“ಅತಿಯಾದುದಕ್ಕೆ ಇತಿ ಹಾಡಿದಾಗ ಜೀವನ ವಿಕಾಸ ಸಾಧ್ಯ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಅ.14: “ಇಂದು ದಿನ ವಿಶೇಷ. ಪೌರ್ಣಮಿ, ಸಂಕ್ರಮಣದ ಜೊತೆಗೆ ಜೀವನಮೌಲ್ಯವನ್ನು ಜಗತ್ತಿಗೆ ತಿಳಿಸಿದ ಮಹಾನ್ ಕವಿ ವಾಲ್ಮೀಕಿಯ ಜಯಂತಿ. ರಾಮಮಂತ್ರದ ಮಹಿಮೆಯನ್ನು ಅರಿತು ಶ್ರೀಮದ್ರಾಮಾಯಣ ಎಂಬ ಸಾರ್ವಕಾಲಿಕ ಮಹಾಕಾವ್ಯವನ್ನು ಜಗತ್ತಿಗೆ ನೀಡಿದವರು. ರಾಮಾಯಣ ಮತ್ತು ಮಹಾಭಾರತ ನಮ್ಮ ಬದುಕು ಹೇಗಿರಬೇಕೆಂಬುದನ್ನು ತಿಳಿಸುತ್ತದೆ. ನಾವೆಲ್ಲ…
