ಒಡಿಯೂರು ಶ್ರೀ ಸಂಸ್ಥಾನದ ಪ್ರಕಟಣೆ
ಒಡಿಯೂರು ಶ್ರೀ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಜನ್ಮದಿನೋತ್ಸವವನ್ನು (ಜುಲೈ 17, 2020) ಗುರುಬಂಧುಗಳು ಮನೆ-ಮನಗಳಲ್ಲಿ ಗುರುವಂದನೆಯನ್ನು ನಡೆಸುವ ಮೂಲಕ ಪೂಜ್ಯ ಶ್ರೀಗಳವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯು ಪ್ರಕಟಣೆ ನೀಡಿದೆ.
ಗುರುಬಂಧುಗಳು ತಮ್ಮ ಆರೋಗ್ಯವನ್ನು ಕಾಯ್ದುಕೊಂಡು ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪೂಜ್ಯ ಶ್ರೀಗಳವರು ಕರೆ ನೀಡಿದ್ದಾರೆ. ಮಹಾಮಾರಿಯ ಬಗ್ಗೆ ಭಯ ಪಡದೆ ನಿರ್ಭೀತರಾಗಿ, ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು, ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸರಕಾರದ ನಿಯಮಗಳಿಗೆ ಬದ್ಧರಾಗಿ ತಾನು ಬದುಕಿ ಇತರರನ್ನು ಬದುಕಬಿಡೋಣ ಎಂದಿದ್ದಾರೆ.