Date : Sunday, 18-12-2022
“ಶಿಕ್ಷಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರಬೇಕು. ಆ ಮೂಲಕ ಧರ್ಮಪ್ರಜ್ಞೆಯೊಂದಿಗೆ ರಾಷ್ಟç ಕಟ್ಟುವ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಮಕ್ಕಳಲ್ಲಿ ರಾಷ್ಟ್ರಪ್ರಜ್ಞೆಯನ್ನು ಬೆಳೆಸುವ ಕಾರ್ಯದ ಅನಿವಾರ್ಯತೆ ಇದೆ. ಮಕ್ಕಳು ತಮ್ಮನ್ನು ತಾವೇ ರೂಪಿಸುವ ಶಿಲ್ಪಿಗಳಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು. ಪ್ರಾರಂಭದಲ್ಲಿ ಸಾಧ್ವಿ ಶ್ರೀ ಮಾತಾನಂದಮಯಿಯವರು ದೀಪೋಜ್ವಲನೆಗೈದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಸುಧಾ, ಕನ್ಯಾನ ಮತ್ತು ಮಿತ್ತನಡ್ಕ ಕ್ಲಸ್ಟರ್‌ನ […]
Read More
Date : Thursday, 06-10-2022
“ಮಾನವೀಯತೆ ಬೆಳೆದಾಗ ಮಾತ್ರ ಮನುಷ್ಯ ಮನುಷ್ಯನಾಗುತ್ತಾನೆ” – ಶರದೃತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ “ನಾವು ನಮ್ಮನ್ನು ಬೆಳೆಸಿಕೊಳ್ಳುವ ರೀತಿ-ನೀತಿಗಳಲ್ಲಿ ಬದಲಾವಣೆ ಬೇಕಾಗಿದೆ. ವ್ಯಕ್ತಿಗೆ ಉತ್ತಮ ಸಂಸ್ಕಾರ ಸಿಕ್ಕಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ಬದುಕುವುದು ಭಗವಂತನಿಗೆ ಪ್ರಿಯವಾಗುವುದು. ಮಾನವೀಯ ಮೌಲ್ಯದ ಅರಿವಿರಬೇಕು. ಮಾನವೀಯತೆ ಬೆಳೆದಾಗ ಮಾತ್ರ ಮನುಷ್ಯ ಮನುಷ್ಯನಾಗುತ್ತಾನೆ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ 6ನೇ ತರಗತಿಯಿಂದ […]
Read More
Date : Monday, 03-10-2022
“ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಾಗಬೇಕು. ನಾವು ಯಾರು ಎಂಬ ಅರಿವು ನಮ್ಮಲ್ಲಿ ಮೂಡಿದಾಗ ಬದುಕು ಸುಂದರವಾಗುವುದು. ವ್ಯಕ್ತಿತ್ವವಿಕಸನಕ್ಕೆ ಪೂರಕವಾದ ಇಂತಹ ಶಿಬಿರಗಳಿಂದ, ಸಾಹಿತ್ಯಗಳನ್ನು ಓದುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುವುದು. ಮನಸ್ಸು ಮತ್ತು ಶರೀರದ ಸ್ವಾಸ್ತ್ಯವನ್ನು ಕಾಪಿಡುವುದು ಯೋಗ. ಮನಸ್ಸೇ ನಮಗೆ ಶತ್ರು ಮತತು ಮಿತ್ರ. ಮಿತ್ರತ್ವವನ್ನು ಬೆಳೆಸಿಕೊಂಡಾಗ ಶತ್ರುಗಳಿರುವುದಿಲ್ಲ. ದೇಶಪ್ರೇಮದ ಜೊತೆಗೆ ಧರ್ಮಶ್ರದ್ಧೆಯು ಬೇಕು. ಶರದೃತುವಿನಲ್ಲಿ ಆಕಾಶ ಶುಭ್ರವಾಗಿರುವಂತೆ ನಮ್ಮ ಬದುಕು ಶುಭ್ರವಾಗಿರಬೇಕು. ಕ್ಷಣ ಕ್ಷಣಕ್ಕು ಕಲಿಯುವವರಾಗಬೇಕು. ಆಗ ಮಾತ್ರ ನಾವು ಸುದೃಢರಾಗಲು ಸಾಧ್ಯ” ಎಂದು ಪೂಜ್ಯ ಶ್ರೀ […]
Read More
Date : Saturday, 01-10-2022
ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಶರದೃತು ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿದೆ. ಯೋಗ, ಧ್ಯಾನ, ಪ್ರಾಣಾಯಾಮ, ಚಿತ್ರಕಲೆ, ರಂಗಭೂಮಿ, ಕಾಗದದ ರಚನೆಗಳು, ಮುಖವಾಡ ತಯಾರಿ, ಕವನ ರಚನೆ, ಸ್ವರಾನುಕರಣೆ ಮುಂತಾದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ತರಬೇತಿಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳ ಮೂಲಕ ನೀಡಲಾಗುವುದು.
