ಶ್ರೀ ಸಂಸ್ಥಾನದಲ್ಲಿ ಪ್ರತಿ ದಿನ ಎರಡು ಹೊತ್ತು ಮಹಾಪೂಜೆ ನಡೆಯುವುದು. ಬೆಳಿಗ್ಗೆ 8.00 ಗಂಟೆಗೆ ಬೆಳಗಿನ ಪೂಜೆ, ರಾತ್ರಿ 8.00ಕ್ಕೆ ರಾತ್ರಿ ಪೂಜೆ ಜರಗುವುದು. ಬಹುತೇಕ ದಿನಗಳಲ್ಲಿ ಪೂಜ್ಯ ಶ್ರೀಗಳೇ ಪೂಜೆ ನೆರವೇರಿಸಿ ಪ್ರಸಾದ ನೀಡುವರು. ಶ್ರೀ ದತ್ತ, ಆಂಜನೇಯ, ಸುಬ್ರಹ್ಮಣ್ಯ ದೇವರ ಬೇರೆ ಬೇರೆ ಸೇವೆಗಳು ಇಲ್ಲಿ ನಡೆಯುತ್ತದೆ. ಸಂಕ್ರಮಣದಂದು ಸಾಮೂಹಿಕ ಗಾಯತ್ರಿ ಹೋಮ ಜರಗುವುದು.
ಶ್ರೀ ಸಂಸ್ಥಾನಕ್ಕೆ ಬರುವ ಭಕ್ತರಿಗೆ ಎರಡೂ ಹೊತ್ತು ಅನ್ನದಾನದ ವ್ಯವಸ್ಥೆ ಇದೆ. ಅದಕ್ಕಾಗಿ ಶಾಶ್ವತ ಅನ್ನದಾನದ ವ್ಯವಸ್ಥೆಯ ಯೋಜನೆ ರೂಪಿಸಲಾಗಿದೆ.
ಶ್ರೀ ಸಂಸ್ಥಾನದಲ್ಲಿ ಶಾಶ್ವತ ಪೂಜೆಯ ವ್ಯವಸ್ಥೆ ಇದೆ. ಭಕ್ತರು ರೂ.1,501/-ನ್ನು ತೆತ್ತು ತಮ್ಮ ಅನುಕೂಲ ಹಾಗೂ ಅಪೇಕ್ಷಿತ ದಿನಗಳಲ್ಲಿ ಪೂಜೆ ಮಾಡಿಸಬಹುದಾಗಿದೆ. ನಿಗದಿತ ಪಡಿಸಿದ ದಿನದಂದು ಸನ್ನಿಧಿಗೆ ಆಗಮಿಸಿ ಪೂಜೆ ಸಲ್ಲಿಸಿ, ಪ್ರಸಾದ ಪಡಕೊಳ್ಳಬಹುದು. ಹಾಜರಾಗಲು ಅನಿವಾರ್ಯ ಕಾರಣವಿದ್ದರೆ ನೋಂದಣಿದಾರರ ಹೆಸರಿನಲ್ಲಿ ಪೂಜೆ ನಡೆಸಿ, ಅವರಿಗೆ ಅಂಚೆ ಮೂಲಕ ಪ್ರಸಾದ ಕಳುಹಿಸಲಾಗುತ್ತದೆ. ವಿಶೇಷ ಪರ್ವ ದಿನಗಳಲ್ಲಿ ರಂಗಪೂಜೆ ನಡೆಯುವುದು. ಶ್ರೀ ಸಂಸ್ಥಾನದಲ್ಲಿ ಬೆಳ್ಳಿ ರಥ ಸೇವೆ, ಆಶ್ಲೇಷ ಬಲಿ, ಸುದರ್ಶನ ಹೋಮ, ಸ್ವಯಂವರ ಪಾರ್ವತೀ ಪೂಜೆ, ಗುರುಪೂಜೆ, ಮಹಾಮೃತ್ಯುಂಜಯ ಹವನ, ಪವಮಾನ ಹೋಮ, ಗ್ರಹದೋಷಗಳ ನಿವಾರಣೆ ಮಾಡುವ ಪÀÇಜೆ-ಹವನ ಮೊದಲಾದ ಸೇವೆಗಳಿಗೆ, ಸಮಯಾನುಸಾರ ಅನ್ನ ಪ್ರಾಶನಾದಿ ಸೇವೆಗಳನ್ನು ಮಾಡಿಸುವ ಅವಕಾಶವಿದೆ.