ಮಾನವೀಯತೆಯ ಕೊಂಡಿ ಬಲಪಡಿಸುವ ಕಾರ್ಯವಾಗಬೇಕು

ಷಷ್ಠ್ಯಬ್ದ ಸಂಭ್ರಮ ಸಮಿತಿ, ಮಾಣಿ ವಲಯದ ಪ್ರಯುಕ್ತ ‘ಮನೆಗೊಂದು ಶ್ರೀಗಂಧದ ಸಸಿ – ಶ್ರೀಗಂಧ ಬೆಳೆಯೋಣ’ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಆಶೀರ್ವಚನ

ಕೆದಿಲ, ಜು.25: “ನಿರ್ದಿಷ್ಟವಾದ ನಿಯಮಗಳನ್ನು ಪಾಲಿಸಿ ಬದುಕನ್ನು ರೂಪಿಸಬೇಕು. ಯುವಶಕ್ತಿ ಸದಾಚಾರದ ಒಲವನ್ನು ಹೊಂದಿದೆ. ಅದನ್ನು ಬೆಂಬಲಿಸಿ, ಸಮಾಜ ಪರಿವರ್ತನೆಯಾಗುವಂತೆ ಪ್ರೇರೇಪಿಸಬೇಕು. ಮಾನವೀಯತೆಯ ಕೊಂಡಿ ಸಡಿಲವಾಗಿದೆ. ಅದನ್ನು ಬಲಪಡಿಸುವ ಮಹತ್ ಕಾರ್ಯವಾಗಬೇಕು. ಸುಸಂಸ್ಕøತ ಸಮಾಜ ನಿರ್ಮಾಣವಾಗಬೇಕು. ಅರ್ಹರಿಗೆ ಉಪಕರಿಸಬೇಕು. ಹುಟ್ಟು-ಸಾವು ಜಗತ್ತಿನ ನಿಯಮ. ಆಯುಷ್ಯವಿರುವ ಪರಿಪೂರ್ಣ ಆರೋಗ್ಯ ಹೊಂದಿದ ವ್ಯಕ್ತಿಗೆ ಬದುಕನ್ನು ಶ್ರೇಷ್ಠವಾಗಿಸಲು ಸಾಧ್ಯವಾಗುತ್ತದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕೆದಿಲ ಗಾಂಧಿನಗರ ಶ್ರೀ ದೇವಿ ಭಜನ ಮಂಡಳಿ, ಶ್ರೀ ದೇವಿ ಸ್ಪೋಟ್ರ್ಸ್ ಕ್ಲಬ್ ಮತ್ತು ಬಂಟ್ವಾಳ ರೋಟರಿ ಕ್ಲಬ್ ಸಹಯೋಗದಲ್ಲಿ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಪ್ರಯುಕ್ತ ಮಾಣಿ ವಲಯದ 9 ಗ್ರಾಮಗಳ ವ್ಯಾಪ್ತಿಯಲ್ಲಿ ಶ್ರೀಗಂಧ ಬೆಳೆಯೋಣ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶ್ರೀ ಕೃಷ್ಣ ಭಟ್ ಮೀರಾವನ, ಶ್ರೀ ಕೃಷ್ಣ ಉಪಾಧ್ಯಾಯ ಅವರು ಶುಭಹಾರೈಸಿದರು. ಮಾಣಿ ವಲಯ ಅಧ್ಯಕ್ಷ ಶ್ರೀ ಉಗ್ಗಪ್ಪ ಶೆಟ್ಟಿ ಕೊಂಬಿಲ, ಉಪಾಧ್ಯಕ್ಷ ಶ್ರೀ ಮುರಳೀಧರ ಶೆಟ್ಟಿ ಕಲ್ಲಾಜೆ, ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಆಳ್ವ, ಕೋಡಾಜೆ, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಶ್ರೀ ಪುಷ್ಪರಾಜ ಹೆಗ್ಡೆ ಸತ್ತಿಕಲ್ಲು, ಶ್ರೀ ವೆಂಕಪ್ಪ ರೈ ಕುರ್ಲೆತ್ತಿಮಾರು, ಕೆದಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಜಯಂತಿ ಧನಂಜಯ ಶೆಟ್ಟಿ, ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಸಚಿನ್ ರೈ ಮಾಣಿಗುತ್ತು, ಕೇಂದ್ರ ಸಮಿತಿಯ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ, ಶ್ರೀ ಚೆನ್ನಪ್ಪ ಗೌಡ ಕುದುಮಾನ್ ಉಪಸ್ಥಿತರಿದ್ದರು.

ಶ್ರೀ ದೇವಿ ಭಜನ ಮಂಡಳಿಯ ಅಧ್ಯಕ್ಷ ಶ್ರೀ ಜಿನ್ನಪ್ಪ ಗೌಡ ಕಂಪ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ಉಮೇಶ್ ಗಾಂಧಿನಗರ ವಂದಿಸಿದರು. ಶ್ರೀ ನಿತ್ಯಾನಂದ ಕುದ್ಮಾನು ಕಾರ್ಯಕ್ರಮ ನಿರೂಪಿಸಿದರು.