Editor

Editor

ಕೃಷಿ ಸಂಪತ್ತೇ ಭಾರತದ ಸಂಪತ್ತು

ರೈತರ ಶ್ರಮಕ್ಕೆ ಪ್ರತಿಫಲ ನಿಶ್ಚಿತ –ಒಡಿಯೂರು ಶ್ರೀ ಕನ್ಯಾನ, ಜ.11: “ಪ್ರಕೃತಿಯನ್ನು ಉಳಿಸುವ ಕಾರ್ಯ ಎಲ್ಲೆಡೆ ಆಗಬೇಕು. ಕೃಷಿ ಸಂಪತ್ತೇ ಭಾರತದ ಸಂಪತ್ತು. ಅದು ನಮ್ಮ ಸಂಸ್ಕøತಿಯೂ ಹೌದು. ಕೋವಿಡ್‍ನಿಂದಾಗಿ ಕೃಷಿ ಪ್ರಗತಿಯತ್ತ ಸಾಗಿದೆ. ಕೃಷಿಕರ ಬೆಳವಣಿಗೆಗೆ ಸಹಕರಿಸಬೇಕು. ಕೃಷಿಯ ಆಸಕ್ತಿಯಿಂದ ಭಾರತ ಉಳಿದಿದೆ. ಬಾಹ್ಯದಲ್ಲಿ ಆಹಾರದ ಕೃಷಿ ಮಾಡುವ ಜೊತೆಗೆ ಅಂತರಂಗದಲ್ಲಿ ಅಧ್ಯಾತ್ಮದ ಕೃಷಿಯನ್ನೂ…

ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ, ಪುತ್ತೂರು ಘಟಕದ ಕಛೇರಿ ಉದ್ಘಾಟನೆ ಮತ್ತು ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ

“ಷಷ್ಟಬ್ದ ಸಂಭ್ರಮ ರಾಷ್ಟ್ರೋತ್ಥಾನಕ್ಕೆ ಮುನ್ನುಡಿಯಾಗಲಿ, ಸಂಸ್ಕøತಿಯ ವಾಹಿನಿಯಾಗಲಿ” –ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿ, ಪುತ್ತೂರು ಘಟಕದ ಕಛೇರಿ ಉದ್ಘಾಟನೆ ಮತ್ತು ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ ಪುತ್ತೂರು, ಜ.22: “ಜನಸೇವೆ, ಸಮಾಜಮುಖಿ ಚಟುವಟಿಕೆ ಹಮ್ಮಿಕೊಳ್ಳುವುದೇ ಷಷ್ಠ್ಯಬ್ದದ ಮೂಲ ಉದ್ದೇಶ. ಹಾಗಾಗಿ ಇದು ರಾಷ್ಟ್ರೋತ್ಥಾನಕ್ಕೆ ಮುನ್ನುಡಿಯಾಗುವ, ಸಂಸ್ಕøತಿಯನ್ನು ಪಸರಿಸುವ ವಾಹಿನಿಯಾಗಲಿ ಅನ್ನುವುದೇ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹ ಸಂಪನ್ನ

“ಆದಿಗುರು ದತ್ತಾತ್ರೇಯರು ವಿಶ್ವ ಮಾನವ ಧರ್ಮವನ್ನು ಜಗತ್ತಿಗೆ ಪಸರಿಸಿದವರು. ದತ್ತ ತತ್ತ್ವದ ಚಿಂತನೆ ಪಾಲನೆಯಿಂದ ಸಮರಸದ ಜೀವನ ಸಾಧ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಿದ ಶ್ರೀ ದತ್ತ ಜಯಂತ್ಯುತ್ಸವದ ಧರ್ಮಸಭೆಯಲ್ಲಿ ಸಂದೇಶ ನೀಡಿದರು. ಅವರು ಪ್ರೊ. ವಿ.ಬಿ. ಅರ್ತಿಕಜೆಯವರು ಕನ್ನಡಕ್ಕೆ ಅನುವಾದಿಸಿದ ‘ಶ್ರೀ ದತ್ತಾಂಜನೇಯ ಸಹಸ್ರನಾಮ’…

ಬೆಳಕಿನೆಡೆಗೆ…

ದೀಪದ ಆರಾಧನೆ ದೀಪೋತ್ಸವ. ಬದುಕೇ ದೀಪೋತ್ಸವ ಆಗಬೇಕು. ಅಂತರ್‍ಜ್ಯೋತಿ ಬೆಳಗಿದರೆ ನಮ್ಮಲ್ಲಿ ಹುದುಗಿರುವ ಅಸುರ ಶಕ್ತಿಯೆಂಬ ಅಂಧÀಕಾರ ನೀಗಿ ಜ್ಞಾನದ ಬೆಳಕು ಮೂಡಿ ಬರಲು ಸಾಧ್ಯ. ಬೆಳಕಿಲ್ಲದೆ ಕತ್ತಲಿಲ್ಲ, ಕತ್ತಲಿಲ್ಲದೆ ಬೆಳಕಿಲ್ಲ. ಬೆಳಕಿನ ದೀಪ ಬೆಳಗಿಸಲು ಕತ್ತಲು ಬೇಕು. ಅಂಧಕಾರವನ್ನು ಓಡಿಸಲು ಬೆಳಕು ಬೇಕು. ಆ ಬೆಳಕು ಎಂಬ ಶಕ್ತಿ ಪ್ರತಿಯೋರ್ವನ ದೇಹದ ಒಳಗೂ ಇದೆ…

