“ಲೋಕದ ಉನ್ನತಿಗೆ ಸಹಕಾರಿಯ ಪಾತ್ರ ಮಹತ್ತರವಾದುದು”

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನಸೆ.೧೯: “ಲೋಕದ ಉನ್ನತಿಗೆ ಸಹಕಾರಿಯ ಪಾತ್ರ ಮಹತ್ತರವಾದದ್ದಾಗಿದೆ. ಸ್ವಾಭಿಮಾನಿ ಬದುಕಿಗೆ ಬೆಳಕು ಚೆಲ್ಲುವ ಕಾರ್ಯ ಸಹಕಾರಿ ಸಂಘಗಳಿ0ದ ಆಗುತ್ತಿದೆ. ಸಹಕಾರಿ ತತ್ತ್ವವು ಜೀವನ ತತ್ತ್ವವಾಗಿದೆ. ಸಿಬ್ಬಂದಿಗಳ ನಗುಮುಖದ ಸೇವೆ, ಸದಸ್ಯರುಗಳ ಸಹಕಾರ ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿದೆ. ಸಹಕಾರಿಯು ಸಮಾಜಕ್ಕೆ ಮುಖ ಮಾಡಿರುವುದರಿಂದ…









