Editor

Editor

ವಿಶ್ವವು ಕರೋನಾ ಖಾಯಿಲೆಯಿಂದ ಮುಕ್ತವಾಗಲಿ – ಒಡಿಯೂರು ಶ್ರೀ

ಅಪರೂಪವಾಗಿ ಇಂತಹ ಹಲವಾರು ಸೋಂಕಿನ ಖಾಯಿಲೆಗಳು ಈ ಹಿಂದೆಯೂ ಕಾಡಿದೆ, ಈಗಲೂ ಕಾಡುತ್ತಿದೆ. ಮುನ್ನೆಚ್ಚರಿಕೆ ಅವಶ್ಯ. ಈ ಸಂದರ್ಭದಲ್ಲಿ ನಮ್ಮ ಭಾರತೀಯ ಪದ್ಧತಿಯ ಆಹಾರಗಳು, ಪ್ರಾಣಾಯಾಮದಂತಹ ಯೋಗಾಭ್ಯಾಸಗಳು, ಆಯುರ್ವೇದ ಹಾಗೂ ಇನ್ನಿತ್ಯಾದಿ ಅನುಕೂಲಕರವಾದಂತಹ ಔಷಧಿಗಳನ್ನು ಉಪಯೋಗ ಮಾಡುವುದರಿಂದ ನಿಯಂತ್ರಣ ಸಾಧ್ಯವಾಗಬಹುದು. ಕೆಲವೇ ದಿನಗಳಲ್ಲಿ ಈ ರೋಗವು ನಿಯಂತ್ರಣಕ್ಕೆ ಬರಲಿ ಎಂದು ಆರಾಧ್ಯದೇವರನ್ನು ಪ್ರಾರ್ಥಿಸುತ್ತೇವೆ.

“ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು.” – ಒಡಿಯೂರು ಶ್ರೀ

  ಭಾರತೀಯತೆ ಅಂದರೆ ಸಂಸ್ಕೃತಿ. ಮಾತೃಹೃದಯ ಎಲ್ಲವನ್ನೂ ಅಪ್ಪಿಕೊಳ್ಳುತ್ತದೆ ಮತ್ತು ಒಪ್ಪಿಕೊಳ್ಳುತ್ತದೆ. ಮಕ್ಕಳ ಬಗ್ಗೆ ನಾವು ಕನಸನ್ನು ಕಾಣುವ. ಮಕ್ಕಳ ಜೊತೆ ಸಮಯ ಕಳೆಯಬೇಕು. ತಾಯಂದಿರು ಭಾಷೆಯ ಹಿಂದಿನ ಸಂಸ್ಕೃತಿಗೆ ಗಮನ ನೀಡಬೇಕು. ಬೇಕುಗಳನ್ನು ಕಡಿಮೆ ಮಾಡದೆ ಶಾಂತಿ ಲಭಿಸದು. ಜೀವನ ಮೌಲ್ಯ ತುಂಬುವ ಕೆಲಸ ತಾಯಿಯಿಂದ ಮನೆಯಲ್ಲೇ ಆಗಬೇಕು. ಆಗ ಮಾತ್ರ ಮಕ್ಕಳು ನಮ್ಮ…

‘ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ’ – ಒಡಿಯೂರು ಶ್ರೀ

‘ಬೀಳ್ಕೊಡುಗೆ ಎನ್ನುವುದು ಭವಿಷ್ಯತ್ತಿನ ಕಡೆಗೆ ಹೋಗಲಿರುವ ಕೊಡುಗೆ. ವಿದ್ಯಾರ್ಥಿ ಬದುಕು ಭೋಗದ ಬದುಕಲ್ಲ, ಇದು ತ್ಯಾಗದ ಬದುಕು. ಕಲ್ಪನಾಲೋಕದ ಬದುಕಿಗಿಂತ ವಾಸ್ತವದ ಅನ್ವೇಷಣೆ ಸಾಧನೆಯ ಕೈಗನ್ನಡಿ. ಉತ್ತಮ ಮಿತ್ರರನ್ನು ಸಂಪಾದಿಸಿ ಗುಣಾತ್ಮಕ ಚಿಂತನೆಯನ್ನು ತಮ್ಮದಾಗಿಸಬೇಕು. ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ವಿಷಯದಲ್ಲಿ ಪೋಷಕರು ವಿದ್ಯಾಭ್ಯಾಸ ಮುಂದುವರಿಯಲು ಬಿಡಬೇಕು. ಮಾತೃ ಋಣ, ಶಿಕ್ಷಕರ ಋಣ, ದೇಶದ ಋಣ ಸದಾ…

ಒಡಿಯೂರಿನಲ್ಲಿ 2ದಿನಗಳ ತುಳು ಕಾವ್ಯ ರಚನಾ ಕಮ್ಮಟ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಒಡಿಯೂರ್ದ ತುಳುಕೂಟದ ಸಹಕಾರದೊಂದಿಗೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ಎಪ್ರಿಲ್ 11 ಮತ್ತು 12ರ ಶನಿವಾರ ಮತ್ತು ಆದಿತ್ಯವಾರ ಎರಡು ದಿನಗಳ ತುಳು ಕಾವ್ಯ ರಚನಾ ಕಮ್ಮಟ(ತುಳು ಕಬಿತೆ ಕಟ್ಟುನ ಕಜ್ಜಕೊಟ್ಯ)ವನ್ನು ಏರ್ಪಡಿಸಲಾಗಿದೆ. ಹಿರಿಯ ಕವಿ-ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಶಿಬಿರದ ನಿರ್ದೇಶಕರಾಗಿದ್ದು, ತಜ್ಞರು ವಿಷಯ…

ಮಹಾಶಿವರಾತ್ರಿಯ ಪ್ರಯುಕ್ತ ಒಡಿಯೂರು ಸಂಸ್ಥಾನದಲ್ಲಿ ಶತರುದ್ರಾಭಿಷೇಕ ಜರಗಿತು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶತರುದ್ರಾಭಿಷೇಕ ಜರಗಿತು.

20ನೇ ತುಳು ಐಸಿರೊ ‘ತುಳು ಸಾಹಿತ್ಯ ಸಮ್ಮೇಳನ’ ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ

“ಮನೆ, ಮನೆಗಳಲ್ಲಿ ತುಳು ಭಾಷೆ ಮಾತನಾಡುವ ಮೂಲಕ ತುಳು ಮಾತೆಯ ಉತ್ಸವ ನಡೆಯಬೇಕು. ವಿಶ್ವವಿದ್ಯಾನಿಲಯಗಳಲ್ಲಿ ತುಳು ಭಾಷೆಗೆ ಮಾನ್ಯತೆ ಸಿಕ್ಕಿರುವುದರಿಂದ ತುಳುವಿನ ಭವಿಷ್ಯ ಭದ್ರವಾಗಿದೆ. ತುಳುವರು ಕಾರ್ಯಕ್ಕೆ ಇಳಿದಾಗ ಮಾತ್ರ ನಮ್ಮ ತುಳು ಭಾಷೆಯು 8ನೇ ಪರಿಚ್ಛೇದಕ್ಕೆ ಸೇರಲು ಸಾಧ್ಯ. ಆನಂದದ ಮೂಲ ತ್ಯಾಗದಲ್ಲಿದೆ. ತ್ಯಾಗದಲ್ಲಿ ಮಾತ್ರ ಆನಂದದ ಅನುಭವವಿದೆ. ತುಳುವರಲ್ಲಿ ಹೃದಯ ಸಿರಿವಂತಿಕೆ ಇದೆ”…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶತರುದ್ರಾಭಿಷೇಕ

ಶ್ರೀ ಸಂಸ್ಥಾನದಲ್ಲಿ ತಾ. 21-02-2020ನೇ ಶುಕ್ರವಾರ ರಾತ್ರಿ ಮಹಾ ಶಿವರಾತ್ರಿಯ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಆರಾಧ್ಯ ದೇವರಿಗೆ ಶತರುದ್ರಾಭಿಷೇಕ ನಡೆಯಲಿರುವುದು. ತಾವೆಲ್ಲರೂ ಪಾಲ್ಗೊಂಡು ಆರಾಧ್ಯ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷೆ. ಸೇವೆ ಮಾಡಲಿಚ್ಛಿಸುವವರು ಶ್ರೀ ಸಂಸ್ಥಾನದ ಸೇವಾವಿಭಾಗದಲ್ಲಿ ಹೆಸರು ನೋಂದಾಯಿಸಬಹುದು.

“ಜೀವನ ರಥದ ಪಥವೇ ಧರ್ಮ” ಶ್ರೀಒಡಿಯೂರು ರಥೋತ್ಸವದ ಧರ್ಮಸಭೆಯಲ್ಲಿ-ಒಡಿಯೂರು ಶ್ರೀ

“ಕೃಷಿ ಸಂಸ್ಕøತಿ-ಋಷಿ ಸಂಸ್ಕøತಿ ಸಮಾನವಾಗಿ ಸಾಗಬೇಕು. ಆತ್ಮತತ್ತ್ವ ಮಾತ್ರವೇ ಸತ್ಯ. ಜೀವನ ರಥದ ಪಥವೇ ಧರ್ಮ. ಆಗ ಉದ್ದೇಶಿತ ಗುರಿ ತಲಪಲು ಸಾಧ್ಯ. ಆತ್ಮೋನ್ನತಿಯ ಕಡೆಗೆ ಜೀವನರಥವನ್ನು ಎಳೆಯಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆಯ ಧರ್ಮಸಭೆಯನ್ನು ಉದ್ಘಾಟಿಸಿ ಆಶೀರ್ವಚನವಿತ್ತರು. ವೇದಿಕೆಯಲ್ಲಿ ಪರಮಪೂಜ್ಯ…