Category News Reports

ತಮಸೋಮಾ ಜ್ಯೋತಿರ್ಗಮಯ – ಒಡಿಯೂರು ಶ್ರೀ

ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕರೋನಾ ವೈರಸ್(ಕೋವಿಡ್-19) ಸೋಂಕಿನಿಂದ ಹಲವರು ಬಳಲುತ್ತಿದ್ದು, ಕೆಲವರು ಮೃತಪಟ್ಟಿರುವುದು ವಿಷಾಧನೀಯ. ಇದೀಗ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೈಗೊಂಡಿರುವ ಅತ್ಯಮೂಲ್ಯವಾದ ದೀಪ ಉರಿಸುವ ಕಾರ್ಯಕ್ರಮ ಪ್ರಶಂಸನೀಯ. ತ್ರೇತಾ, ದ್ವಾಪರ ಯುಗದಲ್ಲಿಯೂ ರಾಕ್ಷಸರ ತಾಮಸಗುಣವು ಹೆಚ್ಚಾದಾಗ ಅದರ ನಿವಾರಣೆಗೆ ಬೆಳಕನ್ನು ಹುಡುಕಿರುವುದು ಸಹಜ. ಇದಕ್ಕೆ ಪೂರಕವಾಗಿ ಕೋಟಿ ಕೋಟಿ ಜನರು ದೀಪ…

‘ಶ್ರೀ ಹನುಮೋತ್ಸವ’ ತತ್ಸಂಬಂಧ ಮುಂದೂಡಲಾಗಿದೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪ್ರತಿವರ್ಷದಂತೆ ನಿಗದಿಪಡಿಸಿದ್ದ ‘ಶ್ರೀ ಹನುಮೋತ್ಸವ’ ತತ್ಸಂಬಂಧ ಹಮ್ಮಿಕೊಂಡ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಭಾರತ ಸರಕಾರವು ಹೊರಡಿಸಿರುವ ಅಧಿಸೂಚನೆಯಂತೆ ಮುಂದೂಡಲಾಗಿದೆ.

ಜನತಾ ಕಫ್ರ್ಯೂ ಬೆಂಬಲಕ್ಕೆ ಒಡಿಯೂರು ಶ್ರೀ ಕರೆ:

ವಿಶ್ವವನ್ನೇ ಗಂಭೀರವಾಗಿ ಅಲ್ಲೋಲಕಲ್ಲೋಲಗೊಳಿಸಿರುವ ಕರೋನಾ(ಕೋವಿಡ್-19) ವೈರಸ್‍ನ ವಿರುದ್ಧ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರು ಕರೆ ನೀಡಿದ ಪ್ರಾಥಮಿಕ ಹಂತದ ಜನತಾ ಕಫ್ರ್ಯೂಗೆ ಭಾರತೀಯರು ಬೆಂಬಲಿಸಬೇಕು. ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಿಡುವುದು ಎಲ್ಲರ ಕರ್ತವ್ಯವಾಗಿದೆ. ಎಲ್ಲರೂ ಪ್ರಾಮಾಣಿಕವಾದ ಸಹಕಾರದಿಂದ ಈ ಮಹಾಪಿಡುಗನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಸ್ವಯಂಪ್ರೇರಿತರಾಗಿ ಬದ್ಧತೆಯನ್ನು ಕಾಪಾಡಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ…

ವಿಶ್ವವು ಕರೋನಾ ಖಾಯಿಲೆಯಿಂದ ಮುಕ್ತವಾಗಲಿ – ಒಡಿಯೂರು ಶ್ರೀ

ಅಪರೂಪವಾಗಿ ಇಂತಹ ಹಲವಾರು ಸೋಂಕಿನ ಖಾಯಿಲೆಗಳು ಈ ಹಿಂದೆಯೂ ಕಾಡಿದೆ, ಈಗಲೂ ಕಾಡುತ್ತಿದೆ. ಮುನ್ನೆಚ್ಚರಿಕೆ ಅವಶ್ಯ. ಈ ಸಂದರ್ಭದಲ್ಲಿ ನಮ್ಮ ಭಾರತೀಯ ಪದ್ಧತಿಯ ಆಹಾರಗಳು, ಪ್ರಾಣಾಯಾಮದಂತಹ ಯೋಗಾಭ್ಯಾಸಗಳು, ಆಯುರ್ವೇದ ಹಾಗೂ ಇನ್ನಿತ್ಯಾದಿ ಅನುಕೂಲಕರವಾದಂತಹ ಔಷಧಿಗಳನ್ನು ಉಪಯೋಗ ಮಾಡುವುದರಿಂದ ನಿಯಂತ್ರಣ ಸಾಧ್ಯವಾಗಬಹುದು. ಕೆಲವೇ ದಿನಗಳಲ್ಲಿ ಈ ರೋಗವು ನಿಯಂತ್ರಣಕ್ಕೆ ಬರಲಿ ಎಂದು ಆರಾಧ್ಯದೇವರನ್ನು ಪ್ರಾರ್ಥಿಸುತ್ತೇವೆ.

“ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು.” – ಒಡಿಯೂರು ಶ್ರೀ

  ಭಾರತೀಯತೆ ಅಂದರೆ ಸಂಸ್ಕೃತಿ. ಮಾತೃಹೃದಯ ಎಲ್ಲವನ್ನೂ ಅಪ್ಪಿಕೊಳ್ಳುತ್ತದೆ ಮತ್ತು ಒಪ್ಪಿಕೊಳ್ಳುತ್ತದೆ. ಮಕ್ಕಳ ಬಗ್ಗೆ ನಾವು ಕನಸನ್ನು ಕಾಣುವ. ಮಕ್ಕಳ ಜೊತೆ ಸಮಯ ಕಳೆಯಬೇಕು. ತಾಯಂದಿರು ಭಾಷೆಯ ಹಿಂದಿನ ಸಂಸ್ಕೃತಿಗೆ ಗಮನ ನೀಡಬೇಕು. ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು. ಜೀವನ ಮೌಲ್ಯ ತುಂಬುವ ಕೆಲಸ ತಾಯಿಯಿಂದ ಮನೆಯಲ್ಲೇ ಆಗಬೇಕು. ಆಗ ಮಾತ್ರ ಮಕ್ಕಳು ನಮ್ಮ…

‘ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ’ – ಒಡಿಯೂರು ಶ್ರೀ

‘ಬೀಳ್ಕೊಡುಗೆ ಎನ್ನುವುದು ಭವಿಷ್ಯತ್ತಿನ ಕಡೆಗೆ ಹೋಗಲಿರುವ ಕೊಡುಗೆ. ವಿದ್ಯಾರ್ಥಿ ಬದುಕು ಭೋಗದ ಬದುಕಲ್ಲ, ಇದು ತ್ಯಾಗದ ಬದುಕು. ಕಲ್ಪನಾಲೋಕದ ಬದುಕಿಗಿಂತ ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ. ಉತ್ತಮ ಮಿತ್ರರನ್ನು ಸಂಪಾದಿಸಿ ಗುಣಾತ್ಮಕ ಚಿಂತನೆಯನ್ನು ತಮ್ಮದಾಗಿಸಬೇಕು. ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯದಲ್ಲಿ ಪೋಷಕರು ವಿದ್ಯಾಭ್ಯಾಸ ಮುಂದುವರಿಯಲು ಬಿಡಬೇಕು. ಮಾತೃ ಋಣ, ಶಿಕ್ಷಕರ ಋಣ, ದೇಶದ ಋಣ ಸದಾ…

ಒಡಿಯೂರಿನಲ್ಲಿ 2ದಿನಗಳ ತುಳು ಕಾವ್ಯ ರಚನಾ ಕಮ್ಮಟ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರ್ದ ತುಳುಕೂಟದ ಸಹಕಾರದೊಂದಿಗೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಎಪ್ರಿಲ್ 11 ಮತ್ತು 12ರ ಶನಿವಾರ ಮತ್ತು ಆದಿತ್ಯವಾರ ಎರಡು ದಿನಗಳ ತುಳು ಕಾವ್ಯ ರಚನಾ ಕಮ್ಮಟ(ತುಳು ಕಬಿತೆ ಕಟ್ಟುನ ಕಜ್ಜಕೊಟ್ಯ)ವನ್ನು ಏರ್ಪಡಿಸಲಾಗಿದೆ. ಹಿರಿಯ ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಶಿಬಿರದ ನಿರ್ದೇಶಕರಾಗಿದ್ದು, ತಜ್ಞರು ವಿಷಯ…

ಮಹಾಶಿವರಾತ್ರಿಯ ಪ್ರಯುಕ್ತ ಒಡಿಯೂರು ಸಂಸ್ಥಾನದಲ್ಲಿ ಶತರುದ್ರಾಭಿಷೇಕ ಜರಗಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶತರುದ್ರಾಭಿಷೇಕ ಜರಗಿತು.