ಕು.ದೀಪಶ್ರೀಗೆ ಶ್ಲೋಕ ಕಂಠಪಾಠದಲ್ಲಿ ದ್ವಿತೀಯ : ಕು.ವಿದ್ಯಾಲಕ್ಷ್ಮಿ ಭಾಷಣ ಸ್ಪರ್ಧೆಯಲ್ಲಿ ತೃತೀಯ
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿನಿ ಕು.ದೀಪಶ್ರೀ ಪದ್ಯಾಣ 9ನೇ ತರಗತಿ ಶಾಂತಿವನ ಟ್ರಸ್ಟ್ ರಿ. ಧರ್ಮಸ್ಥಳ ಆಯೋಜಿಸಿದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಬದುಕಿಗೆ ಬೆಳಕು ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ. ಮತ್ತು ಹಿರಿಯ ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಕು. ವಿದ್ಯಾಲಕ್ಷ್ಮಿ 6ನೇ ತರಗತಿ ತೃತೀಯ ಬಹುಮಾನವನ್ನು ಪಡೆದು ಕೊಂಡಿರುತ್ತಾಳೆ.