ಗಣಪತಿಯ ಆರಾಧನೆ ಬುದ್ಧಿವಿಕಾಸಕ್ಕೆ ಪೂರಕ

“ಗಣಪತಿಯ ಆರಾಧನೆ ಬುದ್ಧಿವಿಕಾಸಕ್ಕೆ ಪೂರಕ” – ಒಡಿಯೂರು ಶ್ರೀ
“ಜೀವನದ ಜೀವಾಳ ಜಲ. ಜಲತತ್ತ್ವಕ್ಕೆ ಅಧಿಪತಿ ಗಣಪತಿ. ಗಣಪತಿ ಮಗುವಿನಿಂದ ವೃದ್ಧರವರೆಗೆ ಎಲ್ಲರಿಗೂ ಸಂತೋಷ ಕೊಡುವ ದೇವರು. ಸಂತೋಷವೇ ನಮಗೆ ಸಂಪತ್ತು, ಆನಂದವೇ ಆಸ್ತಿ. ಅನುಗ್ರಹ ಮತ್ತು ನಿಗ್ರಹ ಶಕ್ತಿಯನ್ನು ಕರುಣಿಸುವ, ನಾಲ್ಕು ವೇದಗಳಲ್ಲಿಯೂ ಪೂಜೆ ಪಡೆಯುವ ದೇವನೇ ಗಜಾನನ. ಇವನ ಆರಾಧನೆ, ಸಾರ್ವಜನಿಕ ಪೂಜೆಗಳಿಂದ ಮಾನವೀಯ ಮೌಲ್ಯಗಳ ಉದ್ದೀಪನವಾಗುತ್ತದೆ. ಮಾನವ ಮಾನವ ಸಂಬಂಧದ ಬೆಸುಗೆ ಬಲಗೊಳ್ಳುತ್ತದೆ. ಗಣಪನ ಆರಾಧನೆಯಿಂದ ಬುದ್ಧಿ ವಿಕಾಸಕ್ಕೂ ಪೂರಕ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಜರಗಿದ ಶ್ರೀ ಗಣಪತಿ ಅಥರ್ವಶೀರ್ಷ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದು, ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಹವನ ನೆರವೇರಿತು.