ಒಡಿಯೂರು ಶ್ರೀ ಸಂಸ್ಥಾನದಿಂದ ದಿನ ಬಳಕೆ ಸಾಮಾಗ್ರಿಗಳ ವಿತರಣೆ:
ಕರೋನಾ(ಕೋವಿಡ್-19)ದ ಪರಿಣಾಮ ಲಾಕ್‍ಡೌನ್‍ನಿಂದಾಗಿ ತೊಂದರೆಗೀಡಾದ ಜನತೆಗೆ ಸ್ಪಂದಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕನ್ಯಾನ ಗ್ರಾಮದ ಆಯ್ದ ಮನೆಗಳಿಗೆ ಅಕ್ಕಿ, ಸಕ್ಕರೆ, ಚಾಹುಡಿ, ಸಾಂಬಾರುಹುಡಿ ಇತ್ಯಾದಿ ದಿನ ಬಳಕೆಯ ವಸ್ತುಗಳನ್ನು ವಿತರಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಶ್ರೀ ಪಿ. ಲಿಂಗಪ್ಪ ಗೌಡ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕನ್ಯಾನ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ಕೆ.ಪಿ. ರಘುರಾಮ ಶೆಟ್ಟಿ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು, ಕನ್ಯಾನ ಗುರುದೇವ್ ಗ್ರೂಪ್ಸ್‍ನ ಸದಸ್ಯರು, ಗ್ರಾಮದ ಬಂಧುಗಳು ಮತ್ತು ಶ್ರೀ ಸಂಸ್ಥಾನದ ಕಾರ್ಯಕರ್ತರು ಸಹಕರಿಸಿದರು.