ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಶಿಕ್ಷಕರೆಲ್ಲರೂ ಪುಷ್ಪಗಳನ್ನು ಅರ್ಪಿಸಿ ಗೌರವ ಸಲ್ಲಿಸಿ ಶಿಕ್ಷಕರ ದಿನ ಆಚರಿಸಲಾಯಿತು. ಶಾಲಾ ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್ ಇವರು ಪ್ರಸ್ತಾವನೆಗೈದು ಎಲ್ಲಾ ಶಿಕ್ಷಕ ವೃಂದದವರಿಗೆ ‘ಸಚಿತ್ರ ಶ್ರೀ ಗುರುಚರಿತಾಮೃತ’ ಕೃತಿಯನ್ನು ನೀಡಿದರು. ಶಾಲಾ ಶಿಕ್ಷಕ-ಶಿಕ್ಷಕಿಯರು ನಾಮಸಂಕೀರ್ತನೆಗೈದರು. ಶಾಲಾ ವಿದ್ಯಾರ್ಥಿಗಳು ಪುಷ್ಪಗುಚ್ಛ ನೀಡಿ ಶಿಕ್ಷಕವೃಂದದವರನ್ನು ಗೌರವಿಸಿದರು.
ವಿದ್ಯಾರ್ಥಿಗಳಾದ ಶ್ರೀಜಿತ್, ಸ್ವಸ್ತಿಕ್ ಹಾಗೂ ವಿದ್ಯಾರ್ಥಿನಿ ಮೇಧಾ ಭಟ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಸಮೂಹಗಾನದ ಮೂಲಕ ಗುರುವಂದನೆ ಸಲ್ಲಿಸಿದರು.
ಶಿಕ್ಷಕರಾದ ಶ್ರೀ ಶೇಖರ್ ಶೆಟ್ಟಿ, ಶಿಕ್ಷಕಿ ಗಂಗಾ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈ ಅವರು ಮಕ್ಕಳಿಗೆ ಹಿತನುಡಿಗಳನ್ನಾಡಿದರು.
ಕು| ಸಾನಿಧ್ಯ ಪಕಳ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ವೈಶಾಖ್ ಕಾರ್ಯಕ್ರಮ ನಿರೂಪಿಸಿ, ಶ್ರೀಕಾಂತ್ ಪಿ. ವಂದನಾರ್ಪಣೆಗೈದರು. ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.