Editor

Editor

‘ಗುರುಪೂರ್ಣಿಮೆ ಪರಂಪರೆಯ ಬೆಳಕು’ – ಒಡಿಯೂರು ಶ್ರೀ

ಆಷಾಢ ಮಾಸವೆಂದರೆ ವಿಶೇಷವಾದ ತಿಂಗಳು ಎಂದರ್ಥ. ಆಷಾಢ ಪೂರ್ಣಿಮೆಯು ವ್ಯಾಸ ಪೂರ್ಣಿಮೆಯೆಂದೇ ಪ್ರತೀತಿ. ಗುರುಗಳನ್ನು ಪೂಜಿಸುವ ಮಾಸವಿದು. ಅರ್ಥಾತ್ ಗುರು ಮಾಸವಿದು. ಅಧ್ಯಾತ್ಮ ಸಾಧಕರಿಗೆ ಪರಮಪವಿತ್ರವೂ ಹೌದು. ಅಜ್ಞಾನದ ಬದುಕಿಗೆ ಸುಜ್ಞಾನದ ಬೆಳಕನ್ನು ನೀಡಿ ಮುನ್ನಡೆಸುವ ಗುರುವಿನ ಅನಿವಾರ್ಯತೆ ಇದೆ. ಅದಕ್ಕಾಗಿಯೇ ಈ ದಿನದಲ್ಲಿ ಗುರುಪೂಜೆಗಳು ನಡೆಯುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಬೋಧಿಸಿದಂತೆ ಗುಣಗಳಿಗೆ ತಕ್ಕಂತೆ ಮನಸ್ಸನ್ನು…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜೂ.22ರಿಂದ ದೇವರ ದರ್ಶನ

ಒಡಿಯೂರು ಶ್ರೀ ಸಂಸ್ಥಾನದಲ್ಲಿ ತಾ.22-06-2020ರಿಂದ ದೇವರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಬೆಳಿಗ್ಗೆ ಘಂಟೆ 10ರಿಂದ 12ರ ತನಕ ಅಂತರವನ್ನು ಕಾಯ್ದುಕೊಂಡು ಪೂಜ್ಯ ಶ್ರೀಗಳವರ ಭೇಟಿಗೆ ಅವಕಾಶವಿದೆ. ಪ್ರವೇಶಕ್ಕೆ ಮಾಸ್ಕ್ ಧಾರಣೆ, ಸಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಸ್ವಚ್ಛತೆ ಕಡ್ಡಾಯ. ಹೆಚ್ಚಿನ ಮಾಹಿತಿಗೆ 08255-266211/298282/9448177811 ಸಂಪರ್ಕಿಸಬಹುದು.

ಪಾಲ್ಗರ್ ಸಂತರ ಹತ್ಯೆಗೆ ಒಡಿಯೂರು ಶ್ರೀಗಳ ಖಂಡನೆ:

ಮಹಾರಾಷ್ಟ್ರದ ಪಾಲ್ಗರ್ ಎಂಬಲ್ಲಿ ಅಮಾನುಷವಾಗಿ ಈರ್ವರು ಸಂತರ ಹತ್ಯೆ ನಡೆದಿರುವುದು ಖಂಡನೀಯ. ಭಾರತ ದೇಶದ ಮೌಲ್ಯವೆಂದರೆ ಸಾಧು-ಸಂತರು. ಸದುದ್ದೇಶಕ್ಕಾಗಿ ಸಂಚರಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿರುವುದು ದುಃಖಕರ. ಸಂತರ ಹತ್ಯೆ ಎಂದರೆ ಸಂಸ್ಕೃತಿಯ ಹತ್ಯೆಯಂತೆ. ಬದುಕಿ-ಬದುಕಬಿಡುವ ಸಂತರ ಬದುಕನ್ನೇ ಕಸಿದುಕೊಳ್ಳುವುದು ಉಚಿತವಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧ. ಇಂತಹ ಕೃತ್ಯಗೈದ ದುಷ್ಟರಿಗೆ ಕೂಡಲೇ ಕಠಿಣ ಶಿಕ್ಷೆಯಾಗಬೇಕು. ಸಾಧು-ಸಂತರು…

