ಆಮಂತ್ರಣ – ಶ್ರೀ ಒಡಿಯೂರು ರಥೋತ್ಸವ | ತುಳುನಾಡ ಜಾತ್ರೆ

Shree Dattanjaneya Kshetra, Dakshina Ganagapura
Shree Dattanjaneya Kshetra, Dakshina Ganagapura
ವಿಟ್ಲ: ಸಂತ ಸಮಾಜಮುಖಿಯಾಗಿದ್ದಾಗ ಎಲ್ಲರಿಗೆ ಹಿತವಾಗುತ್ತದೆ. ದೀನರ ಸೇವೆಯಿಂದ ಭಗವಂತ ಸಂತೃಪ್ತನಾಗಿ ಅನುಗ್ರಹಿಸುತ್ತಾನೆ. ಭಾವನೆ ತುಂಬಿಕೊಂಡ ಸಂಗೀತ ಸಾಹಿತ್ಯ ಸೇರಿಕೊಂಡು ಭಾರತವಾಗಿದೆ. ನಮ್ಮ ಎಂಬ ಭಾವನೆಯಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಆಧ್ಯಾತ್ಮವಿದ್ದಲ್ಲಿ ದ್ವೇಷಭಾವ ಇರಲು ಸಾಧ್ಯವಿಲ್ಲ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಶ್ರೀ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ…
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದ.ಕ. ವಿಟ್ಲ ಸ್ಥಳೀಯ ಸಂಸ್ಥೆಯ ಉತ್ಸವ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.22: “ನಮ್ಮ ಬದುಕಿನಲ್ಲಿ ಶಿಸ್ತು ವಿಶೇಷವಾದ ಪಾತ್ರವನ್ನು ವಹಿಸುತ್ತದೆ; ವಹಿಸಬೇಕು. ಶಿಸ್ತಿನಿಂದಲೇ ಸ್ವಸ್ತಿ. ಶಿಸ್ತು ಇಲ್ಲದಿದ್ದರೆ ಬದುಕು ಬದುಕಾಗುವುದಿಲ್ಲ. ಬದುಕು ನಿಂತ ನೀರಾಗದೆ ನಿರಂತರ ಹರಿಯುವಂತಾಗಬೇಕು. ಬದುಕು ಸುಸೂತ್ರವಾಗಿ ನಡೆಯಬೇಕಿದ್ದರೆ ವ್ಯಕ್ತಿಯಲ್ಲಿ ವ್ಯಕ್ತಿತ್ವ ತುಂಬಿರಬೇಕು. ವ್ಯಕ್ತಿತ್ವವನ್ನು…
ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಮಾಪ್ತಿಯ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ ದ.೧೪: “ಪಾಶ್ಚಾತ್ಯ ಸಂಸ್ಕೃತಿ ನಮ್ಮಲ್ಲಿ ವ್ಯಾಪಕವಾಗುತ್ತಿದೆ. ಅವೆಲ್ಲವನ್ನು ಸರಿಪಡಿಸುವ ಕೆಲಸವಾಗಬೇಕು. ನಮ್ಮಲ್ಲಿರುವ ಅಹಂ ದೂರವಾಗಬೇಕು. ನಾನು ಎನ್ನುವ ಭಾವ ದೂರವಾಗಿ ನಮ್ಮದೆನ್ನುವ ಭಾವ ಎಲ್ಲರಲ್ಲು ಬರಬೇಕು. ಭಗವಾನ್ ದತ್ತಾತ್ರೇಯರ ಅವತಾರವೇ ಜ್ಞಾನಾವತಾರವಾಗಿದೆ. ವಿಶ್ವವನ್ನು ಗುರುವಾಗಿ ಆಯ್ಕೆ ಮಾಡಿಕೊಂಡವ ನಿಜವಾದ…
ಶ್ರೀ ದತ್ತ ಜಯಂತಿ ಮಹೋತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹಕ್ಕೆ ಚಾಲನೆ ನೀಡಿ, ಗುರುಭಕ್ತರಿಗೆ ಮಾಲಾಧಾರಣೆ ಮಾಡಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.08: “ಜೀವನದಲ್ಲಿ ಗುರುದೀಕ್ಷೆ ಅತೀ ಅಗತ್ಯ. ಮಾನವೀಯತೆಯ ಕೊಂಡಿಯನ್ನು ಬಲಗೊಳಿಸುವ ಕೆಲಸವಾಗಬೇಕು. ಪರಿವರ್ತನೆಯ ಶಕ್ತಿ ಗುರುತತ್ತ÷್ವಕ್ಕಿದೆ. ಆಧ್ಯಾತ್ಮಿಕ ಅರಿವು ನಮ್ಮೊಳಗಿರಬೇಕು. ಭಾವನೆಗಳು ಶುದ್ಧವಿದ್ದರೆ ದೈವಾನುಗ್ರಹ ಸಾಧ್ಯ. ಬದುಕಿನ ಸಮತೋಲನ ನಮ್ಮಲ್ಲಿರಬೇಕು. ದತ್ತತತ್ತ÷್ವ…
