಗೆ ಮುಖ್ಯ. ಚಲನಶೀಲ ಬದುಕಿಗೆ ಆಧ್ಯಾತ್ಮದ ಬೆಳಕು ಬೇಕು. ನಾವೆಲ್ಲರೂ ಒಂದೊಂದು ಬೆಳಕಾಗಬೇಕು. ಅಂಧಾಕಾರದ ಮಸಿಯನ್ನು ತೆಗೆದಾಗ ಅಧ್ಯಾತ್ಮದ ಬೆಳಕು ಬೆಳಗುತ್ತದೆ. ಜ್ಞಾನದ ಬೆಳಕು ಎಲ್ಲರಲ್ಲೂ ಬೆಳಗಲಿ” ಎಂದು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜರಗಿದ ಪೂಜ್ಯ ಒಡಿಯೂರು […]

Read More

“ಕರ್ತವ್ಯನಿಷ್ಠೆ ಸಾಧನೆಯ ಬದುಕಿಗೆ ಹೆದ್ದಾರಿ” – ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕøತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ

“ಭಜನೆ ಎಂದರೆ ಸಂಘಟನೆ ಅಥವಾ ಸೇರುವಿಕೆಯೇ ಆಗಿದೆ. ಭಜನೆ ಮಾಡುವ ಹೃದಯದಲ್ಲಿ ರಾಗ-ದ್ವೇಷಗಳಿರುವುದಿಲ್ಲ. ನಮ್ಮಲ್ಲಿ ಸಾತ್ವಿಕಭಾವವನ್ನು ಮೂಡಿಸುತ್ತದೆ. ಭಜನೆ ಮಾಡುವ ಮನೆ ಅಥವಾ ಊರಲ್ಲಿ ಶಾಂತಿ-ನೆಮ್ಮದಿ ಇರುವುದು. ಭಜನೆಯಲ್ಲಿನ ಸಾರವು ಬದುಕನ್ನೆ ಪರಿವರ್ತಿಸುತ್ತದೆ. ಅನ್ಯೋನ್ಯತೆ-ಆತ್ಮೀಯತೆ ಬೆಸೆಯಲು ಇದು ಪೂರಕ. ಯಾರಿಗೆ ಹೇಗೆ ಸಹಕಾರ ಮಾಡಬೇಕೆನ್ನುವ ವಿಚಾರವನ್ನು ಭಜನೆ ತಿಳಿಸುತ್ತದೆ. ನಮ್ಮ ಜೀವನದಲ್ಲಿ ಎಲ್ಲವನ್ನೂ ಪುನಃ ಪುನಃ ಪಡೆಯಬಹುದು. ಆದರೆ ಶರೀರವನ್ನು ಮತ್ತೆ ಮತ್ತೆ ಪಡೆಯಲಾಗದು. ಸದ್ವಿಚಾರಗಳು ಬದುಕನ್ನು ಸಂಪನ್ನವಾಗಿಸುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು […]

Read More

“ಶಿಬಿರಗಳಿಂದ ಜೀವನ ಮೌಲ್ಯಗಳು ವರ್ಧಿಸುವುದು” – ಒಡಿಯೂರು ಶ್ರೀ

“ಅರಳುವ ಪ್ರತಿಭೆಗಳಿಗೆ ಶಿಬಿರಗಳು ವೇದಿಕೆಯಾಗಲಿ. ಕೌಶಲ್ಯದಿಂದ ಜೀವನ ರೂಪುಗೊಂಡಾಗ ಬದುಕೊಂದು ಕಲೆಯಾಗುವುದು. ಆಗಲೇ ಬದುಕಿಗೆ ಬೆಲೆ ಬರುವುದು. ಅರ್ಥಾತ್ ಜೀವನ ಮೌಲ್ಯಗಳು ವರ್ಧಿಸುವುದು. ಶಿಬಿರಾರ್ಥಿಗಳು ಪರಿಮಳ ತುಂಬಿದ ಬಂಗಾರದ ಹೂವಿನಂತೆ ಅರಳಬೇಕು. ನಮ್ಮಲ್ಲಿ ಸತ್‍ಸಂಕಲ್ಪವಿದ್ದರೆ ಬದುಕೂ ಬಂಗಾರವಾಗುವುದು. ಈ ಮೂಲಕ ಭವ್ಯ ರಾಷ್ಟ್ರ ನಿರ್ಮಾಣದ ಸಂಕಲ್ಪವು ಸಾಕಾರಗೊಳ್ಳುವುದು.” ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಆಶ್ರಯದಲ್ಲಿ ಜರಗಿದ ಶರದೃತು ಸಂಸ್ಕಾರ […]

