“ಪಾರದರ್ಶಕತೆಯ ವ್ಯವಹಾರದಿಂದ ಸಹಕಾರಿಯು ಯಶಸ್ಸನ್ನು ಸಾಧಿಸಬಹುದು”- ಒಡಿಯೂರು ಶ್ರೀ
“ಸಹಕಾರಿಯು ಯಶಸ್ಸು ಸಾಧಿಸಲು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ವ್ಯವಹಾರದಲ್ಲಿ ಒಂದು ಬಾಹ್ಯ ಮತ್ತು ಇನ್ನೊಂದು ಅಂತರಂಗದ ವ್ಯವಹಾರ. ಲೌಕಿಕ ಬದುಕಿನಲ್ಲಿ ಬಾಹ್ಯ ವ್ಯವಹಾರದೊಂದಿಗೆ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡಾಗ ಒಳಿತನ್ನು ಕಾಣಲು ಸಾಧ್ಯ. ಇದರಲ್ಲಿ ಸಮಾಜಮುಖಿ ಚಿಂತನೆ ಮತ್ತು ಪರಿಶುದ್ಧತೆ ಇರಬೇಕು. ಅಧ್ಯಾತ್ಮದ ಬದುಕಿಗೆ ಒಂದೇ ಉದ್ದೇಶ, ಸಮಾಜೋದ್ಧಾರಕ್ಕೆ ವಿವಿಧೋದ್ದೇಶ ಬೇಕು. ಇವೆಲ್ಲವೂ ನಮ್ಮ ಮನಸ್ಸಿನ…