22ನೇ ತುಳು ಐಸಿರೋ – ತುಳು ಸಾಹಿತ್ಯ ಸಮ್ಮೇಳನ
“ಜ್ಞಾನ ತುಂಬಿದ ತುಳುವರು ಕ್ರೀಯಾಶೀಲರಾಗುವ ಅಗತ್ಯವಿದೆ”
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ‘ರಾಜಾಂಗಣ’ದ ಆತ್ರೇಯ ಮಂಟಪದಲ್ಲಿ ಜರಗಿದ 22ನೇ ತುಳು ಐಸಿರೋ – ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಸಂದೇಶ
ಫೆ. 10: “ಸಹನೆ, ತ್ಯಾಗದಿಂದ ಸಂಸ್ಕøತಿ ಉಳಿಯುತ್ತದೆ. ಸಾಧನೆಯಿಂದ ಸಾರ್ಥಕ ಬದುಕು ಮಾಡಬಹುದು. ತುಳುವರಲ್ಲಿ ಇಚ್ಛಾಶಕ್ತಿ ಜಾಗೃತಿಯಾಗಬೇಕಾಗಿದೆ. ಸಾಧನೆ ಮಾಡದಿದ್ದರೆ ಸಾವಿಗೆ ಅವಮಾನ, ಆದರ್ಶ ಬದುಕಾಗದಿದ್ದರೆ ಬದುಕಿಗೆ ಅವಮಾನ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿದಾಗ ಸಮಾಜಮುಖಿ ಸೇವೆ ಸಾಧ್ಯವಾಗುತ್ತದೆ. ಜ್ಞಾನ ತುಂಬಿದ ತುಳುವರು ಕ್ರಿಯಾಶೀಲರಾಗುವ ಅಗತ್ಯವಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನಗೈದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ‘ರಾಜಾಂಗಣ’ದ ಆತ್ರೇಯ ಮಂಟಪದಲ್ಲಿ ಜರಗಿದ 22ನೇ ತುಳು ಐಸಿರೋ – ತುಳು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಅವರು “ಭಾಷೆ, ಸಂಸ್ಕøತಿಯ ಬಗ್ಗೆ ಜಾಗೃತವಾಗುವುದು ಯಾವಾಗ? ತುಳುವರಿಗೆ ತುಳು ಬೇಡವೆಂದಾದಲ್ಲಿ ಭಾಷೆ ಉಳಿಯುವುದು ಹೇಗೆ? ಮೆಕಾಲೆತನ ಹೋಗಿ ಭಾರತೀಯತೆ ಮೆರೆಯಬೇಕು. ಭಾಷೆ ಉಳಿದಾಗ ಸಂಸ್ಕøತಿ ಅರಳುತ್ತದೆ. ನಾವು ನಮ್ಮದೆಂಬ ಭಾವನೆ ಬರಬೇಕು. ಬಹುಭಾಷೆಯ ನಡುವೆ ತುಳುವನ್ನು ಉಳಿಸುವ ನಿಟ್ಟಿನಲ್ಲಿ ತುಳುವರು ಕಾರ್ಯಪ್ರವೃತ್ತರಾಗಬೇಕು” ಎಂದರು.
ಈ ಸುಸಂದರ್ಭ ಒಡಿಯೂರುದ ತುಳುಕೂಟದ ವತಿಯಿಂದ ಪೂಜ್ಯ ಶ್ರೀಗಳವರನ್ನು ಗೌರವಿಸಲಾಯಿತು. ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು.
