ಪೂಜ್ಯ ಒಡಿಯೂರು ಶ್ರೀಗಳವರ ಸುವರ್ಣ ಜಯಂತಿ ವರ್ಷಾಚರಣೆಯ ಪ್ರಯುಕ್ತ 2011ರಲ್ಲಿ ಗುರು ಬಂಧುಗಳ ಅಪೇಕ್ಷೆಯ ಮೇರೆಗೆ ಕ್ಷೇತ್ರದ ಎಲ್ಲಾ ಸಹ ಸಂಸ್ಥೆಗಳ ಆರ್ಥಿಕ ನಿರ್ವಹಣೆಗಾಗಿ ಗ್ರಾಮವಿಕಾಸ ಯೋಜನೆಯ ಮೂಲಕ ಸ್ವ ಸಹಾಯ ಸಂಘ ರಚಿಸಿ ನಿರ್ವಹಿಸಿ ಅದಕ್ಕಾಗಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯನ್ನು ದಿನಾಂಕ 20-04-2011ರಂದು ಸ್ಥಾಪಿಸಲಾಯಿತು. ಪೂಜ್ಯ ಶ್ರೀ ಗುರುಗಳು ಹಾಗೂ ಸಾದ್ವಿ ಶ್ರೀ ಮಾತಾನಂದಮಯೀಯವರು ಗೌರವ ಮಾರ್ಗದರ್ಶಕರಾಗಿ 13 ಜನ ನಿರ್ದೇಶಕರು, ಗ್ರಾಹಕರ ಹಾಗೂ ಎಲ್ಲಾ ವರ್ಗದ ಜನರ ಸಹಕಾರವನ್ನು ಪಡೆದು ಕೇಂದ್ರ ಕಛೇರಿ ಹಾಗೂ ಪ್ರಥಮ ಶಾಖೆಯನ್ನು ಒಡಿಯೂರಿನಲ್ಲಿ ತೆರೆಯಲಾಯಿತು. ಬಳಿಕ ಮಂಗಳೂರಿನ ಬಿಜೈ ಮತ್ತು ಬಿ.ಸಿ.ರೋಡ್, ಪುತ್ತೂರು, ವಿಟ್ಲ, ಪಂಪ್‍ವೆಲ್‍ನಲ್ಲಿ ಪ್ರಥಮ ವರ್ಷದಲ್ಲಿ 6 ಶಾಖೆಗಳನ್ನು ತೆರೆದು 1523 ಸದಸ್ಯರನ್ನು ಹೊಂದಿ 10.81 ಕೋಟಿ ಠೇವಣಾತಿ ಸಂಗ್ರಹಿಸಿ 6.04 ಕೋಟಿ ಮುಂಗಡ ನೀಡಿ 100% ಸಾಲ ವಸೂಲಾತಿ ಮಾಡಿ ಪ್ರಥಮ ವರ್ಷದಲ್ಲೆ 5.97 ಲಕ್ಷ ರೂ ಲಾಭ ಗಳಿಸಿದ ಹೆಗ್ಗಳಿಕೆಗೆ ನಮ್ಮ ಸಹಕಾರಿ ಪಾತ್ರವಾಗಿರುತ್ತದೆ.
