Editor

Editor

ಶ್ರೀ ಒಡಿಯೂರು ಗ್ರಾಮೋತ್ಸವ ಸಮಿತಿಯ ಪ್ರಕಟಣೆ

ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ 2022ರ ಪ್ರಯುಕ್ತ ಒದಗಿಸುವ ಕೃತಕ ಕಾಲು ಮತ್ತು ಕೈ ಹಾಗೂ ಗಾಲಿಕುರ್ಚಿಯ ಅವಶ್ಯಕತೆಯ ಫಲಾನುಭವಿಗಳು ತಮ್ಮ ಆಧಾರ್‍ಕಾರ್ಡ್‍ನ ಪ್ರತಿ, ಮೊಬೈಲ್ ನಂಬ್ರ, ಭಾವಚಿತ್ರದೊಂದಿಗೆ ಜೂನ್ 30ರ ಒಳಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ ಸಮಿತಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್, ಅಂಚೆ:…

ವಿಶ್ವ ಯೋಗ ದಿನಾಚರಣೆ

“ಭಾರತ ವಿಶ್ವಕ್ಕೆ ಕೊಟ್ಟ ಕೊಡುಗೆಯೇ ಯೋಗ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜರಗಿದ ‘ವಿಶ್ವ ಯೋಗ ದಿನಾಚರಣೆ’ಯಲ್ಲಿ ಒಡಿಯೂರು ಶ್ರೀ ಆಶೀರ್ವಚನ “ಯೋಗ ಬಾಳನ್ನು ಬೆಳಗಿಸುವ ತತ್ತ್ವ. ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯ ಕಾಪಿಡುವ ಜೊತೆಗೆ ಚಂಚಲ ಚಿತ್ತವನ್ನು ಏಕಾಗ್ರತೆಗೆ ತರಲು ಯೋಗಾಭ್ಯಾಸ ಅವಶ್ಯ. ನಿರಂತರ ಯೋಗಾಭ್ಯಾಸದಿಂದ ರೋಗವೂ ದೂರಾಗಿ ಆರೋಗ್ಯವಂತರಾಗಬಹುದು. ಭಾರತ ದೇಶ ವಿಶ್ವಕ್ಕೆ…

ವಿಶ್ವ ಪರಿಸರ ದಿನಾಚರಣೆ

“ಪರಿಸರ ಕೊಡುವ ಪಾಠದಲ್ಲಿ ನಮ್ಮ ಬದುಕಿಗೂ ಪಾಠವಿದೆ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂದೇಶ ನೀಡಿದ ಒಡಿಯೂರು ಶ್ರೀ “ಪರಿಸರ ಸುಂದರವಾಗಿರಬೇಕಾದರೆ ಸ್ವಚ್ಛತೆ ಅತ್ಯಗತ್ಯ. ಪರಿಸರ ಸ್ವಚ್ಛವಾದರೆ ನಾವೂ ಸ್ವಚ್ಛವಿದ್ದೇವೆ ಎಂದರ್ಥ. ಪರಿಸರ ಸ್ವಚ್ಛತೆಯ ಕಾರ್ಯ ನಮ್ಮ ಮನಸ್ಸಿನಲ್ಲಿ ಮೂಡಬೇಕು; ಈ ಬಗ್ಗೆ ದೃಢ ಸಂಕಲ್ಪ ಮಾಡಬೇಕು. ಆಗ ಮಾತ್ರ ಭಾರತ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ‘ಒಡಿಯೂರು ಶ್ರೀ ಜನ್ಮದಿನೋತ್ಸವ – ಗ್ರಾಮೋತ್ಸವ’ದ ಪೂರ್ವಭಾವಿ ಸಭೆ

