+91 8255-266211
info@shreeodiyoor.org

ಗಣಪತಿಯ ಆರಾಧನೆ ಬುದ್ಧಿವಿಕಾಸಕ್ಕೆ ಪೂರಕ

“ಗಣಪತಿಯ ಆರಾಧನೆ ಬುದ್ಧಿವಿಕಾಸಕ್ಕೆ ಪೂರಕ” – ಒಡಿಯೂರು ಶ್ರೀ “ಜೀವನದ ಜೀವಾಳ ಜಲ. ಜಲತತ್ತ್ವಕ್ಕೆ ಅಧಿಪತಿ ಗಣಪತಿ. ಗಣಪತಿ ಮಗುವಿನಿಂದ ವೃದ್ಧರವರೆಗೆ ಎಲ್ಲರಿಗೂ ಸಂತೋಷ ಕೊಡುವ ದೇವರು. ಸಂತೋಷವೇ ನಮಗೆ ಸಂಪತ್ತು, ಆನಂದವೇ ಆಸ್ತಿ. ಅನುಗ್ರಹ ಮತ್ತು ನಿಗ್ರಹ ಶಕ್ತಿಯನ್ನು ಕರುಣಿಸುವ, ನಾಲ್ಕು ವೇದಗಳಲ್ಲಿಯೂ ಪೂಜೆ ಪಡೆಯುವ ದೇವನೇ ಗಜಾನನ. ಇವನ ಆರಾಧನೆ, ಸಾರ್ವಜನಿಕ ಪೂಜೆಗಳಿಂದ ಮಾನವೀಯ ಮೌಲ್ಯಗಳ ಉದ್ದೀಪನವಾಗುತ್ತದೆ. ಮಾನವ ಮಾನವ ಸಂಬಂಧದ ಬೆಸುಗೆ ಬಲಗೊಳ್ಳುತ್ತದೆ. ಗಣಪನ ಆರಾಧನೆಯಿಂದ ಬುದ್ಧಿ ವಿಕಾಸಕ್ಕೂ ಪೂರಕ” ಎಂದು ಪೂಜ್ಯ […]

Read More

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಿಕ್ಷಕರ ದಿನಾಚರಣೆ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಶಿಕ್ಷಕರೆಲ್ಲರೂ ಪುಷ್ಪಗಳನ್ನು ಅರ್ಪಿಸಿ ಗೌರವ ಸಲ್ಲಿಸಿ ಶಿಕ್ಷಕರ ದಿನ ಆಚರಿಸಲಾಯಿತು. ಶಾಲಾ ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್ ಇವರು ಪ್ರಸ್ತಾವನೆಗೈದು ಎಲ್ಲಾ ಶಿಕ್ಷಕ ವೃಂದದವರಿಗೆ ‘ಸಚಿತ್ರ ಶ್ರೀ ಗುರುಚರಿತಾಮೃತ’ ಕೃತಿಯನ್ನು ನೀಡಿದರು. ಶಾಲಾ ಶಿಕ್ಷಕ-ಶಿಕ್ಷಕಿಯರು ನಾಮಸಂಕೀರ್ತನೆಗೈದರು. ಶಾಲಾ ವಿದ್ಯಾರ್ಥಿಗಳು ಪುಷ್ಪಗುಚ್ಛ ನೀಡಿ ಶಿಕ್ಷಕವೃಂದದವರನ್ನು ಗೌರವಿಸಿದರು. ವಿದ್ಯಾರ್ಥಿಗಳಾದ ಶ್ರೀಜಿತ್, ಸ್ವಸ್ತಿಕ್ ಹಾಗೂ ವಿದ್ಯಾರ್ಥಿನಿ ಮೇಧಾ ಭಟ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಸಮೂಹಗಾನದ ಮೂಲಕ […]

Read More

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.31-08-2022 ನೇ ಬುಧವಾರ ಶ್ರೀ ಗಣೇಶ ಚತುರ್ಥಿಯಂದು ಪೂಜ್ಯ ಶ್ರೀಗಳವರ ದಿವ್ಯೋಪಸ್ಥಿತಿಯಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ಜರಗಲಿದೆ.