ಪ್ರಾದೇಶಿಕ ಕಛೇರಿಯನ್ನು ಮಂಗಳೂರಿನ ಪಂಪ್‍ವೆಲ್ ಶ್ರೀ ಭಗವತಿ ಕಟ್ಟಡದಲ್ಲಿ ಪ್ರಾರಂಭಿಸಿ, ಎಲ್ಲಾ ಶಾಖೆಗಳನ್ನು ಗಣಕೀಕರಣಗೊಳಿಸಿ ಅತ್ಯುತ್ತಮ ಸಿಬ್ಬಂದಿಗಳಿಂದ ನಮ್ಮ ಸಹಕಾರಿ ಯಶಸ್ಸು ಗಳಿಸಿ ಬಳಿಕ ಕನ್ಯಾನ, ಸುರತ್ಕಲ್, ತೊಕ್ಕೊಟ್ಟು ಒಟ್ಟು 9 ಶಾಖೆಗಳ ಮೂಲಕ ಕಳೆದ ವರ್ಷಗಳಲ್ಲಿ 31-03-2016ಕ್ಕೆ 4623 ಸದಸ್ಯರನ್ನು ಹೊಂದಿ 83.60ಲಕ್ಷ ರೂ. ಪಾಲು ಬಂಡವಾಳದೊಂದಿಗೆ 95.70 ಕೋಟಿ ಠೇವಣಾತಿ ಸಂಗ್ರಹಿಸಿ, 60.52 ಕೋಟಿ ಮುಂಗಡ ನೀಡಿ ವರ್ಷಾಂತ್ಯಕ್ಕೆ 81.04 ಲಕ್ಷ ರೂ ನಿವ್ವಳ ಲಾಭ ಪಡೆದು ಸದಸ್ಯರಿಗೆ 15% ಡಿವಿಡೆಂಡ್ ನೀಡಿ ಕರ್ನಾಟಕ ಸೌಹಾರ್ದ ಸಹಕಾರಿಯ ನೊಂದಾಯಿತ ಸಹಕಾರಿಗಳಲ್ಲಿ ನಂಬರ್ 1 ಸಹಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುತ್ತದೆ.
ಸಹಕಾರಿಯ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದ ನಿರಂತರ ಪರಿಶ್ರಮ, ಗ್ರಾಹಕರ, ಸದಸ್ಯರ ಪ್ರೋತ್ಸಾಹದಿಂದ ಈ ಮಹತ್ತರ ಸಾಧನೆಯನ್ನು ಗಳಿಸಲು ಸಾಧ್ಯವಾಗಿದೆ. ಈಗಾಗಲೇ ಗ್ರಾಮವಿಕಾಸ ಯೋಜನೆಯ ಮೂಲಕ ಸುಮಾರು 2000ಕ್ಕೂ ಮಿಕ್ಕಿ ವಿಕಾಸವಾಹಿನಿ ಸ್ವ ಸಹಾಯ ಸಂಘಗಳನ್ನು ರಚಿಸಿ ಆರ್ಥಿಕ ಪ್ರೋತ್ಸಾಹ ನೀಡುತ್ತಾ ಬಂದಿರುತ್ತದೆ.
SL. No. | Branch | Address |
1 | ಸುಳ್ಯ | |
2 | ಕಡಬ | |
3 | ಬೆಳ್ತಂಗಡಿ | |
4 | ಉಪ್ಪಿನಂಗಡಿ | |
5 | ಮೂಡಬಿದ್ರಿ | |
6 | ಮುಲ್ಕಿ | |
7 | ಕಾವೂರು |
ಈ ಸೌಹಾರ್ದ ಸಹಕಾರಿಯಲ್ಲಿ ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕರಿಸಲಾಗುವುದು.
ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಮಾಜಿ ಯೋಧರಿಗೆ, ಸಂಘ-ಸಂಸ್ಥೆಗಳಿಗೆ ನಿರಖು ಠೇವಣಿ ಮೇಲೆ 0.5% ಬಡ್ಡಿ ಹೆಚ್ಚುವರಿ ನೀಡಲಾಗುವುದು.
ಆವರ್ತನ ಠೇವಣಿ, ಅಕ್ಷಯ ನಿತ್ಯನಿಧಿ ಯೋಜನೆ (ಪಿಗ್ಮಿ), ಉಳಿತಾಯ ಖಾತೆ ಮೊದಲಾದ ಠೇವಣಿ ಸೌಲಭ್ಯಗಳಿವೆ.
ಸ್ವಸಹಾಯ ಸಂಘಗಳಿಗೆ ಸಾಲ, ಚಿನ್ನಾಭರಣ ಈಡಿನ ಸಾಲ. ವಾಹನ ಸಾಲ, ಮನೆ ನಿವೇಶನ ಖರೀದಿ/ಮನೆ ನಿರ್ಮಾಣ, ಅಡಮಾನ ಸಾಲ/ ಜಾಮೀನು ಸಾಲ/ಠೇವಣಿ ಆಧಾರಿತ ಸಾಲ ಮೊದಲಾದ ಸಾಲಗಳನ್ನು ಸದಸ್ಯರಿಗೆ ನೀಡಲಾಗುವುದು.