ವಿಶ್ವ ಪರಿಸರ ದಿನಾಚರಣೆ

“ಪರಿಸರ ಕೊಡುವ ಪಾಠದಲ್ಲಿ ನಮ್ಮ ಬದುಕಿಗೂ ಪಾಠವಿದೆ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಂದೇಶ ನೀಡಿದ ಒಡಿಯೂರು ಶ್ರೀ
“ಪರಿಸರ ಸುಂದರವಾಗಿರಬೇಕಾದರೆ ಸ್ವಚ್ಛತೆ ಅತ್ಯಗತ್ಯ. ಪರಿಸರ ಸ್ವಚ್ಛವಾದರೆ ನಾವೂ ಸ್ವಚ್ಛವಿದ್ದೇವೆ ಎಂದರ್ಥ. ಪರಿಸರ ಸ್ವಚ್ಛತೆಯ ಕಾರ್ಯ ನಮ್ಮ ಮನಸ್ಸಿನಲ್ಲಿ ಮೂಡಬೇಕು; ಈ ಬಗ್ಗೆ ದೃಢ ಸಂಕಲ್ಪ ಮಾಡಬೇಕು. ಆಗ ಮಾತ್ರ ಭಾರತ ದೇಶವೇ ಸ್ವಚ್ಛವಾಗಿರಲು ಸಾಧ್ಯ. ಪರಿಸರ ಸ್ವಚ್ಛ ಇಲ್ಲದಿದ್ದರೆ ಆರೋಗ್ಯ ಮತ್ತು ಬದುಕಿಗೆ ಮಾರಕ. ಮರ, ಹರಿದು ಹೋಗುವ ನೀರು ನಮಗೆ ಸ್ವಚ್ಛತೆಯ ಪಾಠವನ್ನು ತಿಳಿಸುತ್ತದೆ. ನಾವೆಲ್ಲರೂ ಪರಿಸರ ಪ್ರೇಮಿಗಳಾಗಬೇಕು. ಮನೆಗೊಂದು ಕೈತೋಟವಿರಬೇಕು. ನಮ್ಮ ಸುತ್ತಲೂ ಹಸಿರಿನ ವಾತಾವರಣವಿರಬೇಕು. ಆಗ ಶುದ್ಧ ಗಾಳಿಯನ್ನು ಪಡೆಯಬಹುದು. ಪರೋಪಕಾರದ ಬದುಕು ನಮ್ಮದಾಗಬೇಕು. ಪರಿಸರ ಕೊಡುವ ಪಾಠದಲ್ಲಿ ನಮ್ಮ ಬದುಕಿಗೂ ಪಾಠವಿದೆ. ಪರಿಸರ ಉಳಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರಯತ್ನ ಮಾಡೋಣ. ಪರಿಸರದ ಉಳಿವಿಗೆ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದ ಪರಿಸರದಲ್ಲಿ ಹನುಮಫಲ ಮತ್ತು ಲಕ್ಷ್ಮಣ ಫಲಗಳ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯ ಸಂದೇಶ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಈ ಸುಸಂದರ್ಭ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್, ಮುಖ್ಯೋಪಾಧ್ಯಾಯಿನಿ ರೇಣುಕಾ ಎಸ್.ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಪಿ. ಲಿಂಗಪ್ಪ ಗೌಡ, ಒಡಿಯೂರುದ ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ, ಯೋಜನೆಯ ಬಂಟ್ವಾಳ ತಾಲೂಕಿನ ಸಂಯೋಜಕಿಯರು, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಉಪಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹಾಗೂ ಸದಸ್ಯರು, ಶ್ರೀ ಸಂಸ್ಥಾನ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಸದಸ್ಯೆಯರು ಭಾಗವಹಿಸಿದ್ದರು.