Read More
Date : Friday, 16-09-2022
“ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜರಗಿದ ವಿಟ್ಲ ಮಲಯ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ಉದ್ಘಾಟಿಸಿ ಒಡಿಯೂರು ಶ್ರೀಗಳವರಿಂದ ಆಶೀರ್ವಚನ “ಪ್ರತಿಯೊಂದು ಮಗುವಿನ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ. ಎಲ್ಲರಲ್ಲೂ ಒಂದೇ ರೀತಿಯ ಪ್ರತಿಭೆಗಳಿರುವುದಿಲ್ಲ. ಪ್ರತಿಭೆಗಳು ಅರಳಲು ಇಂತಹ ವೇದಿಕೆ ಪೂರಕವಾಗಿದೆ. ಮಕ್ಕಳು ಜಗತ್ತನ್ನೇ ಬೆಳಗಿಸುವ ದೀಪಗಳಾಗಬೇಕು. ಸುಸಂಸ್ಕøತ ಶಿಕ್ಷಣದಿಂದ ನಾವೂ ಬದುಕುವ ಜೊತೆಗೆ ಅನ್ನರನ್ನೂ ಬದುಕಲು ಬಿಡುವುದು ಎಂಬ ಅರಿವು ಮೂಡುವುದು. ಸುಸಂಸ್ಕøತ ಜೀವನದಿಂದ ಬದುಕು ಆನಂದಮಯವಾಗುವುದು” ಎಂದು ಪರಮಪೂಜ್ಯ […]
Read More
Date : Friday, 09-09-2022
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಶಿಕ್ಷಕರೆಲ್ಲರೂ ಪುಷ್ಪಗಳನ್ನು ಅರ್ಪಿಸಿ ಗೌರವ ಸಲ್ಲಿಸಿ ಶಿಕ್ಷಕರ ದಿನ ಆಚರಿಸಲಾಯಿತು. ಶಾಲಾ ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್ ಇವರು ಪ್ರಸ್ತಾವನೆಗೈದು ಎಲ್ಲಾ ಶಿಕ್ಷಕ ವೃಂದದವರಿಗೆ ‘ಸಚಿತ್ರ ಶ್ರೀ ಗುರುಚರಿತಾಮೃತ’ ಕೃತಿಯನ್ನು ನೀಡಿದರು. ಶಾಲಾ ಶಿಕ್ಷಕ-ಶಿಕ್ಷಕಿಯರು ನಾಮಸಂಕೀರ್ತನೆಗೈದರು. ಶಾಲಾ ವಿದ್ಯಾರ್ಥಿಗಳು ಪುಷ್ಪಗುಚ್ಛ ನೀಡಿ ಶಿಕ್ಷಕವೃಂದದವರನ್ನು ಗೌರವಿಸಿದರು. ವಿದ್ಯಾರ್ಥಿಗಳಾದ ಶ್ರೀಜಿತ್, ಸ್ವಸ್ತಿಕ್ ಹಾಗೂ ವಿದ್ಯಾರ್ಥಿನಿ ಮೇಧಾ ಭಟ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಸಮೂಹಗಾನದ ಮೂಲಕ […]
Read More
Date : Friday, 26-08-2022
“ಶಿಸ್ತು ಮತ್ತು ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ಸಾಧ್ಯ” ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ ಒಡಿಯೂರು ಶ್ರೀ ಆಶೀರ್ವಚನ “ನಮ್ಮನ್ನು ನಾವು ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಸಂಸ್ಕಾರಯತ ಜೀವನದಿಂದ ಆದರ್ಶ ಬದುಕು ನಮ್ಮದಾಗಬಹುದು. ಜೀವನದಲ್ಲಿ ಕೌಶಲ್ಯವೂ ಅಗತ್ಯ. ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ತರಬೇತಿಯ ಜೊತೆಗೆ ಕೌಶಲ್ಯವನ್ನು ಮೈಗೂಡಿಸಿಕೊಳ್ಳಿ. ಶಿಸ್ತು ಮತ್ತು ಶ್ರದ್ಧೆಯೊಂದಿಗೆ ಆತ್ಮವಿಶ್ವಾಸದಿಂದ ಧರ್ಮ ಮಾರ್ಗದಲ್ಲೇ ಜೀವನ ನಡೆಸಿದರೆ ಯಶಸ್ಸು ಸಾಧ್ಯ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ […]
