ಒಡಿಯೂರು ಶ್ರೀಗಳ ಸಂತಾಪ
ವಿಟ್ಲ ಅರಸರೆಂದೇ ಪ್ರಖ್ಯಾತರಾದ, ಒಡಿಯೂರು ಶ್ರೀ ಸಂಸ್ಥಾನದ ಮುಖ್ಯ ಅಭಿಮಾನಿಗಳೂ ಆದ ಶ್ರೀಯುತ ಜನಾರ್ದನ ವರ್ಮ ಅರಸರು ದೈವಾಧೀನರಾಗಿರುವುದು ಬೇಸರದ ಸಂಗತಿ. ಇವರ ಕಾಲಾವಧಿಯಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿರುವುದು ಅಲ್ಲದೆ ವಿಟ್ಲ ಸೀಮೆಯಲ್ಲಿ ಹಲವಾರು ದೇವಸ್ಥಾನಗಳು ಜೀರ್ಣೋದ್ಧಾರಗೊಂಡಿರುವುದು ಸ್ಮರಣೀಯ. ಸರಳ ವ್ಯಕ್ತಿತ್ವದ, ಮೃಧು ನಡೆ-ನುಡಿಯ, ಅರಸೊತ್ತಿಗೆಯನ್ನು ಕರ್ತವ್ಯವೆಂದು ಪಾಲಿಸಿಕೊಂಡು ಬಂದಿರುವುದು ಇವರ ವಿಶೇಷತೆ. ಅಗಲಿದ ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಕುಟುಂಬಿಕರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಆರಾಧ್ಯದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.