ಬೆಳಕಿನೆಡೆಗೆ…

ದೀಪದ ಆರಾಧನೆ ದೀಪೋತ್ಸವ. ಬದುಕೇ ದೀಪೋತ್ಸವ ಆಗಬೇಕು. ಅಂತರ್‍ಜ್ಯೋತಿ ಬೆಳಗಿದರೆ ನಮ್ಮಲ್ಲಿ ಹುದುಗಿರುವ ಅಸುರ ಶಕ್ತಿಯೆಂಬ ಅಂಧÀಕಾರ ನೀಗಿ ಜ್ಞಾನದ ಬೆಳಕು ಮೂಡಿ ಬರಲು ಸಾಧ್ಯ. ಬೆಳಕಿಲ್ಲದೆ ಕತ್ತಲಿಲ್ಲ, ಕತ್ತಲಿಲ್ಲದೆ ಬೆಳಕಿಲ್ಲ. ಬೆಳಕಿನ ದೀಪ ಬೆಳಗಿಸಲು ಕತ್ತಲು ಬೇಕು. ಅಂಧಕಾರವನ್ನು ಓಡಿಸಲು ಬೆಳಕು ಬೇಕು. ಆ ಬೆಳಕು ಎಂಬ ಶಕ್ತಿ ಪ್ರತಿಯೋರ್ವನ ದೇಹದ ಒಳಗೂ ಇದೆ ಹೊರಗೂ ಇದೆ. ನಮ್ಮಲ್ಲಿರುವ ಬೆಳಕು ಎಂಬ ತೇಜಸ್ಸನ್ನು ಮತ್ತಷ್ಟು ಪ್ರಕಾಶಿಸುವಂತೆ ಮಾಡುವುದೇ ನಮ್ಮ ಕರ್ತವ್ಯ. ಅಂತರಂಗದ ಬೆಳಕಿನೊಂದಿಗೆ ಬಹಿರಂಗದ ತೇಜಸ್ಸಿನ ಬೆಳಕನ್ನು ಸದುಪಯೋಗಪಡಿಸಿದಾಗಲೇ ಬದುಕಿನ ಸಾರ್ಥಕತೆ.        ದೀಪದ ಆರಾಧನೆ ದೀಪೋತ್ಸವ. ಬದುಕೇ ದೀಪೋತ್ಸವ ಆಗಬೇಕು. ಅಂತರ್‍ಜ್ಯೋತಿ ಬೆಳಗಿದರೆ ನಮ್ಮಲ್ಲಿ ಹುದುಗಿರುವ ಅಸುರ ಶಕ್ತಿಯೆಂಬ ಅಂಧÀಕಾರ ನೀಗಿ ಜ್ಞಾನದ ಬೆಳಕು ಮೂಡಿ ಬರಲು ಸಾಧ್ಯ. ಬೆಳಕಿಲ್ಲದೆ ಕತ್ತಲಿಲ್ಲ, ಕತ್ತಲಿಲ್ಲದೆ ಬೆಳಕಿಲ್ಲ. ಬೆಳಕಿನ ದೀಪ ಬೆಳಗಿಸಲು ಕತ್ತಲು ಬೇಕು. ಅಂಧಕಾರವನ್ನು ಓಡಿಸಲು ಬೆಳಕು ಬೇಕು. ಆ ಬೆಳಕು ಎಂಬ ಶಕ್ತಿ ಪ್ರತಿಯೋರ್ವನ ದೇಹದ ಒಳಗೂ ಇದೆ ಹೊರಗೂ ಇದೆ. ನಮ್ಮಲ್ಲಿರುವ ಬೆಳಕು ಎಂಬ ತೇಜಸ್ಸನ್ನು ಮತ್ತಷ್ಟು ಪ್ರಕಾಶಿಸುವಂತೆ ಮಾಡುವುದೇ ನಮ್ಮ ಕರ್ತವ್ಯ. ಅಂತರಂಗದ ಬೆಳಕಿನೊಂದಿಗೆ ಬಹಿರಂಗದ ತೇಜಸ್ಸಿನ ಬೆಳಕನ್ನು ಸದುಪಯೋಗಪಡಿಸಿದಾಗಲೇ ಬದುಕಿನ ಸಾರ್ಥಕತೆ.                       

‘ಮಮೇತಿ ಬದ್ಯತೇ ಜಂತುಃ ನ ಮಮೇತಿ ವಿಮುಚ್ಯತೇ’ ನಾನು ಎನ್ನುವುದು ನಮಗೆ ಬಂಧನ. ನನ್ನದಲ್ಲ ಎಂಬುದೇ ಬಿಡುಗಡೆ. ಅಹಂಕಾರ ಮಮಕಾರವೇ ನಮಗೆ ಬಂಧನ. ಅದನ್ನು ಮರೆತರೆ ಅಂತರಂಗದತ್ತ ಸಾಗುವುದಕ್ಕೆ ಅನುಕೂಲ. ಬಲಿ ಚಕ್ರವರ್ತಿಯ ಕಥೆಯನ್ನು ಇಲ್ಲಿ ಸ್ಮರಿಸಬಹುದು. ಜತೆಗೆ ನರಕಾಸುರ ವಧೆಯಿಂದಾಗಿ ನರಕ ಚತುರ್ದಶಿ ಎಂಬುದನ್ನು ನೆನಪಿಸಬಹುದು.  ನಾನು, ನನ್ನದು ಎಂಬ ಅಹಮಿಕೆಯನ್ನೂ, ಸ್ವಾರ್ಥವನ್ನೂ, ಅಜ್ಞಾನವನ್ನೂ ಹರಿದೊಗೆದು ಬಂದರೆ ಮಾನವ ಜನ್ಮವು ಸಾರ್ಥಕವಾಗುತ್ತದೆ. ನಮ್ಮ ಎದೆಗೂಡಲ್ಲಿ ಬೆಳಕಿನ ಕಿರುಸೊಡರನ್ನು ಬೆಳಗಿಸಿ ಸುತ್ತಮುತ್ತಲು ಆ ಬೆಳಕು ಹರಡಲು ಅನುವು ಮಾಡಿ ಕೊಡುವುದೇ ದೀಪಾವಳಿ. ನಮ್ಮೊಳಗೆ ಹುದುಗಿರುವ ಕತ್ತಲು ಸರಿದು ತಿಳಿವಿನ ತಿಳಿಬೆಳಕು ಹಬ್ಬಲೆಂದು ಬೆಳಕಿನ ಹಬ್ಬವನ್ನು ಸ್ವಾಗತಿಸುವ. ಬೆಳಕು ಹಬ್ಬುವುದೇ ಹಬ್ಬ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ದೀಪಾವಳಿಯ ಸಂದೇಶ ನೀಡಿದ್ದಾರೆ.