“ಗ್ರಾಮೋತ್ಸವದಿಂದ ರಾಷ್ಟ್ರೋತ್ಥಾನ” – ಒಡಿಯೂರು ಶ್ರೀ “ಸಮಾಜಮುಖಿ ಕಾರ್ಯಗಳು ಗ್ರಾಮೋತ್ಸವದ ಮೂಲಕ ಆಗಬೇಕಾಗಿದೆ. ಗ್ರಾಮೋತ್ಸವದ ಮೂಲಕ ರಾಷ್ಟ್ರೋತ್ಥಾನದ ಕಾರ್ಯವಾಗಲಿ. ಬದುಕು ಕೌಶಾಲ್ಯಾಧಾರಿತವಾಗಿರಬೇಕು. ಗುಣಾತ್ಮಕ ಹಾಗೂ ಋಣಾತ್ಮಕ ಪಟ್ಟಿ ಜೀವನದಲ್ಲಿ ಮಾಡಬೇಕು. ಜೀವನದಲ್ಲಿ ಬದಲಾವಣೆ ಅತೀ ಅಗತ್ಯ. ವಿಶ್ವದಲ್ಲಿ ಶಾಶ್ವತವಾದುದು ಯಾವುದೂ ಇಲ್ಲ. ಎಲ್ಲರನ್ನು ಅರಿತು ಬಾಳುವ ಬದುಕು ನಮ್ಮದಾಗಬೇಕು. ಆಧ್ಯಾತ್ಮದ ಬದುಕಿಗೆ ನಮ್ಮನ್ನು ತೊಡಗಿಸಿಕೊಳ್ಳುವ ಮನಮಾಡಬೇಕು.…

“ಆದರ್ಶ ಶಿಲ್ಪಕ್ಕೆ ನಾವೇ ಶಿಲ್ಪಿಗಳು” – ಶಿಕ್ಷಣ ಸಂಸ್ಥೆಗಳ ಶಾಲಾ ಆರಂಭೋತ್ಸವದಲ್ಲಿ ಒಡಿಯೂರು ಶ್ರೀ ಆಶೀರ್ವಚನ

“ರಾಷ್ಟ್ರೀಯ ಆದರ್ಶಗಳೆಂದರೆ ತ್ಯಾಗ ಮತ್ತು ಸೇವೆ. ಇವು ದೇಶದ ಎರಡು ಕಣ್ಣುಗಳಿದ್ದಂತೆ. ನಾನು, ನನ್ನದು ಎನ್ನುವ ಭಾವನೆ ತೊಲಗಿದಾಗ ನಾವೂ ಬೆಳೆಯುತ್ತೇವೆ, ಸಮಾಜವೂ ಬೆಳೆಯುತ್ತದೆ. ನಂಬಿಕೆಯೇ ಬದುಕು. ಅದನ್ನು ರೂಪಿಸಲು ಗುರುಕುಲ ಮಾದರಿ ಶಿಕ್ಷಣ ಸೂಕ್ತವಾದುದು. ವಿದ್ಯಾರ್ಥಿಗಳು ನಾಣ್ಯಗಳಾದರೆ, ಪೋಷಕರು ಮತ್ತು ಶಿಕ್ಷಕರು ನಾಣ್ಯದ ಎರಡು ಮುಖಗಳಿದ್ದಂತೆ. ಭಾವನೆಗಳು ಪರಿಶುದ್ಧವಾಗಿದ್ದಾಗ ಸತ್ಕಾರ್ಯಗಳು ನಡೆಯುತ್ತವೆ. ಆದರ್ಶಯುತ ಶಿಲ್ಪಿಗಳು…

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ

|| ಜೈ ಗುರುದೇವ್ || “ಪರೋಕಾರ ಮನೋಭಾವದ ಜೊತೆ ಮಾನವೀಯ ಮೌಲ್ಯ ಬೆಳೆಸಿಕೊಂಡಾಗ ಸುಸಂಸ್ಕøತ ಸಮಾಜ ನಿರ್ಮಾಣ” ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ “ಆತ್ಮವಿಶ್ವಾಸ ವೃದ್ಧಿಸಿಕೊಂಡು ಗ್ರಾಮದ ಜನರ ಭೇಟಿ, ಗುಂಪುಗಳ ರಚನೆ ಎಲ್ಲವನ್ನೂ ಪ್ರೀತಿಯಿಂದ ಮಾಡಿದಾಗ ಯಶಸ್ಸು. ಶಿಸ್ತು-ಸಂಯಮ, ಪರೋಪಕಾರದ ಮನೋಭಾವದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸುಸಂಸ್ಕøತ…