Read More

“ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶರದೃತು ಸಂಸ್ಕಾರ ಶಿಬಿರ 2021 ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ

ಅ.11: “ಮಕ್ಕಳೆಲ್ಲರೂ ಸಾಮಾನ್ಯರಲ್ಲ, ಅಸಾಮಾನ್ಯರು. ಭವ್ಯ ಭಾರತ ನಿರ್ಮಾಣದ ರೂವಾರಿಗಳು. ದೇಶ ಪ್ರೇಮ ಹೇಗೆ ಬೆಳೆಸಿಕೊಳ್ಳಬೇಕು? ಬದುಕನ್ನು ರೂಪಿಸಲು ಬೇಕಾದಂತಹ ವಿಚಾರಗಳು ತಿಳಿಯಬೇಕಾದರೆ ಸಂಸ್ಕಾರ ಶಿಕ್ಷಣ ಅಗತ್ಯ. ಆ ಮೂಲಕ ಆದರ್ಶ ರಾಷ್ಟ್ರ ನಿರ್ಮಾಣವಾಗಬಹುದು. ಸಂಸ್ಕøತಿಯ ಅಂತರ್ಯವೇ ಸಂಸ್ಕಾರ. ಮಾತು ಎಂದರೆ ವ್ಯಕ್ತಿತ್ವದ ಕೈಗನ್ನಡಿ. ವ್ಯಕ್ತಿತ್ವ ವಿಕಸನವೇ ಶಿಬಿರದ ಮುಖ್ಯ ಉದ್ದೇಶ. ಮಾತು ಮನಸ್ಸು ಹತ್ತಿರವಾಗಿರುವಂತದ್ದು. ಮನಸ್ಸಿನ ಭಾವನೆ ಮುಖದಲ್ಲಿ ಅನಾವರಣಗೊಳ್ಳುವುದು. ಹೃದಯದ ಮಾತಿನಿಂದ ಸಂತೋಷವಿದೆ. ಮುಗ್ಧ ಮನಸ್ಸಿಗೆ ಭಗವಂತನೂ ಮೆಚ್ಚಿಕೊಳ್ಳುತ್ತಾನೆ. ಅಂತಹ ಮನಸ್ಸನ್ನು ಮಕ್ಕಳಲ್ಲಿ ಕಾಣಬಹುದು. […]

Read More

ಮಾನವೀಯತೆಯ ಕೊಂಡಿ ಬಲಪಡಿಸುವ ಕಾರ್ಯವಾಗಬೇಕು

ಷಷ್ಠ್ಯಬ್ದ ಸಂಭ್ರಮ ಸಮಿತಿ, ಮಾಣಿ ವಲಯದ ಪ್ರಯುಕ್ತ ‘ಮನೆಗೊಂದು ಶ್ರೀಗಂಧದ ಸಸಿ – ಶ್ರೀಗಂಧ ಬೆಳೆಯೋಣ’ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಆಶೀರ್ವಚನ ಕೆದಿಲ, ಜು.25: “ನಿರ್ದಿಷ್ಟವಾದ ನಿಯಮಗಳನ್ನು ಪಾಲಿಸಿ ಬದುಕನ್ನು ರೂಪಿಸಬೇಕು. ಯುವಶಕ್ತಿ ಸದಾಚಾರದ ಒಲವನ್ನು ಹೊಂದಿದೆ. ಅದನ್ನು ಬೆಂಬಲಿಸಿ, ಸಮಾಜ ಪರಿವರ್ತನೆಯಾಗುವಂತೆ ಪ್ರೇರೇಪಿಸಬೇಕು. ಮಾನವೀಯತೆಯ ಕೊಂಡಿ ಸಡಿಲವಾಗಿದೆ. ಅದನ್ನು ಬಲಪಡಿಸುವ ಮಹತ್ ಕಾರ್ಯವಾಗಬೇಕು. ಸುಸಂಸ್ಕøತ ಸಮಾಜ ನಿರ್ಮಾಣವಾಗಬೇಕು. ಅರ್ಹರಿಗೆ ಉಪಕರಿಸಬೇಕು. ಹುಟ್ಟು-ಸಾವು ಜಗತ್ತಿನ ನಿಯಮ. ಆಯುಷ್ಯವಿರುವ ಪರಿಪೂರ್ಣ ಆರೋಗ್ಯ ಹೊಂದಿದ ವ್ಯಕ್ತಿಗೆ ಬದುಕನ್ನು ಶ್ರೇಷ್ಠವಾಗಿಸಲು ಸಾಧ್ಯವಾಗುತ್ತದೆ” […]

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top