ಪೂಜ್ಯ ಶ್ರೀಗಳವರು ಭಕ್ತಿ, ಜ್ಞಾನ, ವೈರಾಗ್ಯದ ಪಥದಲ್ಲಿ ಮುನ್ನಡೆಯುತ್ತಿರುವಂತೆಯೇ ತಾನು ಬೆಳೆದುಬಂದ ಸಮಾಜದ ಉನ್ನತಿಯ ಪ್ರಗತಿಯನ್ನು ಸಾಧಿಸಬೇಕು ಎಂಬುದು ಅವರ ನಿಲುವು. ಇದನ್ನು ಸಾಕಾರಗೊಳಿಸಲು ಶ್ರೀ ಗುರುದೇವ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಅನ್ನು ಹುಟ್ಟು ಹಾಕಿ ಗ್ರಾಮೀಣ ಜನತೆಯ ಸರ್ವತೋಮುಖ ಪ್ರಗತಿಗಾಗಿ ‘ಶ್ರೀ ಗುರುದೇವ ಗ್ರಾಮವಿಕಾಸ’ ಯೋಜನೆಯನ್ನು ಟ್ರಸ್ಟ್ ಮೂಲಕ ಅನುಷ್ಠಾನಕ್ಕೆ ತರಲಾಗಿದೆ.
ದ.ಕ.ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಈಗಾಗಲೇ ಒಟ್ಟು 2017 ವಿಕಾಸವಾಹಿನಿ ಸ್ವ-ಸಹಾಯ ಸಂಘಗಳು ರಚನೆಯಾಗಿದೆ. ಒಟ್ಟು 13385 ಮಹಿಳೆಯರು, 488 ಪುರುಷರು ಹೀಗೆ 18,153 ಸದಸ್ಯರು ಗ್ರಾಮಾಭ್ಯುದಯ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಗ್ರಾಮ ನೈರ್ಮಲ್ಯ ಶಿಕ್ಷಣ, ಆರೋಗ್ಯವೇ ಮೊದಲಾದ ಪ್ರಾಥಮಿಕ ಅಗತ್ಯಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ. ಆತ್ಮವಿಶ್ವಾಸ ವರ್ಧನೆಯೊಂದಿಗೆ ಯುವಜನತೆ ಸ್ವಾವಲಂಬಿ ಬದುಕು ನಡೆಸಲು ವಿವಿಧ ಸ್ವ-ಉದ್ಯೋಗಗಳಿಗೆ ಪೂರಕವಾದ ತರಬೇತಿಗಳನ್ನು ನೀಡಲಾಗುತ್ತಿದೆ.
ಶ್ರೀ ಗುರುದೇವ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್ ಗೆ ನೀಡುವ ದೇಣಿಗೆಯು ಆದಾಯಕರದಿಂದ ವಿನಾಯಿತಿ ಹೊಂದಿರುತ್ತದೆ. ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ ಮತ್ತು ಒಡಿಯೂರು ಶ್ರೀ ಗುರುದೇವ ಕೈಗಾರಿಕಾ ತರಬೇತಿ (ಐಟಿಐ) ಈ ಟ್ರಸ್ಟ್ನಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.