ಒಡಿಯೂರು ಶ್ರೀ ಗುರುದೇವ ಗುರುಕುಲಗಳ ‘ಗುರುಕುಲೋತ್ಸವ’ವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.05: “ಗುರುಕುಲದ ಪುಟಾಣಿಗಳು ಜಗತ್ತನ್ನು ಬೆಳಗುವ ಕುಲದೀಪಕರಾಗಿ. ಬದುಕು ರೂಪಿಸುವ ಶಿಕ್ಷಣ ನೀಡುವ ಗುರುಕುಲಗಳು ಗ್ರಾಮ ಗ್ರಾಮಕ್ಕೆ ವಿಸ್ತರಣೆ ಮಾಡಲಾಗುವುದು. ಶಿಸ್ತು-ಸಂಯಮ ಮೈಗೂಡಿಸಿಕೊಂಡಾಗ ಬದುಕಿಗೆ ಯಾವುದೇ ಅಪಾಯವಿರುವುದಿಲ್ಲ. ಶ್ರೇಯಸ್ಸಿನ ಮಾರ್ಗ ಹಾಗೂ ಆಧ್ಯಾತ್ಮ ವಿದ್ಯೆ ಶ್ರೇಷ್ಠವಾಗಿದ್ದು, ಅದನ್ನು ಪ್ರತಿಯೊಬ್ಬರೂ ಅಳವಡಿಸಬೇಕಿದೆ” ಎಂದು ಪೂಜ್ಯ…
ಪುಣೆ ಶ್ರೀ ಗುರುದೇವ ಸೇವಾ ಬಳಗ 21ನೇ ವಾರ್ಷಿಕೋತ್ಸವದಲ್ಲಿ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಪುಣೆ, ದ.01: “ಸಂಸ್ಕಾರವಿಲ್ಲದ ಶಿಕ್ಷಣ ಅಸಂಪೂರ್ಣ. ಮಕ್ಕಳು ಚಾರಿತ್ರö್ಯವಂತರಾಗಲು, ಗುಣವಂತರಾಗಲು, ಸಂಸ್ಕಾರವಂತರಾಗಲು ಮನೆಯಲ್ಲಿನ ನಮ್ಮ ಸಂಸ್ಕೃತಿ ಏನಿದೆಯೋ ಅದರ ಅರಿವನ್ನು ತಿಳಿಸಿಕೊಡುವ ಜೊತೆಯಲ್ಲಿ ಧರ್ಮದ ಜ್ಞಾನ, ಪ್ರಜ್ಞೆಯನ್ನು ಮೂಡಿಸಬೇಕು. ಗುರು ದತ್ತಾತ್ರೇಯರ ಅವತಾರ ಎಂದರೆ ಅದು ಜ್ಞಾನದ ಅವತಾರ. ಭಗವಂತನ …
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಸಂದೇಶ ನ.16: “ಧರ್ಮದ ನಡೆ ಸತ್ಯದ ನುಡಿ ಇದ್ದರೆ ಬದುಕು ಒಳ್ಳೆಯದಾಗಬಹುದು. ಕಷ್ಟ ಬಂದರೂ ಹೆದರಬಾರದು. ಎದುರಿಸುವಂತಹ ಛಲ ಬೇಕು. ಜಗತ್ತಿನ ಸೂಕ್ಷ್ಮತೆಯನ್ನು ಗಮನಿಸಬೇಕು. ಜ್ಞಾನದ ದೃಷ್ಟಿ ನಮ್ಮಲ್ಲಿರಬೇಕು. ಸ್ವಾರ್ಥದ ದೃಷ್ಟಿಯ ಬದಲು ನಿಸ್ವಾರ್ಥದ ಬದುಕು ನಮ್ಮದಾಗಲಿ. ಸಮಾಜದ ಗೊಂದಲಗಳಿಗೆ ಸ್ವಾರ್ಥವೇ ಮುಖ್ಯ ಕಾರಣ.…
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಅ.14: “ಇಂದು ದಿನ ವಿಶೇಷ. ಪೌರ್ಣಮಿ, ಸಂಕ್ರಮಣದ ಜೊತೆಗೆ ಜೀವನಮೌಲ್ಯವನ್ನು ಜಗತ್ತಿಗೆ ತಿಳಿಸಿದ ಮಹಾನ್ ಕವಿ ವಾಲ್ಮೀಕಿಯ ಜಯಂತಿ. ರಾಮಮಂತ್ರದ ಮಹಿಮೆಯನ್ನು ಅರಿತು ಶ್ರೀಮದ್ರಾಮಾಯಣ ಎಂಬ ಸಾರ್ವಕಾಲಿಕ ಮಹಾಕಾವ್ಯವನ್ನು ಜಗತ್ತಿಗೆ ನೀಡಿದವರು. ರಾಮಾಯಣ ಮತ್ತು ಮಹಾಭಾರತ ನಮ್ಮ ಬದುಕು ಹೇಗಿರಬೇಕೆಂಬುದನ್ನು ತಿಳಿಸುತ್ತದೆ. ನಾವೆಲ್ಲ…