“ಆರಾಧನೆಯ ಮೂಲಕ ಜೀವನದಲ್ಲಿ ನೆಮ್ಮದಿ ಮತ್ತುಸಂತೃಪ್ತಿ ಕಾಣಲು ಸಾಧ್ಯ”

ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗಿದಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವದ ಧರ್ಮಸಭೆಯಲ್ಲಿಪೂಜ್ಯ ಶ್ರೀಗಳವರಿಂದ ಧರ್ಮ ಸಂದೇಶ“ಅಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ. ಮನೆಯಿಂದಲೇ ಧರ್ಮ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ. ಜೀವನ ರಥ ಎಳೆಯುವುದು ಸುಲಭವಲ್ಲ. ಅದಕ್ಕೆ ದೈವೀಕೃಪೆ ಬೇಕು. ಆರಾಧನೆಯ ಮೂಲಕ ಜೀವನದಲ್ಲಿ ನೆಮ್ಮದಿ ಮತ್ತು ಸಂತೃಪ್ತಿ ಕಾಣಲು…