ಒಡಿಯೂರು ಶ್ರೀ ಸಂಸ್ಥಾನದಿಂದ ದಿನ ಬಳಕೆ ಸಾಮಾಗ್ರಿಗಳ ವಿತರಣೆ:

  ಕರೋನಾ(ಕೋವಿಡ್-19)ದ ಪರಿಣಾಮ ಲಾಕ್‍ಡೌನ್‍ನಿಂದಾಗಿ ತೊಂದರೆಗೀಡಾದ ಜನತೆಗೆ ಸ್ಪಂದಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕನ್ಯಾನ ಗ್ರಾಮದ ಆಯ್ದ ಮನೆಗಳಿಗೆ ಅಕ್ಕಿ, ಸಕ್ಕರೆ, ಚಾಹುಡಿ, ಸಾಂಬಾರುಹುಡಿ ಇತ್ಯಾದಿ ದಿನ ಬಳಕೆಯ ವಸ್ತುಗಳನ್ನು ವಿತರಿಸಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಶ್ರೀ ಪಿ. ಲಿಂಗಪ್ಪ ಗೌಡ, ಒಡಿಯೂರು…

ಒಡಿಯೂರು ಶ್ರೀ ಸಂಸ್ಥಾನದಿಂದ ದಿನ ಬಳಕೆ ಸಾಮಾಗ್ರಿ ವಿತರಣೆ:

ಕರೋನಾ (ಕೋವಿಡ್-19)ದ ಪರಿಣಾಮ ಲಾಕ್‍ಡೌನ್‍ನಿಂದಾಗಿ ತೊಂದರೆಗೀಡಾದ ಜನತೆಗೆ ಸ್ಪಂದಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕರೋಪಾಡಿ ಗ್ರಾಮದ ಸಾವಿರಕ್ಕೂ ಮಿಕ್ಕಿ ಮನೆಗಳಿಗೆ ಅಕ್ಕಿ, ಸಕ್ಕರೆ, ಚಾಹುಡಿ, ಸಾಂಬಾರುಹುಡಿ ಇತ್ಯಾದಿ ದಿನ ಬಳಕೆಯ ವಸ್ತುಗಳನ್ನು ವಿತರಿಸಿದರು. ಸಕಾಲದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನಿರ್ದೇಶಕರಾದ ಶ್ರೀ ಕಿರಣ್ ಉರ್ವ, ಕರೋಪಾಡಿ…

“ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಪೂರ್ಣ ಬದುಕು” – ಒಡಿಯೂರು ಶ್ರೀ

“ನಿಮಗೆಲ್ಲ ಹನುಮಜ್ಜಯಂತಿಯ ಶುಭಾಶಯಗಳು.  ಭಾರತದ ಪ್ರಸಿದ್ಧ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಭಾರತೀಯ ಸಂಸ್ಕೃತಿಯ ನಯನಗಳು. ಇವು ಅರ್ಥಪೂರ್ಣವಾಗಿ, ಆರೋಗ್ಯಪೂರ್ಣವಾಗಿ ಬದುಕನ್ನು ರೂಪಿಸುವ ಪಠ್ಯಗಳಿದ್ದಂತೆ. ಭಾವೀ ಬ್ರಹ್ಮನೆನಿಸಿದ ಚಿರಂಜೀವಿ ಹನುಮಂತನ ವಿಶೇಷತೆಗಳನ್ನು ರಾಮಾಯಣ ಮಹಾಕಾವ್ಯದ ಸುಂದರಕಾಂಡದಲ್ಲಿ ನೋಡಬಹುದು. ಇಷ್ಟಾರ್ಥ ಸಿದ್ಧಿಗಾಗಿ ಸುಂದರಕಾಂಡ ಪಾರಾಯಣ ಮಾಡುವಂತದ್ದು ಪ್ರತೀತಿ. ‘ಸುಂದರ’ ಅಂದರೆ ಚೆನ್ನಾಗಿರುವವ ಎಂದರ್ಥವಾದರೂ ಅಂತರಂಗ-ಬಹಿರಂಗವನ್ನು ಸುಂದರವಾಗಿರಿಸಿಕೊಂಡವ. ಅಧ್ಯಾತ್ಮದ…

