+91 8255-266211
info@shreeodiyoor.org

ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ, ಪುತ್ತೂರು ಘಟಕದ ಕಛೇರಿ ಉದ್ಘಾಟನೆ ಮತ್ತು ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ





“ಷಷ್ಟಬ್ದ ಸಂಭ್ರಮ ರಾಷ್ಟ್ರೋತ್ಥಾನಕ್ಕೆ ಮುನ್ನುಡಿಯಾಗಲಿ, ಸಂಸ್ಕøತಿಯ ವಾಹಿನಿಯಾಗಲಿ” –ಒಡಿಯೂರು

ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ, ಪುತ್ತೂರು ಘಟಕದ ಕಛೇರಿ ಉದ್ಘಾಟನೆ ಮತ್ತು ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ

ಪುತ್ತೂರು, ಜ.22: “ಜನಸೇವೆ, ಸಮಾಜಮುಖಿ ಚಟುವಟಿಕೆ ಹಮ್ಮಿಕೊಳ್ಳುವುದೇ ಷಷ್ಠ್ಯಬ್ದದ ಮೂಲ ಉದ್ದೇಶ. ಹಾಗಾಗಿ ಇದು ರಾಷ್ಟ್ರೋತ್ಥಾನಕ್ಕೆ ಮುನ್ನುಡಿಯಾಗುವ, ಸಂಸ್ಕøತಿಯನ್ನು ಪಸರಿಸುವ ವಾಹಿನಿಯಾಗಲಿ ಅನ್ನುವುದೇ ಅಪೇಕ್ಷೆ. ದುಶ್ಚಟಮುಕ್ತ, ಸುಸಂಸ್ಕøತ ಸಮಾಜ ನಿರ್ಮಾಣದೊಂದಿಗೆ ಧರ್ಮ-ಸಂಸ್ಕøತಿಯ ಕುರಿತು ಎಚ್ಚರಿಸುವ ಕಾರ್ಯಕ್ರಮವಾಗಿ ಷಷ್ಠ್ಯಬ್ದ ಸಂಭ್ರಮ ಮೂಡಿಬರಲಿ. ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಮನಸ್ಸಿನ ಸ್ವಚ್ಛತೆಯೂ ನಡೆಯಲಿ. ಎಲ್ಲವನ್ನು ತ್ಯಾಗ ಮಾಡಿ ಸನ್ಯಾಸತ್ವ ಸ್ವೀಕರಿಸುವ ಸಾಧು-ಸಂತರು ಸಮಾಜದ ಆಸ್ತಿ. ಭೋಗದ ಬದುಕು ಬದುಕಲ್ಲ; ತ್ಯಾಗದ ಜೀವನವೇ ಶಾಶ್ವತವಾದುದು. ಹಾಗಾಗಿ ಷಷ್ಠ್ಯಬ್ದ ಆಚರಣೆ ಸಮಾಜದಿಂದ ಸಮಾಜಕ್ಕೆ ಎನ್ನುವ ತತ್ತ್ವದಡಿ ರೂಪುಗೊಳ್ಳಬೇಕು ಎನ್ನುವ ಇರಾದೆ ನಮ್ಮದು. ಅದರಂತೆ ಷಷ್ಠ್ಯಬ್ದ ಆಚರಣೆಯು ತುಳು ಭಾಷೆ, ಸಂಸ್ಕøತಿ, ಕೃಷಿ ಹೀಗೆ ನಾನಾ ನೆಲೆಯಲ್ಲಿ ಬಿತ್ತರಿಸಲು ಸಮಿತಿ ಕಾರ್ಯಪ್ರವೃತ್ತವಾಗಿರುವುದು ಸಂತಸ ತಂದಿದೆ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪುತ್ತೂರು ದರ್ಬೆಯ ಪ್ರಶಾಂತ್ ಮಹಲ್‍ನ ಸಭಾಂಗಣದಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದಂಗವಾಗಿ ಜರಗಿದ ಪುತ್ತೂರು ಘಟಕದ ಕಛೇರಿ ಉದ್ಘಾಟನೆ ಹಾಗೂ ಸರಣಿ ಕಾರ್ಯಕ್ರಮಗಳ ಚಾಲನಾ ಸಮಾರಂಭದಲ್ಲಿ ಆಶೀರ್ವಚನಗೈದರು.
ಈ ಸುಸಂದರ್ಭ ಉಪಸ್ಥಿತರಿದ್ದ ಸಾಧ್ವಿ ಶ್ರೀ ಮಾತಾನಂದಮಯೀಯವರು ಹನುಮಾನ್ ಚಾಲೀಸ್ ಪಠಣ ಮಾಡಿ, ಆಶೀರ್ವಚನಗೈದು “ಸಂತನ ಬದುಕು ಲೋಕ ಹಿತಕ್ಕೆ ಅನ್ನುವುದನ್ನು ಪೂಜ್ಯ ಶ್ರೀಗಳವರು ಅನುಷ್ಠಾನಕ್ಕೆ ತಂದಿದ್ದು, ಸಮಾಜ ಕಲ್ಯಾಣಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದಾರೆ. ಷಷ್ಠ್ಯಬ್ದ ಸಂಭ್ರಮ ಸಮಾಜದಲ್ಲಿ ಜನಜಾಗೃತಿಯ ಜೊತೆಗೆ ಮನ ಜಾಗೃತಿ, ಸುಸಂಸ್ಕøತಿ ಮೇಳೈಸಲಿ” ಎಂದರು.
ಸಮಾರಂಭದ ಅಧ್ಯಕ್ಷ ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು ಅವರು ಮಾತನಾಡಿ “ಒಡಿಯೂರು ಶ್ರೀಗಳವರು ತುಳುನಾಡಿಗೋಸ್ಕರ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿನ ಸಾಮಾಜಿಕ ಅನಿಷ್ಠಗಳನ್ನು ಹೋಗಲಾಡಿಸುವಲ್ಲಿ ಶ್ರಮಿಸಿದ್ದಾರೆ. ಹಾಗಾಗಿ ಷಷ್ಠ್ಯಬ್ದ ಆಚರಣೆ ನಮ್ಮ ಸಂಭ್ರಮವಾಗಬೇಕು. ಅವರ ಆದರ್ಶಗಳು ಯುವಪೀಳಿಗೆಗೆ ಪ್ರೇರಣೆಯಾಗಬೇಕು” ಎಂದರು.
ಸರಣಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಸಹಾಯಕ ಆಯುಕ್ತ ಡಾ| ಯತೀಶ್ ಉಳ್ಳಾಲ್ “ಜನರಿಗೆ ಅಧ್ಯಾತ್ಮ ಸಾಧನೆಗೆ ಸಮಯಾವಕಾಶ, ತಾಳ್ಮೆಯ ಕೊರತೆ ಇದೆ. ಗುರುಗಳ ಸೇವೆಯ ಮೂಲಕ ಆ ಅನುಭೂತಿ ಪಡೆಯಲು ಒಂದು ಸದಾವಕಾಶವಾಗಿದೆ. ಸಮಾಜಮುಖಿ ಚಿಂತನೆಗಳು ಸಾಧು-ಸಂತರ ಮೂಲಕ ನಡೆಯುತ್ತಿದ್ದು, ಅವುಗಳು ಯುವಪೀಳಿಗೆಗೆ ಪ್ರೇರಣೆಯಾಗಬೇಕು. ಒಡಿಯೂರು ಶ್ರೀಗಳವರಿಗೆ ದೇಶದಾದ್ಯಂತ ಭಕ್ತ ಸಮೂಹವಿದ್ದು ಪೂಜ್ಯ ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು.
ಪುತ್ತೂರು ಘಟಕದ ಅಧ್ಯಕ್ಷ ಶ್ರೀ ಕೆ. ಸೀತಾರಾಮ ರೈ ಸವಣೂರು ಇವರು ಸ್ವಾಗತಿಸಿ “ಪೂಜ್ಯ ಶ್ರೀಗಳವರಿಗೆ 60 ಸಂವತ್ಸರ ತುಂಬಿದ ಸಂಭ್ರಮದ ಪ್ರಯುಕ್ತ 60 ಕಾರ್ಯಕ್ರಮಗಳನ್ನು ಅನುಷ್ಠಾನಿಸಲು ನಿರ್ಧರಿಸಲಾಗಿದೆ. ಈಗಾಗಲೇ 10 ಕಾರ್ಯಕ್ರಮಗಳು ನಡೆದಿವೆ. ಮೇ 2ರಂದು ಪುತ್ತೂರಿನಲ್ಲಿ ತುಳು ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ” ಎಂದರು.
ವೇದಿಕೆಯಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಮಾಜಿ ಶಾಸಕಿ ಶ್ರೀ ಶಕುಂತಳಾ ಟಿ. ಶೆಟ್ಟಿ, ಪುತ್ತೂರು ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಅರುಣ್‍ಕುಮಾರ್ ಪುತ್ತಿಲ, ಕಾರ್ಯಾಧ್ಯಕ್ಷ ಶ್ರೀ ಸಹಜ್ ರೈ ಬಳಜ್ಜ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ ವಂದಿಸಿ, ಕೋಶಾಧಿಕಾರಿ ನ್ಯಾಯವಾದಿ ಶ್ರೀ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮೊದಲಿಗೆ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುತ್ತೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.

 

The divine power, success, achievements, sacrifice, courage, spirituality, social thinking and humble service of his holiness have contributed a lot to the success of the Shree Samsthanam.

 
Shree Gurudevananda Swamiji
Back To Top