ಶಿರ್ವ ನಿವೃತ್ತ ಪ್ರಾಂಶುಪಾಲೆ ಪೆÇ್ರ. ಚಂದ್ರಪ್ರಭಾ ಆರ್. ಹೆಗ್ಡೆ, ಕ್ಯಾಂಪೆÇ್ಕೀ ನಿರ್ದೇಶಕ ಡಾ. ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಮುಂಬಯಿ ಸಮಿತಿಯ ಅಧ್ಯಕ್ಷ ಶ್ರೀ ವಾಮಯ್ಯ ಬಿ. ಶೆಟ್ಟಿ ಚೆಂಬೂರು, ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಮುಂಬಯಿ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ, ಥಾಣೆಯ ಉದ್ಯಮಿ ಶ್ರೀ ಮೋಹನ ಹೆಗ್ಡೆ ಬೆಜ್ಜ, ಉಡುಪಿ ತುಳುಕೂಟದ ಅಧ್ಯಕ್ಷ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಮಂಗಳೂರು ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲ ಶ್ರೀ ದಯಾನಂದ ಕಟೀಲು ಮತ್ತಿತರರು ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಪ್ರಾರ್ಥಿಸಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶು ವಿಟ್ಲ ಸ್ವಾಗತಿಸಿ, ಪ್ರಾಸ್ತಾವನೆಗೈದರು. ಒಡಿಯೂರು ಶ್ರೀ ಗುರುದೇವ ಐ. ಟಿ. ಐ.ನ ಪ್ರಾಂಶುಪಾಲ ಶ್ರೀ ಕರುಣಾಕರ ಎನ್.ಬಿ. ವಂದಿಸಿದರು. ಷಷ್ಠ್ಯಬ್ದ ಸಂಭ್ರಮ ಪುತ್ತೂರು ಸಮಿತಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ತುಳು ತುಲಿಪು ಕಾರ್ಯಕ್ರಮ:
ತುಳು ಸಾಹಿತ್ಯ ಸಮ್ಮೇಳನದ ‘ತುಳು ತುಲಿಪು’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲೆ ಪೆÇ್ರ. ಚಂದ್ರಪ್ರಭಾ ಆರ್. ಹೆಗ್ಡೆ ಅಧ್ಯಕ್ಷೀಯ ಭಾಷಣ ಮಾಡಿ “ತುಳುವಿನ ಇತಿಹಾಸವನ್ನು ನೋಡಿದರೆ ಹೆಮ್ಮೆ ಪಡುವಂತಿದೆ. ಆಧ್ಯಾತ್ಮದ ನೆಲೆಗಟ್ಟಿನಲ್ಲಿ ಭಾರತೀಯ ಶಿಕ್ಷಣಪದ್ದತಿಯಿತ್ತು. ಐದು ದ್ರಾವಿಡ ಭಾಷೆಯಲ್ಲಿ ತುಳು ಲಿಪಿ ಸದೃಢವಾಗಿದೆ. ಆಧುನಿಕ ತಂತ್ರಜ್ಞಾನದ ಜತೆಗೆ ಭಾಷೆ ಸಂಸ್ಕೃತಿಯನ್ನು ಮರೆಯುವ ಕಾರ್ಯ ಮಾಡಬಾರದು. ತುಳುವಿಗೆ ಸಾಕಷ್ಟು ಅವಕಾಶಗಳಿದ್ದು, ಜನಜಾಗೃತಿಯಾಗಬೇಕು. ಭಾರತೀಯ ಸನಾತನ ಸಂಸ್ಕೃತಿಗೆ ಅಂತ್ಯವಿಲ್ಲ” ಎಂದರು.
ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಶೋಧಕ ಡಾ. ಮಾಧವ ಎಂ.ಕೆ. ಇವರು ‘ಶಿಕ್ಷಣೊಡು ತುಳು ಬಾಸೆ’ ಈ ವಿಚಾರವಾಗಿ ಮಾತನಾಡಿ “ತುಳುವಿನ ಸಾಹಿತ್ಯ ದಾಖಲೀಕರಣ, ಗಣಕೀಕರಣದ ಕಾರ್ಯ ದೊಡ್ಡ ಸವಾಲಾಗಿದೆ. ಭಾಷೆ ಸಧೃಡವಾಗಬೇಕಾದರೆ ಲಿಖಿತರೂಪಕ್ಕೆ ಬರುವ ಅನಿವಾರ್ಯತೆಯಿದೆ. ದಾಸ್ಯ ಪ್ರವೃತ್ತಿ ಭಾಷೆಯ ಮೇಲೆ ಪರಿಣಾಮ ಬೀರುತ್ತಿದೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ತುಳು ಭಾಷೆಯಾಗಿದ್ದರೂ, ಎಲ್ಲಾ ಶಾಲೆಗಳಲ್ಲಿ ತುಳು ಕಲಿಸುವ ಕಾರ್ಯವಾಗುತ್ತಿಲ್ಲ. ತುಳು ಶಿಕ್ಷಣ ರಂಗದಲ್ಲಿ ಹೆಚ್ಚು ಹೆಚ್ಚು ಬಳಕೆಯಾಗಬೇಕು. ಗ್ರಾಂಥಿಕ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಭಾಷೆ ಬರುವ ಕಾರ್ಯವಾಗಬೇಕು” ಎಂದರು.
