ಶ್ರೀ ಲಲಿತಾ ಪಂಚಮಿ ಮಹೋತ್ಸವ ಶ್ರೀ ಚಂಡಿಕಾ ಯಾಗ

Shree Dattanjaneya Kshetra, Dakshina Ganagapura
Shree Dattanjaneya Kshetra, Dakshina Ganagapura


ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ರಜತ ಸಂಭ್ರಮದ ಪ್ರಯುಕ್ತ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ದಿನಾಂಕ ೧೧.೧೦.೨೦೨೬ ರವಿವಾರ ಪೂಜ್ಯ ಶ್ರೀಗಳವರ ದಿವ್ಯ ಮಾರ್ಗದರ್ಶನದಲ್ಲಿ ತಾಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವು ಜರಗಲಿರುವುದು. ತತ್ಸಂಬAಧ ತಾ.೦೩-೧೦-೨೦೨೬ನೇ ಶನಿವಾರ ಬೆಳಿಗ್ಗೆ ಗಂಟೆ ೧೦.೩೦ರಿಂದ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಭಾವಗೀತೆ, ಕನ್ನಡ ಭಾಷಣ, ಪ್ರಬಂಧ ರಚನೆ, ಕವಿತಾ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಮುದ್ದುಕೃಷ್ಣ ವೇಷ ಸ್ಪರ್ಧೆ ಉದ್ಘಾಟಿಸಿ ಪೂಜ್ಯ ಒಡಿಯೂರು ಶ್ರೀಗಳವರಿಂದ ಆಶೀರ್ವಚನ“ಶ್ರೀ ಕೃಷ್ಣ ಜನ್ಮಾಷ್ಟಮಿಯ ಲೀಲೋತ್ಸವದ ಸಂಭ್ರಮದಲ್ಲಿದ್ದೇವೆ. ಅಧರ್ಮವನ್ನು ಮೆಟ್ಟಿ ನಿಲ್ಲಲು ಕೃಷ್ಣಾವತಾರವಾಯಿತು. ಅಂಧಾಕಾರ ತೊಲಗಿ ಬೆಳಕಾಗಲು ಕೃಷ್ಣ ಬರಬೇಕಾಯಿತು. ಸತ್ಯಯುಗದಲ್ಲಿ ಸುರರು ಮತ್ತು ಅಸುರರ ಮಧ್ಯೆ ಯುದ್ಧ, ತ್ರೇತಾಯುಗದಲ್ಲಿ ಧರ್ಮ – ಅಧರ್ಮದ ಯುಧ್ದ, ದ್ವಾಪರದಲ್ಲಿ ಒಂದೇ ಮನೆಯಲ್ಲಿ ಅಂದರೆ…

ಶ್ರೀ ಸಂಸ್ಥಾನದಲ್ಲಿ ಜರಗಿದ ಜನ್ಮದಿನೋತ್ಸವ – ಗ್ರಾಮೋತ್ಸವ ೨೦೨೬ – ಸೇವಾ ಸಂಭ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಜನ್ಮದಿನದ ಶುಭಸಂದೇಶಆ.೦೮: “ಅರ್ಹ ವ್ಯಕ್ತಿಗಳಿಗೆ ಸೇವೆ ಮಾಡುವ ಮನಸ್ಸು ನಮ್ಮದಾಗಬೇಕು. ಅಹಂಕಾರ, ಮಮಕಾರವನ್ನು ಮೀರಿ ಬದುಕುವ ಕೆಲಸವಾಗಲಿ. ಭಾರತ ದೇಶದ ಹೃದಯವೇ ಆಧ್ಯಾತ್ಮ. ಪರಿಸರ ಉಳಿದರೆ ನಾವು ಉಳಿಯಲು ಸಾಧ್ಯ. ಧರ್ಮ ಸೂತ್ರದಲ್ಲಿ ಬದುಕಿದರೆ ಬದುಕು ಸಾರ್ಥಕ. ಧರ್ಮದ…

ಗ್ರಾಮೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ‘ಕೆರ್ದ ಕಂಡೊಡೊಂಜಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ನಮ್ಮ ಒಡಲೂ ಒಂದು ಗದ್ದೆಯೆ. ಅದರಲ್ಲೂ ಕೃಷಿ ಮಾಡಲು ಸಾಧ್ಯ. ನಾವು ಕೃಷಿ ಮಾಡುವಾಗ ಕಳೆ ಬರುವಂತಹದು ಸಹಜ. ಕಳೆ ತೆಗೆಯುವ ಕೆಲಸ ಮಾಡಿದಾಗ ಸರಿಯಾದ ಫಲವನ್ನು ಪಡೆಯಲು ಸಾಧ್ಯ. ಹಾಗೆಯೇ ಒಡಲೆಂಬ ಗದ್ದೆಯಲ್ಲೂ ಕಾಮ, ಕ್ರೋಧ, ಲೋಭಗಳೆಂಬ ಕಳೆ ಬರುತ್ತದೆ.…

