Editor

Editor

ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಬಹುಮಾನ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ 9ನೇ ತರಗತಿ ಕೋಲಾರದಲ್ಲಿ ಜರಗಿದ ರಾಜ್ಯಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯ ಸಂಸ್ಕೃತ ಭಾಷಣದಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿರುತ್ತಾಳೆ. ಇವಳಿಗೆ ಶಾಲಾ ಸಂಸ್ಕøತ ಅಧ್ಯಾಪಕಿ ಶ್ರೀಮತಿ ನಿವೇದಿತಾ ರವರು ಮಾರ್ಗದರ್ಶನವನ್ನು ನೀಡಿರುತ್ತಾರೆ.

ಜಿಲ್ಲಾ ಮಟ್ಟದ ಶ್ಲೋಕ ಕಂಠಪಾಠ: ಕು.ದೀಪಶ್ರೀ ಪದ್ಯಾಣ ತೃತೀಯ ಬಹುಮಾನ

ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ನೈತಿಕ ಶಿಕ್ಷಣ ಯೋಜನೆಯನ್ವಯ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಜಿಲ್ಲಾ ಮಟ್ಟದ ಶ್ಲೋಕ ಕಂಠಪಾಠ ವಿಭಾಗದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 9ನೇ ತರಗತಿ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾಳೆ

ಒಡಿಯೂರು ಶ್ರೀಗಳ ಸಂತಾಪ

ವಿಶ್ವವಂದ್ಯ, ವಿಶ್ವಸಂತ, ಉಡುಪಿ ಅಷ್ಟಮಠದ ಹಿರಿಯ ಯತಿಶ್ರೇಷ್ಠರಾದ ಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕೃಷ್ಣೈಕ್ಯರಾದುದು ಭಾರತೀಯ ಸನಾತನ ಪರಂಪರೆಗೆ ತುಂಬಲಾರದ ನಷ್ಟ. ಲೋಕೋದ್ಧಾರದ ಚುಕ್ಕಾಣಿ ಹಿಡಿದು, ಸಮನ್ವಯತೆಯ ಹರಿಕಾರರಾಗಿ ಆಧ್ಯಾತ್ಮಿಕ ಪರಿವ್ರಾಜಕರಾಗಿದ್ದ ಪೂಜ್ಯ ಶ್ರೀಗಳವರು ಅಗಲಿರುವುದು ತುಂಬಾ ದುಃಖವನ್ನುಂಟು ಮಾಡಿದೆ ಎಂದು ಒಡಿಯೂರು ಶ್ರೀಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಒಡಿಯೂರಿನಲ್ಲಿ ನಡೆದ ಉಚಿತ ನೇತ್ರ ತಪಸಣಾ ಮತ್ತು ಚಿಕಿತ್ಸಾ ಶಿಬಿರ

ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಬಂಟ್ವಾಳ ತಾಲೂಕು ಮತ್ತು ಕರೋಪಾಡಿ ಗ್ರಾಮ ಸಮಿತಿ ಹಾಗೂ ಘಟಸಮಿತಿ, ಇವರ ನೇತೃತ್ವದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ಮಂಗಳೂರು ಮತ್ತು ಸುಳ್ಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

ಒಡಿಯೂರಿನಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಬಂಟ್ವಾಳ ತಾಲೂಕು ಮತ್ತು ಕರೋಪಾಡಿ ಗ್ರಾಮ ಸಮಿತಿ ಹಾಗೂ ಘಟಸಮಿತಿ, ಇವರ ನೇತೃತ್ವದಲ್ಲಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ಮಂಗಳೂರು ಮತ್ತು ಸುಳ್ಯ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

“ಭಗವಂತನ ಕಲ್ಯಾಣಗುಣಗಳನ್ನು ಮೈಗೂಡಿಸಿಕೊಂಡಾಗ ಆಚರಣೆಗಳು ಅರ್ಥಪೂರ್ಣ”: ಒಡಿಯೂರು ಶ್ರೀ ಆಶೀರ್ವಚನ