ಮಂಗಳೂರು ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲ ಶ್ರೀ ದಯಾನಂದ ಕಟೀಲು ಇವರು “ಬಹುಸಂಸ್ಕøತಿಡ್ ತುಳು ಸಂಸ್ಕøತಿದ ಒರಿಪು” ಈ ವಿಚಾರವಾಗಿ ಮಾತನಾಡಿ “ತುಳುನಾಡಿನಲ್ಲಿ ಹಣದ ವ್ಯವಹಾರವಿಲ್ಲದೆ ಅಕ್ಕಿ, ತೆಂಗಿನಕಾಯಿಯನ್ನು ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ವ್ಯವಹಾರ ನಡೆಯುತ್ತಿತ್ತು. ಕೃಷಿ -ಋಷಿ ಪರಂಪರೆಯನ್ನು ಹೊಂದಿರುವ ತುಳುನಾಡಿನ ತುಳುವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ವಾಣಿಜ್ಯ ಬೆಳೆ ಕರಾವಳಿಗೆ ಬಂದ ಬಳಿಕ ತುಳು ಬಳಕೆ ಕಡಿಮೆಯಾಗಿದೆ. ಶ್ರಮ ಜೀವಿಗಳಾದ ತುಳುವರು ಕಲೆ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ” ಎಂದರು.
ಷಷ್ಠ್ಯಬ್ದ ಸಂಭ್ರಮ-ಹಿರಿಯ ಸಾಧಕರಿಗೆ ತಮ್ಮನ-ಬಲ್ಮನ
“ಸಮಾಜದ ಕೊಳೆ ತೆಗೆಯುವ ಕಾರ್ಯ ಸಾಧುಸಂತರಿಂದ ನಡೆಯಬೇಕು. ನಮ್ಮನ್ನು ಅರಿತಾಗ ಆಧ್ಯಾತ್ಮದ ಅರಿವಾಗುತ್ತದೆ. ಮಾನವೀಯ ಮೌಲ್ಯವನ್ನು ಅರಿತಾಗ ಬದುಕು ಸುಂದರವಾಗುತ್ತದೆ. ಆಧ್ಯಾತ್ಮತತ್ತ್ವ್ವದಿಂದ ಆನಂದ ಪ್ರಾಪ್ತಿಯಾಗುತ್ತದೆ. ಅಂತರಂಗದ ವಿಕಾಸಕ್ಕೆ ಧರ್ಮ ಪ್ರಜ್ಞೆ ಅಗತ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂಜೆ ನಡೆದ ಒಡಿಯೂರು ಶ್ರೀ ಷಷ್ಠ್ಯಬ್ದ ತಮ್ಮನ – ಬಲ್ಮನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಒಡಿಯೂರು ಶ್ರೀ ಪ್ರಶಸ್ತಿ ಪ್ರದಾನ’ ಮಾಡಿ ಆಶೀರ್ವಚನ ನೀಡಿದರು.