ರಾಜಾಂಗಣದಲ್ಲಿ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ -ಸೇವಾ ಸಂಭ್ರಮದ ಪ್ರಯುಕ್ತ ಸಂಘಟಿಸಿದ ಬೃಹತ್ ವೈದ್ಯಕೀಯ ಸೇವಾ ಶಿಬಿರವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರು ಆಶೀರ್ವಚನಗೈದರು.“ಮನುಷ್ಯನಿಗೆ ಜೀವನದಲ್ಲಿ ಆರೋಗ್ಯ, ಆಯುಷ್ಯ ಬಹಳಷ್ಟು ಶ್ರೇಷ್ಠವಾದುದು. ಆರೋಗ್ಯ ಕಾಪಿಡಲು ಆಹಾರಪದ್ಧತಿ ಸರಿಯಾಗಿರಬೇಕು. ಋತುಗಳಿಗೆ ಅನುಗುಣವಾದ ಆಹಾರಪದ್ದತಿ ನಮ್ಮದಾಗಬೇಕು. ಬದುಕು ಚಲನಶೀಲವಾದುದು. ದೇಹ ಮತ್ತು ಮನಸ್ಸು ಜೊತೆ ಜೊತೆಯಾಗಿ ಸಾಗಿದಾಗ ಬದುಕು ಹಸನಾಗಬಹುದು.…

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಮಹಾರಾಷ್ಟç ಘಟಕದ ನವಿಮುಂಬೈ ಸದಸ್ಯರು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ದಿವ್ಯ ಸಂದೇಶ“ನಮ್ಮ ಬದುಕಿನಲ್ಲಿ ಸೇವೆ ಹಾಗೂ ತ್ಯಾಗದ ಗುಣಗಳಿದ್ದಾಗ ಮಾತ್ರ ಜೀವನ ಸಮೃದ್ಧಗೊಳ್ಳಲು ಮತ್ತು ಯಾವುದೇ ಕಾರ್ಯಗಳಾದರೂ ಯಶಸ್ಸು ಕಾಣಲು ಸಾಧ್ಯ. ಈ ಪರಿಸರದ ಜನರಲ್ಲಿರುವ ಅರ್ಪಣಾಭಾವ, ತ್ಯಾಗ-ಸೇವಾ ಗುಣಗಳಿಂದಾಗಿಯೇ ಇಲ್ಲೊಂದು ಭವ್ಯವಾದ ಕ್ಷೇತ್ರ…

ಬಂಟರ ಸಂಘ, ಮುಂಬೈ ಇಲ್ಲಿ ಜರಗಿದ ಗುರುಪೂರ್ಣಿಮೆ ಆಚರಣೆ – ಗುರುವಂದನೆ – ಬಳಗದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ“ಗುರು ಎಂದರೆ ಒಂದು ಶಕ್ತಿ. ಗುರುಬಲವಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ. ನಮ್ಮ ಜೀವನದಲ್ಲಿ ಗುರುವಿಗೆ ಉತ್ತಮವಾದ ಸ್ಥಾನಮಾನವಿದೆ. ಒಂದಕ್ಷರ ಕಲಿಸಿದವನು ಗುರುವಾಗಿರುತ್ತಾರೆ. ಬದುಕಿನಲ್ಲಿ ಹಲವರಿಂದ ಪಾಠ ಕಲಿಯಬೇಕಾಗುತ್ತದೆ. ನಮ್ಮ ಸನಾತನ ಧರ್ಮವು ಶ್ರೇಷ್ಠವಾಗಿದ್ದು ಅದು…

ಗ್ರಾಮೋತ್ಸವದ ಅಂಗವಾಗಿ ಆಯೋಜಿಸಿದ್ದ ಒಳಾಂಗಣ ಸ್ಪರ್ಧೆಗಳನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ“ಧರ್ಮ ಸಂರಕ್ಷಣೆಯ ಹೋರಾಟದಿಂದ ಜಯ ನಿಶ್ಚಿತ. ವ್ಯಕ್ತಿ ವಿಕಾಸದಿಂದ ಸಮಾಜ ವಿಕಾಸ ಸಾಧ್ಯ. ಜೀವನದ ಕಷ್ಟಗಳನ್ನು ಸೋಪಾನವಾಗಿಸಬೇಕು. ಅಂತರಂಗದ ಪ್ರವೇಶಕ್ಕೆ ಪ್ರೇಮತತ್ವವೇ ರಹದಾರಿ. ನಮ್ಮ ಅಂತರಂಗವನ್ನು ಸ್ವಚ್ಛವಾಗಿರಿಸುವ ಕೆಲಸ ಆಗಬೇಕು” ಎಂದು ಪೂಜ್ಯ ಸ್ವಾಮೀಜಿಯವರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಗ್ರಾಮೋತ್ಸವದ ಅಂಗವಾಗಿ ಆಯೋಜಿಸಿದ್ದ ಒಳಾಂಗಣ…

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ೧೭-೦೮-೨೦೨೬ರಂದು ನಾಗರ ಪಂಚಮಿ ಮಹೋತ್ಸವ – ಸಾರ್ವಜನಿಕ ಆಶ್ಲೇಷ ಬಲಿ ಪೂಜೆ ವಿವಿಧ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಪೂರ್ವಾಹ್ಣ ಗಂಟೆ ೯ಕ್ಕೆ ಸ್ವಯಂ ಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಬಳಿಕ ಆಶ್ಲೇಷಬಲಿಪೂಜೆ ಆರಂಭ, ಬೆಳಿಗ್ಗೆ ೧೧.೩೦ಕ್ಕೆ ಪೂಜ್ಯ ಶ್ರೀಗಳವರು ನಾಗರ ಪಂಚಮಿಯ ಶುಭಸಂದೇಶ ನೀಡಲಿದ್ದಾರೆ. ಮಧ್ಯಾಹ್ನ ಗಂಟೆ ೧೨.೩೦ಕ್ಕೆ…