Read More

ಐ.ಟಿ.ಐ.ನ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ

“ಶಿಸ್ತು ಮತ್ತು ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ಸಾಧ್ಯ” ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ ಒಡಿಯೂರು ಶ್ರೀ ಆಶೀರ್ವಚನ “ನಮ್ಮನ್ನು ನಾವು ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಸಂಸ್ಕಾರಯತ ಜೀವನದಿಂದ ಆದರ್ಶ ಬದುಕು ನಮ್ಮದಾಗಬಹುದು. ಜೀವನದಲ್ಲಿ ಕೌಶಲ್ಯವೂ ಅಗತ್ಯ. ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ತರಬೇತಿಯ ಜೊತೆಗೆ ಕೌಶಲ್ಯವನ್ನು ಮೈಗೂಡಿಸಿಕೊಳ್ಳಿ. ಶಿಸ್ತು ಮತ್ತು ಶ್ರದ್ಧೆಯೊಂದಿಗೆ ಆತ್ಮವಿಶ್ವಾಸದಿಂದ ಧರ್ಮ ಮಾರ್ಗದಲ್ಲೇ ಜೀವನ ನಡೆಸಿದರೆ ಯಶಸ್ಸು ಸಾಧ್ಯ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ […]

Read More

ಮುದ್ದುಕೃಷ್ಣ ವೇಷಸ್ಪರ್ಧೆ

“ಕೃಷ್ಣವೇಷ ಹಾಕುವ ಜೊತೆಗೆ ಕೃಷ್ಣನ ಆದರ್ಶವನ್ನು ಬೆಳೆಸಬೇಕು” – ಒಡಿಯೂರು ಶ್ರೀ “ತಾಯಿ ಮಕ್ಕಳ ಸಂಬಂಧದ ವಿಚಾರಗಳನ್ನು ಕೃಷ್ಣಲೀಲೆ ತಿಳಿಸುತ್ತದೆ. ಇವರ ನಡುವಿನ ಪ್ರೀತಿಯಲ್ಲಿ ಯಾವುದೇ ಕಲ್ಮಶಗಳಿರುವುದಿಲ್ಲ. ನಾವು ಮಗುವಿನಿಂದ ಎಲ್ಲವನ್ನು ಕಲಿಯಬಹುದು. ಮಗುವಿನ ಮನಸ್ಸೂ ಹಾಗೆ ಪರಿಶುದ್ದವಾಗಿರುತ್ತದೆ. ಕೃಷ್ಣನ ಸಂದೇಶದಂತೆ ಅವರವರ ಮನಸ್ಸೇ ಮಿತ್ರರು ಮತ್ತು ಶತ್ರುಗಳು. ಸತ್ಸಂಗಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮನಸ್ಸಿನ ನಿಯಂತ್ರಣ ಸಾಧ್ಯ. ಆ ಮೂಲಕ ನಿಷ್ಕಲ್ಮಶಗಳೆಲ್ಲವೂ ದೂರಾಗಿ ನಮ್ಮ ದೇಹವೂ ಆಲಯವಾಗುವುದು. ಮಾನಸಿಕ, ಶಾರೀರಿಕ ಕ್ಷೋಭೆಗಳಿಗೆ ಪರಿಹಾರ ಶ್ರೀಮದ್ಭಗವದ್ಗೀತೆಯಲ್ಲಿದೆ. ವೇಷ ಹಾಕುವ […]

