“ಪ್ರಾಮಾಣಿಕತೆ, ಪರಿಶುದ್ಧತೆ ಇದ್ದಲ್ಲಿ ಅಭಿವೃದ್ಧಿ ಶತಸಿದ್ಧ” – ಒಡಿಯೂರು ಶ್ರೀ

“ಧಮಯುಕ್ತವಾದ ಆರ್ಥಿಕತೆಯಲ್ಲಿ ಭಯವಿಲ್ಲ. ಆರ್ಥಿಕ ಸಂಸ್ಥೆಗಳಿಗೆ ಗ್ರಾಹಕರೇ ಜೀವಾಳ. ಪ್ರಾಮಾಣಿಕತೆ, ಪರಿಶುದ್ಧತೆಯನ್ನು ಉಳಿಸಿಕೊಂಡದ್ದೇ ಆದಲ್ಲಿ ಅಭಿವೃದ್ಧಿ ಶತಃಸಿದ್ಧ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ಮೂಡುಬಿದ್ರೆ ಶಾಖೆಯನ್ನು ವಿಜಯನಗರದ ಶಾಶ್ವತ್ ಕಾಂಪ್ಲೆಕ್ಸ್‍ನಲ್ಲಿ ಉದ್ಘಾಟಿಸಿ ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ಮೂಡುಬಿದ್ರೆ ಶಾಸಕ ಶ್ರೀ ಉಮಾನಾಥ ಕೋಟ್ಯಾನ್, ಆಳ್ವಾಸ್ ಎಜುಕೇಶನ್ ಫೌಂಡೇಶನ್‍ನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವೈದ್ಯರಾದ ಡಾ. ವಿನಯ ಹೆಗ್ಡೆ, ಉದ್ಯಮಿ ಶ್ರೀ ಮೇಘನಾಥ ಶೆಟ್ಟಿ, ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ ಉಪಸ್ಥಿತರಿದ್ದರು. ಸಹಕಾರಿಯ ಅಧ್ಯಕ್ಷ ಲ| ಎ. ಸುರೇಶ್ ರೈ ಸ್ವಾಗತಿಸಿದರು.