ಡಾ. ಶಿಮಂತೂರು ನಾರಾಯಣ ಶೆಟ್ಟರು ನಿಧನ : ಒಡಿಯೂರು ಶ್ರೀಗಳ ಸಂತಾಪ

ಜೀವನದ ಬಹುಪಾಲನ್ನು ಯಕ್ಷಗಾನದ ಛಂದಸ್ಸಿಗೆ ಮುಡಿಪಾಗಿರಿಸಿದ ಯಕ್ಷಗಾನ ಛಂದೋಬ್ರಹ್ಮ ಅದ್ಭುತ ಕವಿ, ಸಂಶೋಧಕ, ಸರಳ ಸಜ್ಜನಿಕೆಯ ಡಾ. ಶಿಮಂತೂರು ನಾರಾಯಣ ಶೆಟ್ಟರು ಶ್ರೀ ಸಂಸ್ಥಾನದ ಮುಖ್ಯ ಅಭಿಮಾನಿಗಳಲ್ಲೋರ್ವರು. ಇವರ ನಿಧನವು ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ. ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಆರಾಧ್ಯದೇವರು ಕರುಣಿಸಲೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪ್ರಾರ್ಥಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.