Read More

ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವ

“ನಾಗಾರಾಧನೆ ಪ್ರಕೃತಿಯ ಆರಾಧನೆ” ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ ಆ. 2: “ಇಹಪರದ ಸುಖಕ್ಕೆ ಧರ್ಮಮಾರ್ಗ ರಹದಾರಿ. ಪ್ರೀತಿಭಾವದ ಕೊರತೆ ನಮ್ಮಲ್ಲಿದೆ. ತಿಳುವಳಿಕೆಯ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ತಾಂಡವವಾಡುತ್ತಿದೆ. ಅಮೃತತ್ವವನ್ನು ಪಡೆಯುವುದೇ ನಮ್ಮ ಉದ್ದೇಶವಾಗಬೇಕು. ನಮ್ಮಲ್ಲಿರುವ ನಂಬಿಕೆಯೇ ನಮ್ಮನ್ನು ಮುನ್ನಡೆಸುವುದು. ಅದನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕು. ನಮ್ಮ ಕರ್ತವ್ಯದಲ್ಲಿ ಆತ್ಮತೃಪ್ತಿ ಬೇಕು. ನಾಗದೋಷಕ್ಕೆ ಯಾವುದೇ ಜಾತಿ ಬೇಧವಿಲ್ಲ. ಸಂಪತ್ತಿನ ಅಧಿಪತಿ ನಾಗರಾಜ. ಪ್ರಕೃತಿಯ ಉಳಿವು ನಾಗಾರಾಧನೆಯಿಂದಾಗುತ್ತದೆ. ಇದೊಂದು ಪ್ರಕೃತಿಯ ಆರಾಧನೆಯೇ. […]

Read More

ಕೆಸರ್‍ದ ಕಂಡೊಡೊಂಜಿ ದಿನ

“ಯುವಸಮೂಹ ಕೃಷಿ ಸಂಸ್ಕೃತಿಗೆ ಮನಮಾಡಬೇಕು” ಶ್ರೀ ಸಂಸ್ಥಾನದ ಸಾಗುವಳಿ ಭೂಮಿಯಲ್ಲಿ ‘ಕೆಸರ್‍ದ ಕಂಡೊಡೊಂಜಿ ದಿನ’ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಜು. 3: “ಮಣ್ಣು ಸಂಸ್ಕೃತಿಯ ಒಂದು ಭಾಗ. ಪ್ರಕೃತಿಯ ಆರಾಧನೆ, ಸಂರಕ್ಷಣೆ ಎಲ್ಲರಿಂದಲೂ ಆಗಬೇಕು. ಧರ್ಮ ಸಂರಕ್ಷಣೆಯ ವಿಚಾರದಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ. ಯುವ ಸಮೂಹ ಇಂತಹ ಚಟುವಟಿಕೆಗಳಿಗೆ ಮನಮಾಡಿ ತೊಡಗಿಸಿಕೊಳ್ಳುವಂತಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಜನ್ಮದಿನೋತ್ಸವ-ಗ್ರಾಮೋತ್ಸವ 2022ರ ಪ್ರಯುಕ್ತ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯು ಬನಾರಿ ಶ್ರೀ ಸಂಸ್ಥಾನದ ಸಾಗುವಳಿ […]

Read More

ಧೈರ್ಯದಿಂದ ಮುನ್ನಡೆದರೆ ಯಶಸ್ಸು ಖಂಡಿತ

“ಧೈರ್ಯದಿಂದ ಮುನ್ನಡೆದರೆ ಯಶಸ್ಸು ಖಂಡಿತ” ಜಿಲ್ಲಾ ಮಟ್ಟದ ಒಳಾಂಗಣ ಮತ್ತು ಹೊರಾಂಗಣ ಸ್ಪರ್ಧೆಗಳನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಜು. 30: “ಸಮಾಜದಲ್ಲಿ ಮನುಷ್ಯ ಶಾಂತಿ, ನೆಮ್ಮದಿಗೆ ಬಯಸುವ ಕಾಲ ಬಂದಿದೆ. ಅಂತರಂಗದ ಬಾಗಿಲು ತೆರೆಯಬೇಕು. ಅಲ್ಲಿ ಆನಂದದ ಸೆಲೆ ಇರುತ್ತದೆ. ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ನಡೆಯಬೇಕು. ಧೈರ್ಯದಿಂದ ಮುನ್ನಡೆದರೆ ಯಶಸ್ಸು ಸಾಧ್ಯ. ದುರ್ಘಟನೆಗಳು ನಡೆಯದಂತೆ ನಾವೆಲ್ಲರೂ ಜಾಗರೂಕರಾಗಬೇಕುÀ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಗ್ರಾಮೋತ್ಸವ 2022ರ ಪ್ರಯುಕ್ತ […]