Read More
Date : Friday, 26-08-2022
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವ-ಅಮೃತ ಮಹೋತ್ಸವ ಆಚರಣೆಯಲ್ಲಿ ಒಡಿಯೂರು ಶ್ರೀ “ವಿಶ್ವಗುರು ಎಂದು ಮಾನ್ಯತೆ ಪಡೆದ ಭಾರತ ಶ್ರೇಯಸ್ಸಿನ ಮಾರ್ಗದ ಶ್ರೇಷ್ಠತೆಯ ಬಗ್ಗೆ ವಿಶ್ವಕ್ಕೆ ಕಲಿಸಿಕೊಟ್ಟಿದೆ. ದೇಶಕ್ಕೊಂದು ಸಂವಿಧಾನ ಇದ್ದಂತೆ ಬದುಕಿಗೂ ಸಂವಿಧಾನ ಬೇಕು. ಅದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರನ್ನು ಸ್ಮರಿಸುವುದು ಮತ್ತು ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಯುವ ಕಾರ್ಯ ನಡೆಯಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವ-ಅಮೃತ ಮಹೋತ್ಸವ […]
Read More
Date : Tuesday, 21-06-2022
“ಭಾರತ ವಿಶ್ವಕ್ಕೆ ಕೊಟ್ಟ ಕೊಡುಗೆಯೇ ಯೋಗ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜರಗಿದ ‘ವಿಶ್ವ ಯೋಗ ದಿನಾಚರಣೆ’ಯಲ್ಲಿ ಒಡಿಯೂರು ಶ್ರೀ ಆಶೀರ್ವಚನ “ಯೋಗ ಬಾಳನ್ನು ಬೆಳಗಿಸುವ ತತ್ತ್ವ. ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಿಡುವ ಜೊತೆಗೆ ಚಂಚಲ ಚಿತ್ತವನ್ನು ಏಕಾಗ್ರತೆಗೆ ತರಲು ಯೋಗಾಭ್ಯಾಸ ಅವಶ್ಯ. ನಿರಂತರ ಯೋಗಾಭ್ಯಾಸದಿಂದ ರೋಗವೂ ದೂರಾಗಿ ಆರೋಗ್ಯವಂತರಾಗಬಹುದು. ಭಾರತ ದೇಶ ವಿಶ್ವಕ್ಕೆ ಕೊಟ್ಟ ಮಹತ್ತರವಾದ ಕೊಡುಗೆಯೇ ಯೋಗ. ಭಗವದ್ಗೀತೆಯು ಯೋಗದ ಮಹತ್ತ್ವವನ್ನು ತಿಳಿಸುತ್ತದೆ. ಅಧ್ಯಾತ್ಮ ಜಾಗೃತಿಗೆ ಯೋಗ ಪೂರಕ. ಅಷ್ಟಾಂಗಯೋಗದ ಮೂಲಕ ಅಂತಃಕರಣಶುದ್ಧಿ […]
Read More
Date : Friday, 20-05-2022
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 2021-22ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ.ಯಲ್ಲಿ ಒಟ್ಟು 44 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಸುಮಾರು 24 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ 97.72% ಫಲಿಶಾಂಶ ದಾಖಲಿಸಿದೆ. ಕು| ಚೈತ್ರಲಕ್ಷ್ಮೀ 620 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾದರೆ, ಕು| ಕಿಶನ್‍ಕೃಷ್ಣ 613 ಅಂಕಗಳನ್ನು ಪಡೆದು ದ್ವಿತೀಯ ಹಾಗೂ ಕು| ತೇಜಸ್ ಕುಮಾರ್ 611 ಅಂಕಗಳನ್ನು ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.
Read More