ಪಾಲ್ಗರ್ ಸಂತರ ಹತ್ಯೆಗೆ ಒಡಿಯೂರು ಶ್ರೀಗಳ ಖಂಡನೆ:
ಮಹಾರಾಷ್ಟ್ರದ ಪಾಲ್ಗರ್ ಎಂಬಲ್ಲಿ ಅಮಾನುಷವಾಗಿ ಈರ್ವರು ಸಂತರ ಹತ್ಯೆ ನಡೆದಿರುವುದು ಖಂಡನೀಯ. ಭಾರತ ದೇಶದ ಮೌಲ್ಯವೆಂದರೆ ಸಾಧು-ಸಂತರು. ಸದುದ್ದೇಶಕ್ಕಾಗಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿರುವುದು ದುಃಖಕರ. ಸಂತರ ಹತ್ಯೆ ಎಂದರೆ ಸಂಸ್ಕೃತಿಯ ಹತ್ಯೆಯಂತೆ. ಬದುಕಿ-ಬದುಕಬಿಡುವ ಸಂತರ ಬದುಕನ್ನೇ ಕಸಿದುಕೊಳ್ಳುವುದು ಉಚಿತವಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ. ಇಂತಹ ಕೃತ್ಯಗೈದ ದುಷ್ಟರಿಗೆ ಕೂಡಲೇ ಕಠಿಣ ಶಿಕ್ಷೆಯಾಗಬೇಕು. ಸಾಧು-ಸಂತರು…