Read More

ಯುವ ಸಮುದಾಯ ಜಾಗ್ರತರಾದಾಗ ದೇಶ ಸದೃಢ

“ಯುವ ಸಮುದಾಯ ಜಾಗ್ರತರಾದಾಗ ದೇಶ ಸದೃಢ” ಒಡಿಯೂರು ಶ್ರೀಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬಯಿ ಘಟಕದ 21ನೇ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಮುಂಬಯಿ, ಜು.24: “ಸುಖ ದುಃಖಗಳನ್ನು ಸಮತೋಲನದಲ್ಲಿಡಲು ಆಧ್ಯಾತ್ಮಿಕತೆ ಬೇಕು. ಸುಖವೆಂದರೆ ಮನಸ್ಸಿನ ಒಂದು ಸ್ಥಿತಿಯಾಗಿದೆ. ಮನಸ್ಸನ್ನು ಏಕಾಗ್ರತೆಯಲ್ಲಿಟ್ಟು ಆಧ್ಯಾತ್ಮಿಕದ ವಿಚಾರಧಾರೆಗಳನ್ನು ನಮ್ಮಲ್ಲಿ ಇರಿಸಿಕೊಂಡಾಗ ಧರ್ಮದ ಕಡೆಗೆ ನಡೆಯಲು ಸಾಧ್ಯವಾಗುತ್ತದೆ. ಯುವ ಸಮುದಾಯ ಜಾಗೃತರಾದಾಗ ದೇಶ ಸದೃಢವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕುರ್ಲಾ(ಪೂ.)ದ ಬಂಟರ […]

Read More

ಗ್ರಾಮೋತ್ಸವ 2022

“ಅರಿವಿನೊಂದಿಗೆ ಮಾಡುವ ಸೇವೆ ಭಗವಂತನಿಗೆ ಪ್ರಿಯ” ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ – ಗುರುವಂದನ ನೂತನ ಶ್ರೀ ಮಾತಾ ಅನ್ನಛತ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಸಂದೇಶ ಆ. 8: “ಅರಿತು ಮಾಡಿದ ಸೇವೆ ಅರ್ಥಪೂರ್ಣವಾಗಿರುತ್ತದೆ. ಅಹಂಕಾರ, ಮಮಕಾರವಿಲ್ಲದ ಸೇವೆ ಭಗವಂತನಿಗೆ ಸಲ್ಲುತ್ತದೆ. ಜ್ಞಾನಪೂರ್ಣತೆಯಿಂದ ಸಂಪತ್ತನ್ನು ಸದ್ವಿನಿಯೋಗಿಸಿದಾಗ ಅದಕ್ಕೆ ಮೌಲ್ಯ ತುಂಬುತ್ತದೆ. ತ್ಯಾಗ ತುಂಬಿದ ಸೇವೆ ದೇಶವನ್ನು ಬೆಳಗಿಸುತ್ತದೆ. ಇವು ಬದುಕಿನಲ್ಲಿ ಬಹುಮುಖ್ಯ. ಕ್ರಿಯಾಶೀಲರಾಗಿದ್ದಾಗಲೇ ಕ್ಷೇತ್ರಾಭಿವೃದ್ಧಿ ಕ್ಷಿಪ್ರವಾಗಿ ನಡೆಯುತ್ತದೆ. ಕ್ರಿಯಾಶೀಲರಾಗಿ ಕೆಲಸ ಮಾಡುವ ಮಂದಿ ನಮ್ಮೊಂದಿಗಿದ್ದರೆ […]

Read More

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top