ಒಡಿಯೂರಿನಲ್ಲಿ ನಿಗದಿಪಡಿಸಿದ್ದ ತುಳು ಕಾವ್ಯ ರಚನಾ ಕಮ್ಮಟವನ್ನು ಮುಂದೂಡಲಾಗಿದೆ.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಎಪ್ರಿಲ್ 11 ಮತ್ತು 12ರ ಶನಿವಾರ ಮತ್ತು ಆದಿತ್ಯವಾರ ನಿಗದಿಪಡಿಸಿದ್ದ ತುಳು ಕಾವ್ಯ ರಚನಾ ಕಮ್ಮಟ(ತುಳು ಕಬಿತೆ ಕಟ್ಟುನ ಕಜ್ಜಕೊಟ್ಯ)ವನ್ನು ಕರೊನಾ ವೈರಸ್‍ನ ಪರಿಣಾಮ ಭಾರತ ಸರಕಾರದ ಅಧಿಸೂಚನೆಯಂತೆ ಮುಂದೂಡಲಾಗಿದೆ.

ತಮಸೋಮಾ ಜ್ಯೋತಿರ್ಗಮಯ – ಒಡಿಯೂರು ಶ್ರೀ

ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕರೋನಾ ವೈರಸ್(ಕೋವಿಡ್-19) ಸೋಂಕಿನಿಂದ ಹಲವರು ಬಳಲುತ್ತಿದ್ದು, ಕೆಲವರು ಮೃತಪಟ್ಟಿರುವುದು ವಿಷಾಧನೀಯ. ಇದೀಗ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೈಗೊಂಡಿರುವ ಅತ್ಯಮೂಲ್ಯವಾದ ದೀಪ ಉರಿಸುವ ಕಾರ್ಯಕ್ರಮ ಪ್ರಶಂಸನೀಯ. ತ್ರೇತಾ, ದ್ವಾಪರ ಯುಗದಲ್ಲಿಯೂ ರಾಕ್ಷಸರ ತಾಮಸಗುಣವು ಹೆಚ್ಚಾದಾಗ ಅದರ ನಿವಾರಣೆಗೆ ಬೆಳಕನ್ನು ಹುಡುಕಿರುವುದು ಸಹಜ. ಇದಕ್ಕೆ ಪೂರಕವಾಗಿ ಕೋಟಿ ಕೋಟಿ ಜನರು ದೀಪ…

‘ಶ್ರೀ ಹನುಮೋತ್ಸವ’ ತತ್ಸಂಬಂಧ ಮುಂದೂಡಲಾಗಿದೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪ್ರತಿವರ್ಷದಂತೆ ನಿಗದಿಪಡಿಸಿದ್ದ ‘ಶ್ರೀ ಹನುಮೋತ್ಸವ’ ತತ್ಸಂಬಂಧ ಹಮ್ಮಿಕೊಂಡ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಭಾರತ ಸರಕಾರವು ಹೊರಡಿಸಿರುವ ಅಧಿಸೂಚನೆಯಂತೆ ಮುಂದೂಡಲಾಗಿದೆ.

ಜನತಾ ಕಫ್ರ್ಯೂ ಬೆಂಬಲಕ್ಕೆ ಒಡಿಯೂರು ಶ್ರೀ ಕರೆ:

ವಿಶ್ವವನ್ನೇ ಗಂಭೀರವಾಗಿ ಅಲ್ಲೋಲಕಲ್ಲೋಲಗೊಳಿಸಿರುವ ಕರೋನಾ(ಕೋವಿಡ್-19) ವೈರಸ್‍ನ ವಿರುದ್ಧ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರು ಕರೆ ನೀಡಿದ ಪ್ರಾಥಮಿಕ ಹಂತದ ಜನತಾ ಕಫ್ರ್ಯೂಗೆ ಭಾರತೀಯರು ಬೆಂಬಲಿಸಬೇಕು. ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಿಡುವುದು ಎಲ್ಲರ ಕರ್ತವ್ಯವಾಗಿದೆ. ಎಲ್ಲರೂ ಪ್ರಾಮಾಣಿಕವಾದ ಸಹಕಾರದಿಂದ ಈ ಮಹಾಪಿಡುಗನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಸ್ವಯಂಪ್ರೇರಿತರಾಗಿ ಬದ್ಧತೆಯನ್ನು ಕಾಪಾಡಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ…