Category Spiritual

ಶ್ರೀಮದ್ಭಗವದ್ಗೀತೆಯಿಂದ ಲೌಕಿಕ-ಅಲೌಕಿಕ ಬದುಕಿಗೆ ಬೆಳಕು – ಒಡಿಯೂರು ಶ್ರೀ

ಪ್ರಪನ್ನ ಪಾರಿಜಾತಾಯ ತೋತ್ರವೇತ್ರೈಕಪಾಣಯೇ | ಜ್ಞಾನಮುದ್ರಾಯ ಶ್ರೀಕೃಷ್ಣಾಯ ಗೀತಾಮೃತದುಹೇ ನಮಃ || ನಿಮಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ನಿಮಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಶ್ರೀಕೃಷ್ಣ ಅವತಾರದ ಹಿಂದೆ ಒಂದು ಸತ್ಯ ಅಡಗಿದೆ. ಅಧರ್ಮವು ತಾಂಡವವಾಡುವಾಗ ನಿಯಂತ್ರಿಸುವುದಕ್ಕೆ ಧರ್ಮದ ರೂಪದಲ್ಲಿ ಭಗವಂತ ಅವತಾರ ಎತ್ತುತ್ತಾನೆ. ಅದರಲ್ಲಿ ಕೃಷ್ಣಾವತಾರವೂ ಒಂದು. ಕೃಷ್ಣ ಎನ್ನುವಾಗ ನಮಗೆಲ್ಲ ಮೂಡುವ…

ಯಶಸ್ಸಿನ ಗುಟ್ಟು ಪ್ರಯತ್ನಶೀಲತೆಯಲ್ಲಿ ಅಡಗಿದೆ

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆಯ ಸಂದರ್ಭ ಒಡಿಯೂರು ಶ್ರೀ ಆಶೀರ್ವಚನ” “ಜಗತ್ತು ನಿಯಮವನ್ನು ಅದೇ ರೂಪಿಸುತ್ತಿದೆ. ಅದಕ್ಕೆ ನಾವು ಒಗ್ಗಿಕೊಳ್ಳಬೇಕು. ನಮ್ಮಲ್ಲಿ ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ ಇದ್ದರೆ ಸಾಲದು ಜ್ಞಾನ ಶಕ್ತಿಯೂ ಬೇಕು. ನಮ್ಮ ನಾಲಿಗೆಯ ತುದಿಯಂತೆ ಲಕ್ಷ್ಮೀಯು ಚಲನಶೀಲವಾಗಿರುವಳು. ಸಂಪತ್ತು ಮತ್ತು ಆಪತ್ತು ನಮ್ಮ ನಾಲಿಗೆಯಲ್ಲಿದೆ. ಅದಕ್ಕಾಗಿ ವಾಕ್…

“ನಾಗಾರಾಧನೆ ಪ್ರಕೃತಿಯ ಆರಾಧನೆ” ನಾಗರ ಪಂಚಮಿ ಮಹೋತ್ಸವದಲ್ಲಿ ಒಡಿಯೂರು ಶ್ರೀ ದಿವ್ಯ ಸಂದೇಶ

“ನಾಗಾರಾಧನೆಯಲ್ಲಿ ಪ್ರಕೃತಿಯ ಆರಾಧನೆಯ ತತ್ತ್ವವಿದೆ. ಸಂಪತ್ತುಗಳ ಅಧಿಪತಿ ನಾಗರಾಜ. ನಾಗಾರಾಧನೆಯ ಹಿಂದೆ ಮೂಲ ಸಂಸ್ಕøತಿಯ ಅಂಶವಿದೆ. ಆಸ್ತಿಕ ಭಾವಕ್ಕೆ ಹೆಚ್ಚು ಗೌರವವಿದೆ. ಪುರಾಣಗಳ ಪ್ರಕಾರ 16000 ಸರ್ಪಸಂಕುಲಗಳಿವೆ. ನಾಗಾರಾಧನೆಯ ಹೆಸರಿನಲ್ಲಿ ಪ್ರಕೃತಿಯ ಉಳಿವಿದೆ. ಪ್ರಕೃತಿಯ ಆರಾಧನೆಯಿಂದ ಆರೋಗ್ಯದ ಹಿತವಿದೆ. ಪ್ರಕೃತಿಯಲ್ಲಿ ಪರಮಾತ್ಮನ ಅಸ್ತಿತ್ವವನ್ನು ಕಾಣಬಹುದು. ಸಹೋದರತ್ವವನ್ನು ಪ್ರತಿನಿಧಿಸುವ ನಾಗರಪಂಚಮಿ ಹಬ್ಬ ನಾಡಿಗೆ ವಿಶೇಷ ಹಬ್ಬವಾಗಿದೆ” ಎಂದು…

ತ್ಯಾಗ – ಸೇವೆಗಳೇ ಆತ್ಮೋನ್ನತಿಗೆ ಸೋಪಾನಗಳು – ಒಡಿಯೂರು ಶ್ರೀ

 “ಭೋಗದ ಬದುಕು ಬದುಕಲ್ಲ, ತ್ಯಾಗದ ಬದುಕೇ ನಿಜ ಬದುಕು. ತ್ಯಾಗ ಮತ್ತು ಸೇವೆಗಳೇ ಆತ್ಮೋನ್ನತಿಗೆ ಸೋಪಾನಗಳು. ಶ್ರೀಮದ್ರಾಮಾಯಣ, ಶ್ರೀಮನ್ಮಹಾಭಾರತ ಇವೆರಡು ಮಹಾಕಾವ್ಯಗಳು ಭಾರತೀಯ ಸಂಸ್ಕøತಿಯನ್ನು ಪ್ರತಿನಿಧಿಸುತ್ತದೆ. ಬದುಕನ್ನು ರೂಪಿಸುವ ಪಠ್ಯಗಳು ಈ ಕಾವ್ಯಗಳಾಗಿವೆ. ಇದೀಗ ಶ್ರೀ ರಾಮನವಮಿ ಹಾಗೂ ಹನುಮಜ್ಜಯಂತಿಯನ್ನು ಆಚರಿಸುವ ಪರ್ವಕಾಲ. ವಸಂತ ಋತು, ಚೈತ್ರ ಮಾಸದಲ್ಲಿ ಬರುವಂತಹ ಈ ದಿನಗಳು ಆರಾಧನಾ ಯೋಗ್ಯವಾಗಿರುವುದು.…

ಮಹಾಶಿವರಾತ್ರಿಯ ಪ್ರಯುಕ್ತ ಶತರುದ್ರಾಭಿಷೇಕ ಜರಗಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಉಪಸ್ಥಿತಿಯಲ್ಲಿ ಶತರುದ್ರಾಭಿಷೇಕ ಜರಗಿತು.

ಶ್ರೀ ಸಂಸ್ಥಾನದಲ್ಲಿ ಶ್ರೀಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆಯ ಧರ್ಮಸಭೆ

ಅಧ್ಯಾತ್ಮದಿಂದಲೇ ಶಾಂತಿ, ನೆಮ್ಮದಿ – ಒಡಿಯೂರು ಶ್ರೀ “ಬದುಕು ನಿರಂತರ ಹರಿಯುವ ನೀರಿನಂತೆ ಚಲನಶೀಲವಾಗಿರುತ್ತದೆ. ಸಂಚರಿಸುವ ರಥಕ್ಕೆ ಪಥವಿದ್ದಂತೆ, ದೇಹವೆಂಬ ರಥಕ್ಕೂ ಪಥವಿರಬೇಕು. ಅದು ಧರ್ಮದ ಪಥವಾಗಿರಬೇಕು. ಆ ಪಥದಲ್ಲಿ ಸಾಗಿದಾಗ ಬದುಕು ಹಸನಾಗುತ್ತದೆ. ಅಧ್ಯಾತ್ಮ ಮತ್ತು ವಿಜ್ಞಾನ ಜತೆಯಾಗಿ ಸಾಗಬೇಕು. ಅಧ್ಯಾತ್ಮ ಶಾಂತಿ ಮತ್ತು ನೆಮ್ಮದಿಯನ್ನು ಕೊಡುತ್ತದೆ. ಅಂತರಂಗದಲ್ಲಿ ಶಾಂತಿಯನ್ನು ಹುಡುಕಬೇಕು. ನಮ್ಮ ಅಂತರಂಗದಲ್ಲಿ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶತರುದ್ರಾಭಿಷೇಕ

ಶ್ರೀ ಸಂಸ್ಥಾನದಲ್ಲಿ ತಾ.11-03-2021ನೇ ಶುಕ್ರವಾರ ರಾತ್ರಿ ಮಹಾಶಿವರಾತ್ರಿಯ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಆರಾಧ್ಯ ದೇವರಿಗೆ ಶತರುದ್ರಾಭಿಷೇಕ ನಡೆಯಲಿರುವುದು.

ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕಾಸರಗೋಡು ಸಮಿತಿ ಸರಣಿ ಕಾರ್ಯಕ್ರಮಗಳಿಗೆ ಚಾಲನೆ

ಜ. 29: ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ 2021 – ಜ್ಞಾನವಾಹಿನಿ ಕಾರ್ಯಕ್ರಮದ ಕಾಸರಗೋಡು ವಲಯ ಸಮಿತಿ ಮತ್ತು ಸರಣಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಸಭಾಮಂಟಪದಲ್ಲಿ ಜರಗಿತು.ಕಾರ್ಯಕ್ರಮಕ್ಕೆ ಪೂಜ್ಯ ಸ್ವಾಮೀಜಿಗಳವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು…

ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಗಳೂರು ನಗರ ಸಮಿತಿ ಪಂಚ ಕಾರ್ಯಕ್ರಮಗಳಿಗೆ ಚಾಲನೆ

ಮಂಗಳೂರು, ಜ. 16: “ಪರೋಪಕಾರದ ಗುಣವನ್ನು ರೂಢಿಸಿಕೊಂಡು ಸೇವಾಕಾರ್ಐದಲ್ಲಿ ತೊಡಗಿಸಿಕೊಂಡಾಗ ಬದುಕು ಸಾರ್ಥಕ್ಯವನ್ನು ಪಡೆಯುತ್ತದೆ. ತ್ಯಾಗ ಸೇವಯಲ್ಲಿ ಬದುಕಿನ ಶಾಶ್ವತ ಸುಖ ಅಡಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ನಗರದ ಪುರಭವನದಲ್ಲಿ ಜರಗಿದ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ, ಮಂಗಳೂರು ನಗರ ಸಮಿತಿಯ ಪಂಚ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀರ್ವಚನಗೈದರು. ಸಾಧ್ವಿ ಶ್ರೀ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಂಪನ್ನ

“ಆದಿಗುರು ದತ್ತಾತ್ರೇಯರು ವಿಶ್ವ ಮಾನವ ಧರ್ಮವನ್ನು ಜಗತ್ತಿಗೆ ಪಸರಿಸಿದವರು. ದತ್ತ ತತ್ತ್ವದ ಚಿಂತನೆ ಪಾಲನೆಯಿಂದ ಸಮರಸದ ಜೀವನ ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಿದ ಶ್ರೀ ದತ್ತ ಜಯಂತ್ಯುತ್ಸವದ ಧರ್ಮಸಭೆಯಲ್ಲಿ ಸಂದೇಶ ನೀಡಿದರು. ಅವರು ಪ್ರೊ. ವಿ.ಬಿ. ಅರ್ತಿಕಜೆಯವರು ಕನ್ನಡಕ್ಕೆ ಅನುವಾದಿಸಿದ ‘ಶ್ರೀ ದತ್ತಾಂಜನೇಯ ಸಹಸ್ರನಾಮ’…