ಶ್ರೀ ಸಂಸ್ಥಾನದ ಶಿಲಾಮಯ ಗರ್ಭಗುಡಿಯ ಹೊರಗೆ ಅಷ್ಟ ಪಟ್ಟಿ ಆಕಾರದಲ್ಲಿ ಆಕರ್ಷಕವಾಗಿ ಸುತ್ತು ಗೋಪುರದ ನಿರ್ಮಾಣವಾಗಿದೆ. ಇದರಲ್ಲಿ ಮನಸೂರೆಗೊಳ್ಳುವ ಬೇರೆ ಬೇರೆ ವರ್ಣ ಚಿತ್ರಗಳನ್ನು ರಚಿಸಲಾಗಿದೆ. ನೋಡುವವರಿಗೆ ಖುಷಿಕೊಡುತ್ತದೆ.
ಗರ್ಭ ಗುಡಿಯ ಎದುರಿನಲ್ಲಿ ನಮಸ್ಕಾರ ಮಂಟಪ (ತೀರ್ಥ ಮಂಟಪ) ನುಣುಪಾದ ಗ್ರಾನೈಟ್ ಕಲ್ಲಿನಿಂದ ನಿರ್ಮಾಣವಾಗಿದೆ. ಇಲ್ಲಿಯ ನಾಜೂಕಿನ ಕಲಾತ್ಮಕ ಕೆಲಸಗಳು ಕಣ್ಮನಗಳಿಗೆ ತಂಪು ನೀಡುತ್ತದೆ. ನಮಸ್ಕಾರ ಮಂಟಪ ಪ್ರವೇಶಿಸುವ ಬಾಗಿಲಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ವಿಶಿಷ್ಟ ಕೆತ್ತನೆಗಳು ಆಪ್ಯಾಯಮಾನವಾಗಿದೆ. ಎಲ್ಲವೂ ಪೂಜ್ಯ ಶ್ರೀಗಳ ನಿರ್ದೇಶನದಂತೆ ಕಲಾ ನೈಪುಣ್ಯ ಇಲ್ಲಿ ಸಾಕ್ಷಾತ್ಕಾರವಾಗಿದೆ.