Tag Event

ಒಡಿಯೂರು ಶ್ರೀ ಸಂಸ್ಥಾನದಲ್ಲಿ ನಾಗರ ಪಂಚಮಿ ಮಹೋತ್ಸವ – ಸಾರ್ವಜನಿಕ ಆಶ್ಲೇಷ ಬಲಿಪೂಜೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ೧೭-೦೮-೨೦೨೬ರಂದು ನಾಗರ ಪಂಚಮಿ ಮಹೋತ್ಸವ – ಸಾರ್ವಜನಿಕ ಆಶ್ಲೇಷ ಬಲಿ ಪೂಜೆ ವಿವಿಧ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಪೂರ್ವಾಹ್ಣ ಗಂಟೆ ೯ಕ್ಕೆ ಸ್ವಯಂ ಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಬಳಿಕ ಆಶ್ಲೇಷಬಲಿಪೂಜೆ ಆರಂಭ, ಬೆಳಿಗ್ಗೆ ೧೧.೩೦ಕ್ಕೆ ಪೂಜ್ಯ ಶ್ರೀಗಳವರು ನಾಗರ ಪಂಚಮಿಯ ಶುಭಸಂದೇಶ ನೀಡಲಿದ್ದಾರೆ. ಮಧ್ಯಾಹ್ನ ಗಂಟೆ ೧೨.೩೦ಕ್ಕೆ…

ಜನವರಿ ೨೭-೨೮: ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜನವರಿ ೨೭ ಮತ್ತು ೨೮ರಂದು ಶ್ರೀ ಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವ / ೨೬ನೇ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.ಜನವರಿ ೨೭ರಂದು ಜರಗುವ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಉದ್ಘಾಟಿಸಲಿದ್ದು, ಕದ್ರಿ ನವನೀತ ಶೆಟ್ಟಿ ಸಮ್ಮೇಳನದ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀಗಣಪತಿ ಅಥರ್ವಶೀರ್ಷ ಹವನ

ತಾ.27-08-2025ನೇ ಬುಧವಾರ ಶ್ರೀ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಬೆಳಿಗ್ಗೆ ಘಂಟೆ 10.00ರಿಂದ ಪೂಜ್ಯ ಶ್ರೀಗಳವರ ದಿವ್ಯೋಪಸ್ಥಿತಿಯಲ್ಲಿ ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಗಣಪತಿ ಅಥರ್ವಶೀರ್ಷ ಹವನವು ನಡೆಯಲಿರುವುದು.

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ

ಪೂಜ್ಯ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಶ್ರೀ ಒಡಿಯೂರು ಗ್ರಾಮೋತ್ಸವ 2025ರ ಪ್ರಯುಕ್ತ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯಮಾರ್ಗದರ್ಶನದಲ್ಲಿ ಆ.6 ರಂದು ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ. ಹಲವಾರು ಕಾಲೇಜುಗಳ ತಂಡ ಭಾಗವಹಿಸುತ್ತಿದ್ದು, ಬೆಳಿಗ್ಗೆ ಗಂಟೆ 9.30 ಕ್ಕೆ ಸ್ಪರ್ಧೆಯು ಪೂಜ್ಯ ಶ್ರೀಗಳವರ ದಿವ್ಯ…

ಗ್ರಾಮೋತ್ಸವ ೨೦೨೫ – ಪೂಜ್ಯ ಶ್ರೀಗಳ ಜನ್ಮದಿನೋತ್ಸವ ಆಮಂತ್ರಣ

ಆತ್ಮೀಯ ಬಂಧುಗಳೇ, ಸ್ವಸ್ತಿ | ಶ್ರೀ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಶುಕ್ಲ ೧೪ ಸಲುವ, ತಾ.08-08-2025ನೇ ಶುಕ್ರವಾರದಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಜನ್ಮದಿನೋತ್ಸವವನ್ನುಗ್ರಾಮೋತ್ಸವವಾಗಿ ಗುರುವಂದನೆ-ಸೇವಾ ಸಂಭ್ರಮದೊಂದಿಗೆ ಆಚರಿಸುವುದಾಗಿ ನಿರ್ಣಯಿಸಲಾಗಿದೆ.ಇದರ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿತಾವೆಲ್ಲರೂ ಸಹಭಾಗಿಗಳಾಗಿ ಶ್ರೀಗುರುಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷೆ ಕೆಳಗಿನ ಬಟನ್‌ನ ಮೂಲಕ ಆಹ್ವಾನ ಪತ್ರಿಕೆಯನ್ನು ವೀಕ್ಷಿಸಿ…

ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ

|| ಜೈ ಗುರುದೇವ್ ||ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞದಿನಾಂಕ ೧೨-೦೪-೨೦೨೫ನೇ ಶನಿವಾರ ಶ್ರೀ ಸಂಸ್ಥಾನದಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ- ಅಖಂಡ ಭಗವನ್ನಾಮಸಂಕೀರ್ತನೆಯ ಮಂಗಲೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಪ್ರಾತಃಕಾಲ ಅಖಂಡ ಭಗವನ್ನಾಮ ಸಂಕೀರ್ತನೆಯ ಮಂಗಲ, ಆರಾಧ್ಯದೇವರ ಪೂಜೆಯ ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ. ನಂತರ -ಶ್ರೀಮದ್ರಾಮಾಯಣ…