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ – 97.72% ಫಲಿತಾಂಶ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 2021-22ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ.ಯಲ್ಲಿ ಒಟ್ಟು 44 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಸುಮಾರು 24 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 18 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ 97.72% ಫಲಿಶಾಂಶ ದಾಖಲಿಸಿದೆ. ಕು| ಚೈತ್ರಲಕ್ಷ್ಮೀ 620 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾದರೆ, ಕು|…

10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

“ದೇಶಪ್ರೇಮದೊಂದಿಗೆ ಧರ್ಮಪ್ರಜ್ಞೆ ಮೈಗೂಡಿಸಿಕೊಳ್ಳಿ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಎ.13: “ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು. ಪ್ರಜ್ಞಾವಂತ ಪ್ರಜೆಗಳÀ ನಿರ್ಮಾಣದಿಂದ ಸದೃಢ ರಾಷ್ಟ್ರ ಕಟ್ಟುವುದು ನಮ್ಮ ಮುಖ್ಯ ಧ್ಯೇಯ. ಜಗತ್ತು ಒಂದು ಪಾಠಶಾಲೆ. ಅದರಲ್ಲಿ ಗುಣಾತ್ಮಕತೆಯನ್ನು ಆಯ್ಕೆ ಮಾಡುವ ಮೂಲಕ ಬದುಕನ್ನು ರೂಪಿಸಬೇಕು. ದೇಶಪ್ರೇಮದೊಂದಿಗೆ…

ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವ

“ಸಂಸ್ಕಾರಯುತ ಶಿಕ್ಷಣ ಭವಿಷ್ಯವನ್ನು ಬದಲಾಯಿಸುತ್ತದೆ” ಒಡಿಯೂರು ಶ್ರೀ ಗುರುದೇವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಕನ್ಯಾನ: “ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಗಳ ಅನಾವರಣಕ್ಕೆ ವಾರ್ಷಿಕೋತ್ಸವ ಉತ್ತಮ ವೇದಿಕೆ. ಕೌಶಲ್ಯ ಭರಿತ ಶಿಕ್ಷಣದೊಂದಿಗೆ ಸ್ವಾವಲಂಬಿಯಾಗಿ ಬದುಕಬೇಕು. ಉತ್ತಮ ಗುಣಮಟ್ಟದ ಉದ್ಯೋಗ ಇದ್ದರೆ ಅವನ ಬದುಕು ಬದಲಾಗುತ್ತದೆ. ಅದರ ಜೊತೆಗೆ ದೇಶ ಕಟ್ಟುವ ಕಾಯಕವು…

ಶ್ರೀ ಹನುಮೋತ್ಸವದ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

“ಮಕ್ಕಳಲ್ಲಿ ಭಾರತೀಯತೆಯ ಬೀಜ ಬಿತ್ತುವ ಕಾರ್ಯ ಮಾಡೋಣ” ಶ್ರೀ ಹನುಮೋತ್ಸವದ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಎ.16: “ಗುರುತತ್ತ್ವದ ಬೋಧನೆ ಅತೀ ಅಗತ್ಯ. ಆಕಾಶತತ್ತ್ವ ಶುದ್ಧವಾಗಿರು ವಂತದ್ದು. ಅದಕ್ಕೆ ಹೃದಯದ ಗುಣವಿದೆ. ಧರ್ಮಯುಕ್ತ ಕರ್ಮ ಜೀವನದಲ್ಲಿ ಅಳವಡಿಕೆಯಾಗಬೇಕು. ಇದರಿಂದ ಯಾವುದೇ ಅಪಾಯವಿಲ್ಲ. ರಾಮಾಯಣವು ಭಾರತೀಯ ಸಂಸ್ಕøತಿಯ ಕಣ್ಣು. ಬದುಕು ರೂಪಿಸಲು ಇದು ಸಹಕಾರಿ. ಇಂದಿನ ಕಾಲಘಟ್ಟದಲ್ಲಿ…