Date : Monday, 15-02-2021
ಜ. 29: ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ 2021 – ಜ್ಞಾನವಾಹಿನಿ ಕಾರ್ಯಕ್ರಮದ ಕಾಸರಗೋಡು ವಲಯ ಸಮಿತಿ ಮತ್ತು ಸರಣಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಸಭಾಮಂಟಪದಲ್ಲಿ ಜರಗಿತು.ಕಾರ್ಯಕ್ರಮಕ್ಕೆ ಪೂಜ್ಯ ಸ್ವಾಮೀಜಿಗಳವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಸಮಿತಿ ಮತ್ತು ಸರಣಿ ಕಾರ್ಯಕ್ರಮವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಚಾಲನೆ ನೀಡಿ ಆಶೀರ್ವಚನಗೈದರು. ಇದೇ […]
Read More
Date : Monday, 15-02-2021
ಮಂಗಳೂರು, ಜ. 16: “ಪರೋಪಕಾರದ ಗುಣವನ್ನು ರೂಢಿಸಿಕೊಂಡು ಸೇವಾಕಾರ್ಐದಲ್ಲಿ ತೊಡಗಿಸಿಕೊಂಡಾಗ ಬದುಕು ಸಾರ್ಥಕ್ಯವನ್ನು ಪಡೆಯುತ್ತದೆ. ತ್ಯಾಗ ಸೇವಯಲ್ಲಿ ಬದುಕಿನ ಶಾಶ್ವತ ಸುಖ ಅಡಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ನಗರದ ಪುರಭವನದಲ್ಲಿ ಜರಗಿದ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮಂಗಳೂರು ನಗರ ಸಮಿತಿಯ ಪಂಚ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀರ್ವಚನಗೈದರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀರಾಮ ತಾರಕ ಮಂತ್ರ ಹಾಗೂ ಹನುಮಾನ್ ಚಾಲೀಸಾ ಪಠಣ ನೆರವೇರಿಸಿದರು. ಶಾಸಕ ಶ್ರೀ ವೇದವ್ಯಾಸ ಕಾಮತ್ ಅಧ್ಯಕ್ಷತೆ […]
Read More
Date : Monday, 04-01-2021
“ಆದಿಗುರು ದತ್ತಾತ್ರೇಯರು ವಿಶ್ವ ಮಾನವ ಧರ್ಮವನ್ನು ಜಗತ್ತಿಗೆ ಪಸರಿಸಿದವರು. ದತ್ತ ತತ್ತ್ವದ ಚಿಂತನೆ ಪಾಲನೆಯಿಂದ ಸಮರಸದ ಜೀವನ ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಿದ ಶ್ರೀ ದತ್ತ ಜಯಂತ್ಯುತ್ಸವದ ಧರ್ಮಸಭೆಯಲ್ಲಿ ಸಂದೇಶ ನೀಡಿದರು. ಅವರು ಪ್ರೊ. ವಿ.ಬಿ. ಅರ್ತಿಕಜೆಯವರು ಕನ್ನಡಕ್ಕೆ ಅನುವಾದಿಸಿದ ‘ಶ್ರೀ ದತ್ತಾಂಜನೇಯ ಸಹಸ್ರನಾಮ’ ಪುಸ್ತಕವನ್ನು ಲೋಕಾರ್ಪಣೆಗೈದು “ಭಾರತೀಯ ಪದ್ಧತಿಯಂತೆ ಆಹಾರ ಅನುಸರಿಸುವವರಿಗೆ ಯಾವ ರೋಗಾಣುವೂ ಬಾಧಿಸದು. ಅಧ್ಯಾತ್ಮದ ಕೊನೆ ಆನಂದದಲ್ಲಿದ್ದು, ಸಾಧಕರಿಗೆ ಕ್ಷಮಾಗುಣ ದಾರಿದೀಪ […]
Read More
Date : Friday, 13-11-2020
ದೀಪದ ಆರಾಧನೆ ದೀಪೋತ್ಸವ. ಬದುಕೇ ದೀಪೋತ್ಸವ ಆಗಬೇಕು. ಅಂತರ್ಜ್ಯೋತಿ ಬೆಳಗಿದರೆ ನಮ್ಮಲ್ಲಿ ಹುದುಗಿರುವ ಅಸುರ ಶಕ್ತಿಯೆಂಬ ಅಂಧÀಕಾರ ನೀಗಿ ಜ್ಞಾನದ ಬೆಳಕು ಮೂಡಿ ಬರಲು ಸಾಧ್ಯ. ಬೆಳಕಿಲ್ಲದೆ ಕತ್ತಲಿಲ್ಲ, ಕತ್ತಲಿಲ್ಲದೆ ಬೆಳಕಿಲ್ಲ. ಬೆಳಕಿನ ದೀಪ ಬೆಳಗಿಸಲು ಕತ್ತಲು ಬೇಕು. ಅಂಧಕಾರವನ್ನು ಓಡಿಸಲು ಬೆಳಕು ಬೇಕು. ಆ ಬೆಳಕು ಎಂಬ ಶಕ್ತಿ ಪ್ರತಿಯೋರ್ವನ ದೇಹದ ಒಳಗೂ ಇದೆ ಹೊರಗೂ ಇದೆ. ನಮ್ಮಲ್ಲಿರುವ ಬೆಳಕು ಎಂಬ ತೇಜಸ್ಸನ್ನು ಮತ್ತಷ್ಟು ಪ್ರಕಾಶಿಸುವಂತೆ ಮಾಡುವುದೇ ನಮ್ಮ ಕರ್ತವ್ಯ. ಅಂತರಂಗದ ಬೆಳಕಿನೊಂದಿಗೆ ಬಹಿರಂಗದ ತೇಜಸ್ಸಿನ […]
Read More
Date : Thursday, 12-11-2020
“ಸಮುದ್ರ ಮಥನ ಸಮಯದಲ್ಲಿ ಅವತರಿಸಿದ ಶ್ರೀ ಧನ್ವಂತರೀ ದೇವರ ಆರಾಧನೆಯಿಂದ ಸರ್ವರೋಗ ನಿವಾರಣೆಯಾಗುತ್ತದೆ. ಆರೋಗ್ಯಪೂರ್ಣ ಬದುಕಿಗೆ ಭಗವದಾರಾಧನೆಯ ಅಗತ್ಯವಿದೆ. ನೈತಿಕ ಸ್ವಾಸ್ಥ್ಯ, ಸಮಾಜದ ಸ್ವಾಸ್ಥ್ಯಕ್ಕೆ ಆರಾಧನೆಗಳು ಪೂರಕ. ಶ್ರೀ ಧನ್ವಂತರೀ ದೇವರ ಆರಾಧನೆಯ ಮೂಲಕ ಕೊರೋನಾ ಮಹಾಮಾರಿಯಿಂದ ಜಗತ್ತೇ ಮುಕ್ತಿಹೊಂದಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಜಯಂತಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಜರಗಿದ ಶ್ರೀ ಧನ್ವಂತರೀ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದ ಪೂಜ್ಯ ಶ್ರೀಗಳವರು […]
Read More
Date : Tuesday, 13-10-2020
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅಕ್ಟೋಬರ 20ರಂದು ಮಂಗಳವಾರ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ – ಶ್ರೀ ಚಂಡಿಕಾ ಯಾಗವು ನಡೆಯಲಿರುವುದು. ಬೆಳಿಗ್ಗೆ ಮಂಗಳಾರತಿಯ ಬಳಿಕ ಶ್ರೀ ನಾಗದೇವರಿಗೆ ನಾಗತಂಬಿಲ. ಗಂಟೆ 9.30ಕ್ಕೆ ಶ್ರೀ ಚಂಡಿಕಾ ಯಾಗವು ಆರಂಭಗೊಂಡು ಮಧ್ಯಾಹ್ನ ಗಂಟೆ 12.00ಕ್ಕೆ ಯಾಗದ ಪೂರ್ಣಾಹುತಿ, ಮಹಾಮಂಗಳಾರತಿ, ಆರಾಧ್ಯದೇವರಿಗೆ ಮಹಾಪೂಜೆ. ಅಪರಾಹ್ಣ ಗಂಟೆ 2.30ರಿಂದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶ್ರೀ ಡಿ. […]
Read More
Date : Wednesday, 26-08-2020
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ವೇ| ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ನಡೆಯಿತು. ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.
Read More
Date : Thursday, 06-08-2020
ಕೋಟಿ ಕೋಟಿ ಭಾರತೀಯರ ಕನಸಾದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿಪೂಜೆ ಸಂಪನ್ನಗೊಳ್ಳುತ್ತಿರುವ ಐತಿಹಾಸಿಕ ಸುಮುಹೂರ್ತದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು “ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲಿ, ಈ ಐತಿಹಾಸಿಕ ದಿನದ ಸವಿನೆನಪಿಗಾಗಿ ಒಡಿಯೂರು ಶ್ರೀ ಸಂಸ್ಥಾನದ ಪರಿಸರದಲ್ಲಿ ‘ಕದಂಬವನ’ವನ್ನು ನಿರ್ಮಿಸಲು ಚಾಲನೆ ನೀಡಿ, ಪ್ರಕೃತಿ ಸಂರಕ್ಷಣೆಯ ಸಂಕಲ್ಪ ಮಾಡಿ” ಅನುಗ್ರಹ ಸಂದೇಶವಿತ್ತರು. ಸಾಧ್ವಿ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ ವಜ್ರಮಾತಾ […]
Read More
Date : Monday, 03-08-2020
“ಸಂಪತ್ತು ಎಂದರೆ ಹಣ ಮಾತ್ರವಲ್ಲ. ಇದರಲ್ಲಿ ಅಷ್ಟ ಐಶ್ವರ್ಯಗಳು ಸೇರಿವೆ. ಸಂಪತ್ತಿನ ಅಧಿದೇವತೆ ಲಕ್ಷ್ಮೀ. ಸಂಪತ್ತನ್ನು ಹೇಗೆ ಬಳಸಬೇಕೆಂಬುದನ್ನು ಅಧ್ಯಾತ್ಮಿಕತೆ ತಿಳಿಸುತ್ತದೆ. ಧರ್ಮಪ್ರಜ್ಞೆಯ ಸಂಪತ್ತಿನೊಂದಿಗೆ ಜ್ಞಾನವೂ ನಮ್ಮಲ್ಲಿ ಇರಬೇಕು. ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾ ಶಕ್ತಿಗಳು ಸೇರಿಕೊಂಡಾಗ ಜೀವನಮೌಲ್ಯ ವೃದ್ಧಿಸುತ್ತದೆ. ಶ್ರಾವಣ ಮಾಸದ ಮೊದಲ ಶುಕ್ರವಾರ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆಯನ್ನು ಆಚರಿಸುವುದು ವಾಡಿಕೆ. ಇಂತಹ ಆಚರಣೆಗಳು ರಾಷ್ಟ್ರೀಯ ಭಾವನೆಯನ್ನು ಮೂಡಿಸುತ್ತದೆ. ಸಮುದ್ರ ಮಥನದಿಂದ ವಿಷ-ಅಮೃತ ಇತ್ಯಾದಿ ದೊರೆತಂತೆ ಬದುಕಿನ ಮಂಥನದಿಂದ ಸುಖ-ದುಃಖಗಳು ಪ್ರಾಪ್ತವಾಗುತ್ತವೆ. ತಾನೂ ಬದುಕಿ ಇತರರನ್ನು ಬದುಕಬಿಡುವುದೇ […]
Read More
Date : Wednesday, 15-07-2020
ಒಡಿಯೂರು ಶ್ರೀ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಜನ್ಮದಿನೋತ್ಸವವನ್ನು (ಜುಲೈ 17, 2020) ಗುರುಬಂಧುಗಳು ಮನೆ-ಮನಗಳಲ್ಲಿ ಗುರುವಂದನೆಯನ್ನು ನಡೆಸುವ ಮೂಲಕ ಪೂಜ್ಯ ಶ್ರೀಗಳವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯು ಪ್ರಕಟಣೆ ನೀಡಿದೆ. ಗುರುಬಂಧುಗಳು ತಮ್ಮ ಆರೋಗ್ಯವನ್ನು ಕಾಯ್ದುಕೊಂಡು ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪೂಜ್ಯ ಶ್ರೀಗಳವರು ಕರೆ ನೀಡಿದ್ದಾರೆ. ಮಹಾಮಾರಿಯ ಬಗ್ಗೆ ಭಯ ಪಡದೆ ನಿರ್ಭೀತರಾಗಿ, ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು, ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸರಕಾರದ ನಿಯಮಗಳಿಗೆ ಬದ್ಧರಾಗಿ ತಾನು ಬದುಕಿ ಇತರರನ್ನು ಬದುಕಬಿಡೋಣ […]
Read More