“ಭಗವಂತನ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅಲೌಕಿಕ ಬದುಕು ಉನ್ನತಿಯನ್ನು ಸಾಧಿಸುತ್ತದೆ. ಲೌಕಿಕ ಬಂಧನದಿಂದ ಬಿಡುಗಡೆಗೊಂಡರೆ ಅದುವೇ ಮೋಕ್ಷ. ಬದುಕು ಸತ್ವಪೂರ್ಣವಾಗಿರಬೇಕು. ಧರ್ಮಯುಕ್ತವಾಗಿರಬೇಕು. ಪ್ರಪಂಚವೇ ನಮಗೆ ಪಾಠಶಾಲೆ. ಶ್ರೀ ಗುರುಚರಿತ್ರೆ ಅಮೃತವನ್ನು ಸವಿಯುವಂತೆ ಮಾಡುತ್ತದೆ. ಗುರುದತ್ತಾತ್ರೇಯರ ತತ್ತ್ವಗಳನ್ನು ನಮ್ಮೊಳಗೆ ಅನುಷ್ಠಾನಿಸಬೇಕು. ಆಗ ಭಗವಂತನ ಪ್ರೀತಿಗೆ ಪಾತ್ರರಾಗಲು ಸಾಧ್ಯ. ಹೃದಯದಲ್ಲಿ ದೃಢತೆ ಇದ್ದಾಗ ಕಾರ್ಯ ಸಾಧನೆಯಾಗುತ್ತದೆ. ಭಗವಂತನ ಕಲ್ಯಾಣಗುಣಗಳನ್ನು ಮೈಗೂಡಿಸಿಕೊಂಡಾಗ…

“ತ್ಯಾಗದಿಂದ ಕೂಡಿದ್ದರೆ ಬದುಕು ಸಾರ್ಥಕ” ಶ್ರೀ ದತ್ತಮಾಲಾಧಾರಣೆಗೈದು ಒಡಿಯೂರು ಶ್ರೀ ಆಶೀರ್ವಚನ

“ಬೋಗದ ಬದುಕು ನಿಜಾರ್ಥದ ಬದುಕಲ್ಲ. ತ್ಯಾಗದಿಂದ ಕೂಡಿದ್ದರೆ ಮಾತ್ರ ಬದುಕು ಸಾರ್ಥಕವೆನಿಸುತ್ತದೆ. ಸಮರಸ ತತ್ತ್ವವೆನಿಸಿದ ಗುರುತತ್ತ್ವ ಪ್ರತಿಯೊಬ್ಬರ ಬದುಕಿನಲ್ಲಿಯೂ ಅನುಷ್ಠಾನವಾಗಬೇಕಿದೆ. ಸಮುದ್ರದ ವಾತಾವರಣ ವ್ಯತ್ಯಯವಾದಾಗ ಸುನಾಮಿಗಳು ಏಳುವಂತೆ ನಮ್ಮ ಶರೀರದಲ್ಲಿ ಕಾಮ, ಕ್ರೋಧಗಳು ಅಧಿಕವಾದಾಗಲೂ ತ್ರಿಕರಣಾದಿಯಾಗಿ ಎಲ್ಲವೂ ಏರುಪೇರಾಗಬಹುದು. ಬದುಕಿನ ಅಥ್ ಅರಿವಾದಾಗ ನಾವು ಉತ್ತಮರಾಗುತ್ತೇವೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು…

“ಕಾನೂನಿನಲ್ಲಿ ಕಠಿಣತೆ ಇಲ್ಲದಿದ್ದರೆ ಅನಾಹುತ ಹೆಚ್ಚಾಗುತ್ತದೆ”- ಒಡಿಯೂರು ಶ್ರೀ

“ರಾಮಾಯಣ, ಮಹಾಭಾರತದಂತಹ ಪುರಾಣಗಳು ಯಕ್ಷಗಾನ ಕಲೆಯ ಮೂಲಕ ಹಳ್ಳಿಗಳ ಜನರನ್ನು ಮುಟ್ಟುತ್ತವೆ. ಯಕ್ಷಗಾನದ ಮೂಲಕ ಪ್ರಸಿದ್ಧಿ ಪಡೆದ ಅರ್ಹರಿಗೆ ಪ್ರಶಸ್ತಿ ನೀಡುವುದು ಅರ್ತಪೂರ್ಣವಾಗಿದೆ. ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳಲ್ಲಿ ಬರುವ ಅನೇಕ ರಕ್ಕಸರನ್ನು ನಾವು ಕಲೆಯ ಪ್ರೀತಿಯಿಂದ ನೋಡುತ್ತೇವೆ. ಇಂದಿಗೂ ದೇಶದಲ್ಲಿ ಅನೇಕ ಜಾತಿಯ ರಕ್ಕಸರು ಇದ್ದಾರೆ. ಸಜ್ಜನರಿಂದ ರಕ್ಕಸರ ಸಂಹಾರವೂ ಆಗುತ್ತಿರಬೇಕು. ಕಾನೂನಿನಲ್ಲಿ ಕಠಿಣತೆ ಇಲ್ಲದಿದ್ದರೆ…