87 ಸಾಧಕರಿಗೆ ಒಡಿಯೂರು ಶ್ರೀ ಪ್ರಶಸ್ತಿ:
ವಿದ್ವಾನ್ ಶ್ರೀ ಹಿರಣ್ಯ ವೆಂಕಟೇಶ್ವರ ಭಟ್, ಶ್ರೀ ಅಪ್ಪಣ್ಣ ಹೆಗ್ಡೆ ಬಸ್ರೂರು, ಶ್ರೀ ಮಹಾಲಿಂಗ ನಾಯ್ಕ ಅಮೈ, ವೇ|ಮೂ| ಚಂದ್ರಶೇಖರ ಉಪಾಧ್ಯಾಯ, ಶ್ರೀ ಕೆ. ಸೀತಾರಾಮ ರೈ ಸವಣೂರು, ಪೆÇ್ರ. ಜಿ.ಆರ್.ರೈ ಪೆರುವಾಯಿ, ಶ್ರೀ ಭುಜಬಲಿ ಧರ್ಮಸ್ಥಳ, ಡಾ. ವಿ.ಕೆ. ಹೆಗ್ಡೆ, ವಿಟ್ಲ, ಶ್ರೀ ನಾರಾಯಣ ರೈ ಅಡ್ವಾಯಿ, ಡಾ. ವಸಂತಕುಮಾರ ಪೆರ್ಲ, ಶ್ರೀ ಮಹಾಬಲ ಪೂಜಾರಿ ಕಡಂಬೋಡಿ, ಶ್ರೀ ಮುರುವ ಮಹಾಬಲ ಭಟ್, ಶ್ರೀ ಸಿಎ| ರಾಮ್‍ಮೋಹನ ರೈ, ಶ್ರೀ ಸತೀಶ್ ಶೆಟ್ಟಿ ಪಟ್ಲ, ಶ್ರೀ ಕಡಮಜಲು ಸುಭಾಸ್ ರೈ, ಪೆÇ್ರ. ವಿ.ಬಿ. ಅರ್ತಿಕಜೆ, ಪುತ್ತೂರು, ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ, ಶ್ರೀ ಉದಯ ಕೆ.ಶೆಟ್ಟಿ ಎರ್ಮಾಳ್, ಶ್ರೀ ದೇವಿದಾಸ್ ಶೆಟ್ಟಿ ಪಾಲ್ತಾಜೆ, ಶ್ರೀ ಎ.ಸಿ. ಭಂಡಾರಿ, ಸಜಿಪಮುನ್ನೂರು, ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ, ಶ್ರೀ ವಿವೇಕ್ ವಿ.ಪಾಯಸ್, ಮಡಂತ್ಯಾರು, ಶ್ರೀ ಎ. ಅಶೋಕ್‍ಕುಮಾರ್ ಬಿಜೈ, ಡಾ| ಎಸ್.ಆರ್. ಹರೀಶ ಆಚಾರ್ಯ, ಡಾ. ಜಗದೀಶ ಶೆಟ್ಟಿ, ಮಂಗಳೂರು, ಶ್ರೀ ಲಕ್ಷ್ಮೀಶ ಎಡ್ಯಾಲ್ ಮಂಗಳೂರು, ಶ್ರೀ ಶಾಂತಪ್ಪ ರೈ ಸುಳ್ಯ, ಶ್ರೀ ಮಂಜುನಾಥ ಡಿ.ಶೆಟ್ಟಿ ಇರಾ, ಶ್ರೀ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಗಮಕಿ ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ವಾಸುದೇವ ಆರ್.ಕೊಟ್ಟಾರಿ ಕರ್ಮಾರ್, ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಶ್ರೀ ಕೆ.ಎನ್. ವೆಂಕಟರಮಣ ಹೊಳ್ಳ, ಶ್ರೀ ಬಿ.ಕೆ. ಸಹದೇವ ಬಿಜೈ, ಶ್ರೀ ಯಾದವ ಕೋಟ್ಯಾನ್ ಪೆರ್ಮುದೆ, ಶ್ರೀ ಜಬ್ಬಾರ್ ಸಮೋ ಸಂಪಾಜೆ, ಶ್ರೀ ಚಂದ್ರಶೇಖರ ಕೆ. ಶೆಟ್ಟಿ, ಮಂಗಳೂರು, ಶ್ರೀ ಎನ್. ಮಧುಸೂದನ ರಾವ್ ಕಡೆಶಿವಾಲಯ, ಶ್ರೀ ಕೊರಗಪ್ಪ ಎ.