“ಶ್ರೀಕೃಷ್ಣ ಸಂಸ್ಕೃತಿಯ ದ್ಯೋತಕ”– ಒಡಿಯೂರು ಶ್ರೀ

 

“ಶ್ರೀ ಕೃಷ್ಣ ಸಂಸ್ಕೃತಿಯ ದ್ಯೋತಕ. ಸಂಸ್ಕೃತಿಯ ಬೆಳಕು ರಾಮ-ಕೃಷ್ಣರು. ಮಕ್ಕಳನ್ನು ಸಂಸ್ಕೃತಿಯ ಉಳಿವಿನ ಹರಿಕಾರರನ್ನಾಗಿ ಬೆಳೆಸಬೇಕು. ಆ ಮೂಲಕ ಭವ್ಯ ಭಾರತ ನಿರ್ಮಾಣದ ಭವಿಷ್ಯ ಬರೆಯುವಂತಾಗಬೇಕು. ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ತಮ್ಮ ತಮ್ಮ ಮನೆಯಲ್ಲೇ ಆಚರಿಸಿ ಸಂಭ್ರಮಿಸಿಬೇಕೆಂದು” ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಸಂದೇಶದಂತೆ ಒಂದು ನಿಮಿಷದ ಮುದ್ದುಕೃಷ್ಣ ವೇಷದ ವಿಡಿಯೋ ಕಳುಹಿಸುವ ಮೂಲಕ ನಾಲ್ಕು ವರ್ಷದೊಳಗಿನ ಪುಟ್ಟ ಮಕ್ಕಳಿಗೆ ಮುದ್ದು ಕೃಷ್ಣವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

 

ಸುಮಾರು 150 ಪುಟಾಣಿಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಹೊರದೇಶದಿಂದಲೂ ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಕಡಬ ತಾಲೂಕಿನ ಶಿರಾಡಿಯ ಮಾ| ಅದ್ವಿನ್ ಎಸ್. ಇವರು ಪ್ರಥಮ ಸ್ಥಾನ ಪಡೆದರು. ಕು| ಅನ್ವಿಕಾ ಅನಿಲ್ ಪೈ, ಬಂಗಾಡಿಪೇಟೆ ಇವರು ದ್ವಿತೀಯ ಸ್ಥಾನ ಪಡೆದರು. ಅವರಿಗೆ ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಹಾಗೂ ಪ್ರೋತ್ಸಾಹಕ ಬಹುಮಾನ ಪಡೆದ ಕು| ಶ್ರೀಯಾ ಸನತ್ ಬೀರಿ, ಮಾ| ಹನ್ಶ್ ಕಿರಣ್ ಶೆಟ್ಟಿ ಕಡೆಶೀವಾಲಯ, ಮಾ| ಚರಿತ್ ಆರ್.ಶೆಟ್ಟಿ, ವೇಣೂರು, ಮಾ| ತೇಜಸ್ವಿ ನಾರಾಯಣ ಭಟ್ ಪೈವಳಿಕೆ, ಕು| ಗಾನ್ವಿ ಎಸ್.ಶೆಟ್ಟಿ, ಖಂಡಿಗೆ, ಕು| ವಿಭಾ ಎನ್. ನೆಟ್ಲ, ಮಾ| ಯಜ್ವಯ್ ಜಿ.ಕುರಿಯ, ಮಾ| ಪ್ರತ್ಯಯ್ ಆರ್.ಕುಲಾಲ್, ಮಾ| ಅದ್ವಿತ್ ಶೆಟ್ಟಿ ಬಾಡೂರು, ಕು| ಆದ್ಯಾ ಎಸ್.ಶೆಟ್ಟಿ ಕನ್ಯಾನ, ಮಾ| ಅಹಾನ್ ಎಸ್.ಶೆಟ್ಟಿ, ಕಾರ್ಕಳ, ಮಾ| ಕೆ.ಎಲ್.ಪ್ರಣಮ್ ರೈ, ರಾಮಕುಂಜ ಇವರಿಗೆ ರಜತ ಪದಕ, ಪ್ರಮಾಣ ಪತ್ರ, ಫಲ ಮಂತ್ರಾಕ್ಷತೆಗಳನ್ನಿತ್ತು ಪೂಜ್ಯ ಶ್ರೀಗಳವರು ಹರಸಿದರು.