ದೀಪಾವಳಿಯ ಆಚರಣೆಯ ಮೂಲಕ ಅಂತರಂಗದ ಜ್ಯೋತಿ ಅರಳಲಿ

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕೃತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಕಾಮ ಕ್ರೋಧ ಲೋಭ ಮೀರಿದರೆ ಬದುಕು ಸಾರ್ಥಕ. ಆ ಮೂಲಕ ಭಗವಂತನ ಅನುಸಂಧಾನ ಸಾಧ್ಯ. ಒಂದು ದೀಪದಿಂದ ಹಲವು ದೀಪ ಉರಿಸಬಹುದು. ನಾವು ಸಹ ಒಂದೊ0ದು ದೀಪಗಳಾಗಬೇಕು. ಹೃದಯದ ದೀಪ ಅರಳಿಸುವ ಕೆಲಸವಾಗಬೇಕು. ಅರಿಷಡ್ವೇಕಗಳನ್ನು ತೊಲಗಿಸುವ ಮೂಲಕ ಹೃದಯದ ದೀಪ ಅರಳಿಸಲು ಸಾಧ್ಯ. ದೀಪಕ್ಕೂ ಸಂಸ್ಕಾರ…