ಸಮಾಜದ ಸ್ವಾಸ್ಥ್ಯಕ್ಕೆ ಆರಾಧನೆಗಳು ಪೂರಕ – ಒಡಿಯೂರು ಶ್ರೀ

“ಸಮುದ್ರ ಮಥನ ಸಮಯದಲ್ಲಿ ಅವತರಿಸಿದ ಶ್ರೀ ಧನ್ವಂತರೀ ದೇವರ ಆರಾಧನೆಯಿಂದ ಸರ್ವರೋಗ ನಿವಾರಣೆಯಾಗುತ್ತದೆ. ಆರೋಗ್ಯಪೂರ್ಣ ಬದುಕಿಗೆ ಭಗವದಾರಾಧನೆಯ ಅಗತ್ಯವಿದೆ. ನೈತಿಕ ಸ್ವಾಸ್ಥ್ಯ, ಸಮಾಜದ ಸ್ವಾಸ್ಥ್ಯಕ್ಕೆ ಆರಾಧನೆಗಳು ಪೂರಕ. ಶ್ರೀ ಧನ್ವಂತರೀ ದೇವರ ಆರಾಧನೆಯ ಮೂಲಕ ಕೊರೋನಾ ಮಹಾಮಾರಿಯಿಂದ ಜಗತ್ತೇ ಮುಕ್ತಿಹೊಂದಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಹವನ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನ.12ರಂದು ಗುರುವಾರ ಬೆಳಿಗ್ಗೆ ಪರಮಪೂಜ್ಯ ಶ್ರೀಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಧನ್ವಂತರೀ ಜಯಂತಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಶ್ರೀ ಧನ್ವಂತರೀ ಹವನವು ನಡೆಯಲಿರುವುದು.

ಇದ್ದುದರಲ್ಲಿ ತೃಪ್ತಿ ಇರಲಿ; ಸಂತೃಪ್ತಿಯೇ ಸಂಪತ್ತು –ಒಡಿಯೂರು ಶ್ರೀ

“ಜ್ಞಾನ ಇಲ್ಲದ ಬದುಕು ಬದುಕಲ್ಲ. ಸಮಸ್ಯೆ ಬಂದರೆ ಅನುಭವ ಬರುತ್ತದೆ. ಅನುಭವದಿಂದ ನಮಗೆ ಜ್ಞಾನ ಲಭಿಸುತ್ತದೆ. ಲೌಕಿಕ ಜ್ಞಾನದ ಜೊತೆಗೆ ಅಲೌಕಿಕ ಜ್ಞಾನವೂ ನಮಗೆ ಅವಶ್ಯಕ. ಅದನ್ನೇ ಕಠೋಪನಿಷತ್ತಿನಲ್ಲಿ ಪರಾ ವಿದ್ಯೆ ಮತ್ತು ಅಪರಾ ವಿದ್ಯೆ ಎಂಬುದಾಗಿ ವಿಂಗಡಿಸಿ ತಿಳಿಸಿದ್ದಾರೆ. ಅಪರಾ ವಿದ್ಯೆಯೇ ಅಲೌಕಿಕ ವಿದ್ಯೆ. ಅರ್ಥಾತ್ ಅಧ್ಯಾತ್ಮ ವಿದ್ಯೆ. ಆ ಮೂಲಕ ನಾವು ಬದುಕಿನಲ್ಲಿ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಅಕ್ಟೋಬರ 20ರಂದು ಮಂಗಳವಾರ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ – ಶ್ರೀ ಚಂಡಿಕಾ ಯಾಗವು ನಡೆಯಲಿರುವುದು. ಬೆಳಿಗ್ಗೆ ಮಂಗಳಾರತಿಯ ಬಳಿಕ ಶ್ರೀ ನಾಗದೇವರಿಗೆ ನಾಗತಂಬಿಲ. ಗಂಟೆ 9.30ಕ್ಕೆ ಶ್ರೀ ಚಂಡಿಕಾ ಯಾಗವು ಆರಂಭಗೊಂಡು…

ಒಡಿಯೂರು ಶ್ರೀಗಳ ಷಷ್ಠ್ಯಬ್ದಿ ಸಂಭ್ರಮ ನಮ್ಮ ಕುಡ್ಲ ಟಿವಿ ವಾಹಿನಿಯಿಂದ ‘ಗುರುದೇವಾಮೃತ’ 60 ಜ್ಞಾನವಾಹಿನಿ ಪ್ರಸಾರ ಚಿತ್ರೀಕರಣಕ್ಕೆ ಚಾಲನೆ

ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ 60ರ ಸಂಭ್ರಮದ ಅಂಗವಾಗಿ ನಮ್ಮ ಕುಡ್ಲ ಟಿ.ವಿ. ವಾಹಿನಿ ನಿರಂತರ 60 ದಿನಗಳ ‘ಗುರುದೇವಾಮೃತ’ ಜ್ಞಾನವಾಹಿನಿ ಆಧ್ಯಾತ್ಮಿಕ ಚಿಂತನಾಸತ್ರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಿದ್ದು ಅದರ ಚಿತ್ರೀಕರಣಕ್ಕೆ ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಪೂಜ್ಯ ಶ್ರೀಗಳವರು ದೀಪ ಪ್ರಜ್ವಲನಗೊಳಿಸಿ ಚಾಲನೆ ನೀಡಿದರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀಗಳ…