ನೆರುಲ್ ಶ್ರೀ ಶನಿಮಂದಿರದಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮುಂಬೈ ಸಮಿತಿಯ ಸರಣಿ ಕಾರ್ಯಕ್ರಮದ ಸಮಾರೋಪ
“ಮನುಷ್ಯ ಜೀವನದ ಸಾರ್ಥಕ್ಯದಲ್ಲಿ ಗುರುಗಳು ದೀಪವಿದ್ದಂತೆ” – ವಿದ್ವಾನ್ ಕೈರೆಬೆಟ್ಟು ವಿಶ್ವನಾಥ ಭಟ್ ಆಶಯ ನೆರುಲ್, ಆ. 5: “ಗುರುಗಳು ನಮಗೆ ಭಗವಂತನನ್ನು ಕಾಣುವುದಕ್ಕೆ ಒಂದು ನಿಮಿತ್ತ ಮಾತ್ರ. ಹೇಗೆ ಕತ್ತಲೆ ಇದ್ದಾಗ ಒಂದು ದೀಪದ ಬೆಳಕಿನಲ್ಲಿ ನಾವು ವಸ್ತುಗಳನ್ನೆಲ್ಲಾ ನೋಡುತ್ತೇವೆಯೋ ಅಂತೆಯೇ ಈ ಪ್ರಪಂಚ ಎನ್ನುವ ವಸ್ತುಗಳನ್ನು, ಈ ಜೀವನದ ರಹಸ್ಯಗಳನ್ನು ನಾವು ನೋಡುವರೇ…