ಕೋಟ್ಯಾನ್, ಶ್ರೀ ಯಶು ವಿಟ್ಲ, ಶ್ರೀ ಮಹಾಬಲ ಶೆಟ್ಟಿ ಕೂಡ್ಲು, ಶ್ರೀ ಬಾಡ ಪೂಜಾರಿ ಪಾಣಿಲ, ಶ್ರೀ ಜಯಂತ ಜೆ. ಕೋಟ್ಯಾನ್ ಮಂಗಳೂರು, ಶ್ರೀ ದಿನೇಶ್ ಪೈ ಕಟೀಲು, ಶ್ರೀ ಬೋಳಾರ ಕರುಣಾಕರ ಶೆಟ್ಟಿ, ಶ್ರೀ ಕೃಷ್ಣಯ್ಯ ವಿಟ್ಲ ಅರಮನೆ, ಶ್ರೀ ಪ್ರಭಾಕರ ಶೆಟ್ಟಿ ಪ್ರಭಾವನ, ಕಬ್ಯಾಡಿ, ಶ್ರೀ ಅಶೋಕ್‍ಕುಮಾರ್ ಮಂಗಳಾದೇವಿ, ಶ್ರೀ ಹರೀಶ್ ಪೆರ್ಗಡೆ ಕಾಂತಾಡಿಗುತ್ತು, ಡಾ. ಶ್ರೀಧರ ಭಟ್ ಉಪ್ಪಳ, ನ್ಯಾಯವಾದಿ ಶ್ರೀ ಪಿ. ಜಯರಾಮ ರೈ ವಿಟ್ಲ, ಶ್ರೀ ದೇವಿಪ್ರಸಾದ್ ಶೆಟ್ಟಿ ಅನಂತಾಡಿ, ಶ್ರೀ ದೇಜಪ್ಪ ಬಾಚಕೆರೆ, ಶ್ರೀ ಜಗನ್ನಾಥ ರೈ ಅರಂತನಡ್ಕ, ಶ್ರೀ ಸುಂದರ ಬಂಡಾರಿ ರಾಯಿ, ಶ್ರೀಮತಿ ಸರಸ್ವತಿ ಎನ್. ಶೆಟ್ಟಿ ಕೋಡಿಬೈಲ್, ಶ್ರೀ ಶಶಿಧರ ಶೆಟ್ಟಿ ಹೆಚ್. ಜಮ್ಮದಮನೆ, ಶ್ರೀ ಅಜಿತ್‍ಕುಮಾರ್ ಪಂದಳಮ್, ಶ್ರೀ ಟಿ. ಹನುಮಂತಪ್ಪ ದಾವಣಗೆರೆ, ಶ್ರೀ ಪಿ.ಬಿ. ರಮೇಶ್ ಆಚಾರ್ಯ ನೀರ್ಚಾಲ್, ಶ್ರೀ ದೇವದಾಸ್ ರೈ ಕೆಬ್ಲಾಡಿ, ಶ್ರೀ ನಾರಾಯಣ ಶೆಟ್ಟಿ ಕನ್ಯಾನ, ಶ್ರೀ ನೀಲಕಂಠಪ್ಪ ಹೂವಿನಹಡಗಲಿ, ಶ್ರೀ ನರಸಿಂಗ ರಾವ್ ಕಾಸರಗೋಡು, ಶ್ರೀ ಲೀಲಾಕ್ಷ ಬಿ.ಕರ್ಕೇರ, ‘ನಮ್ಮಕುಡ್ಲ’, ಶ್ರೀ ಸೀತಾರಾಮ ಶೆಟ್ಟಿ ತೋಡಾರ್, ಶ್ರೀಮತಿ ನಯನಾ ವಿ.ರೈ ಕುದ್ಕಾಡಿ, ಶ್ರೀ ಜೀವನ್‍ರಾಮ್ ಸುಳ್ಯ, ಶ್ರೀ ನಾಗರಾಜ ಆಚಾರ್ಯ ಮಂಗಳಾದೇವಿ, ಶ್ರೀ ಜನಾರ್ದನ ಎನ್., ಮಂಗಳೂರು, ನ್ಯಾಯವಾದಿ ಶ್ರೀಮತಿ ಹರಿಣಾಕ್ಷಿ ಜೆ.ಶೆಟ್ಟಿ ನೆಲ್ಲಿಕಟ್ಟೆ, ಶ್ರೀಮತಿ ನಯನಾ ರೈ ನೆಲ್ಲಿಕಟ್ಟೆ, ಶ್ರೀ ಕಿರಣ್ ಉರ್ವ, ಶ್ರೀ ಅಜಿತ್‍ನಾಥ್ ಶೆಟ್ಟಿ ಮುಳಿಹಿತ್ಲು, ಶ್ರೀ ವಾಮಯ್ಯ ಬಿ. ಶೆಟ್ಟಿ, ಮುಂಬೈ, ಶ್ರೀಮತಿ ಸುಹಾಸಿನಿ ಎಸ್. ಶೆಟ್ಟಿ ಅವರ ಪರವಾಗಿ ಮಗ ಶ್ರೀ ಸಚಿನ್ ಶೆಟ್ಟಿ, ನ್ಯಾಯವಾದಿ ಕಡಂದಲೆ ಪರಾರಿ ಶ್ರೀ ಪ್ರಕಾಶ್ ಎಲ್.ಶೆಟ್ಟಿ ಮುಂಬೈ, ಶ್ರೀ ದಾಮೋದರ ಶೆಟ್ಟಿ, ನವಿಮುಂಬೈ ನ್ಯಾಯವಾದಿ ಶ್ರೀ ಕೃಷ್ಣ ಎಲ್. ಶೆಟ್ಟಿ ಅವರ ಪರವಾಗಿ ಸುಪುತ್ರ ಡಾ. ಅದೀಪ್, ಶ್ರೀ ಮೋಹನ್ ಹೆಗ್ಡೆ ಬೆಜ್ಜ ಥಾಣೆ, ಶ್ರೀ ಪದ್ಮನಾಭ ಎ. ಶೆಟ್ಟಿ, ಮುಂಬೈ, ಶ್ರೀ ಜಯರಾಮ ಸಾಂತ ಥಾನೆ, ಶ್ರೀ ರೋಹಿತ್ ಡಿ.ಶೆಟ್ಟಿ ನಗ್ರಿಗುತ್ತು, ಪುಣೆ, ಶ್ರೀ ಪ್ರಕಾಶ್ ಕೆ.ಶೆಟ್ಟಿ ಪೇಟೆಮನೆ, ಶ್ರೀ ಭರತ್‍ಭೂಷಣ್ ಮಂಗಳೂರು, ಶ್ರೀ ನಾರಾಯಣ ಶೆಟ್ಟಿ ದಂಬೆಲ್, ಶ್ರೀ ತ್ಯಾಂಪಣ್ಣ ರೈ ಅಂಕತ್ತಡ್ಕ ಇವರೆಲ್ಲರನ್ನೂ ಒಡಿಯೂರು ಶ್ರೀಗಳು ಶಾಲು ಹೊದಿಸಿದರೆ ವೇದಿಕೆಯ ಗಣ್ಯರು ನೆನಪಿನ ಕಾಣಿಕೆ ಫಲಪುಷ್ಪವನ್ನು ನೀಡಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ ಮಾತನಾಡಿ “ಪುಣ್ಯ ಕಾರ್ಯದಲ್ಲಿ ಭಾಗವಹಿಸುವ ಭಾಗ್ಯ ನನಗೊದಗಿದೆ. ಸನ್ಮಾನ ಪಡೆದ ಎಲ್ಲರೂ ಮಹಾನ್ ಸಾಧಕರಾಗಿದ್ದಾರೆ” ಎಂದು ಶುಭಹಾರೈಸಿದರು.
ಸನ್ಮಾನಿತರಲ್ಲಿ ಓರ್ವರಾದ ವಿದ್ವಾನ್ ವೆಂಕಟೇಶ್ವರ ಭಟ್ ಇವರು ಎಲ್ಲಾ ಸನ್ಮಾನಿತರ ಪರವಾಗಿ ಮಾತನಾಡಿ “ಸಮಾಜದಲ್ಲಿ ಎರಡು ರೀತಿಯ ಜನರಿದ್ದಾರೆ. ಕೆಲವರು ಮಹಾಕವಿ ಭತೃಹರಿ ಹೇಳಿದ ಮಾರ್ಗವನ್ನು ಅನುಸರಿಸುವವರು. ಯಾರು ಸಮಾಜದಲ್ಲಿ ಮಾನ್ಯರಿದ್ದಾರೆ ಅವರನ್ನು ಮಾನಿಸುವುದು. ಪರರಲ್ಲಿ ಪರಮಾಣು ತುಲ್ಯವಾದ ಗುಣವನ್ನು ಮಹಾತುಲ್ಯವಾಗಿ ಸ್ವೀಕರಿಸಿ ಅವರಿಗೆ ಗೌರವವನ್ನು ಸಲ್ಲಿಸುವುದು. ಇದು ಮಹಾತ್ಮರ ಲಕ್ಷಣ, ಸಂತರ ಲಕ್ಷಣ ಎಂದು ಭತೃಹರಿಯು ಹೇಳಿದ್ದಾರೆ. ಇನ್ನೊಂದು ವಿಭಾಗದಲ್ಲಿ ನಾರಾಯಣ ಭಟ್ಟತ್ತಿರುಗಳು ನಾರಾಯಣೀಯಮ್‍ನಲ್ಲಿ ಹೇಳಿದ ಮಾತು -‘ತುಂಬ ಗುಣಗಳು ಇರುವವರಲ್ಲಿ ಇರಬಹುದಾದ ಸಣ್ಣ ದೋಷಗಳನ್ನು ಎತ್ತಿ ಆಡುವುದೇ ಅಮೃತ ಕುಡಿದಷ್ಟು ಸಂತೋಷಪಡುವವರಿದ್ದಾರೆ. ಆ ವರ್ಗ ನಮಗೆ ಮಾರ್ಗದರ್ಶಕವಲ್ಲ. ನಮಗೆ ಸಂತರ ಮಾರ್ಗದರ್ಶನವನ್ನು ಕೊಡುವ ಮಾರ್ಗ ಅವಶ್ಯ. ಸನ್ಮಾನಿತರೆಲ್ಲರೂ ಅತ್ಯಂತ ಸಂತೋಷವನ್ನು ಹೊಂದಿದ್ದಾರೆ” ಎಂದರು.
ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಪ್ರಬಂಧಕರಾದ ಶ್ರೀಮತಿ ಗಾಯತ್ರಿ ರವಿಚಂದ್ರನ್ ಅವರು ಮಾತನಾಡಿ “ಮನುಷ್ಯರೂಪದಲ್ಲಿ ಬಂದ ದೇವರು ಪೂಜ್ಯ ಗುರುಗಳು. ಇವರ ಮಾರ್ಗದರ್ಶನ ನಮ್ಮ ಜೀವನದಲ್ಲಿ ನಮಗೆ ಬಹಳ ಮುಖ್ಯ” ಎಂದರು.
“ಪೂಜ್ಯ ಶ್ರಿಗಳವರ ಷಷ್ಠ್ಯಬ್ದ ಸಂಭ್ರಮ ಆಚರಣೆಯ ರೀತಿಯಿಂದ ನಮಗೆ ಎಲ್ಲರಿಗೂ ಆನಂದವಾಗಿದೆ. ಧರ್ಮಜಾಗೃತಿಯೊಂದಿಗೆ, ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ. ಈ ಸುಸಂದರ್ಭ ಸನ್ಮಾನಿಸಿದ ಪ್ರತಿಯೊಬ್ಬರೂ ಒಂದೊಂದು ರೀತಿಯ ಸಾಧನೆಗೈದವರಾಗಿದ್ದಾರೆ. ಇವರೆಲ್ಲರೂ ಸಾರ್ಥಕ ಜೀವನ ನಡೆಸಿರುವವರು. ಮಾನವ ಜನ್ಮ ಪಡೆದ ನಾವೆಲ್ಲರೂ ನಮ್ಮ ಬದುಕನ್ನು ಸದುಪಯೋಗಪಡಿಸಿಕೊಳ್ಳೋಣ. ಇಡೀ ದೇಶದ ಸೇವೆಯನ್ನು ಮಾಡಲು ನಮಗೆ ಅಸಾಧ್ಯವಾಗಬಹುದು. ಆದರೆ ನಮ್ಮ ಪರಿಸರದಲ್ಲಿ ನಮಗಾಗುವ ಪ್ರಾಮಾಣಿಕವಾದ ಸೇವೆಯನ್ನು ಮಾಡಿದಾಗ ನಮಗೆ ಸಿಗುವ ತೃಪ್ತಿಯೇ ಬೇರೆಯೇ” ಎಂದು ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಕೇಂದ್ರ ಸಮಿತಿಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಧ್ಯಕ್ಷೀಯ ಭಾಷಣ ಮಾಡಿದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಬೆಳ್ತಂಗಡಿ-ಬಂಟ್ವಾಳ ಮೇಲ್ವಿಚಾರಕ ಶ್ರೀ ಯಶೋಧರ ಸಾಲ್ಯಾನ್ ಸ್ವಾಗತಿಸಿದರು. ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಶ್ರೀ ಚಂದ್ರಹಾಸ ಡಿ. ಶೆಟ್ಟಿ ವಂದಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.