ಒಡಿಯೂರು ಶ್ರೀಗಳ ಷಷ್ಠ್ಯಬ್ದಿ ಸಂಭ್ರಮ ನಮ್ಮ ಕುಡ್ಲ ಟಿವಿ ವಾಹಿನಿಯಿಂದ ‘ಗುರುದೇವಾಮೃತ’ 60 ಜ್ಞಾನವಾಹಿನಿ ಪ್ರಸಾರ ಚಿತ್ರೀಕರಣಕ್ಕೆ ಚಾಲನೆ

ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ 60ರ ಸಂಭ್ರಮದ ಅಂಗವಾಗಿ ನಮ್ಮ ಕುಡ್ಲ ಟಿ.ವಿ. ವಾಹಿನಿ ನಿರಂತರ 60 ದಿನಗಳ ‘ಗುರುದೇವಾಮೃತ’ ಜ್ಞಾನವಾಹಿನಿ ಆಧ್ಯಾತ್ಮಿಕ ಚಿಂತನಾಸತ್ರ ಪ್ರಸಾರ ಕಾರ್ಯಕ್ರಮವನ್ನು ಆಯೋಜಿಸಿದ್ದು ಅದರ ಚಿತ್ರೀಕರಣಕ್ಕೆ ಒಡಿಯೂರು ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಪೂಜ್ಯ ಶ್ರೀಗಳವರು ದೀಪ ಪ್ರಜ್ವಲನಗೊಳಿಸಿ ಚಾಲನೆ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀಗಳ ಷಷ್ಠ್ಯಬ್ದಿ ಸಂಭ್ರಮ ಸಮಿತಿಯ ಅಧ್ಯಕ್ಷ ಮೂಡುಬಿದ್ರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್‍ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಕಾರ್ಯಾಧ್ಯಕ್ಷ ಮಾಜಿ ಶಾಸಕ ಶ್ರೀ ಕೆ. ಪದ್ಮನಾಭ ಕೊಟ್ಟಾರಿಯವರು ಶುಭಹಾರೈಸಿದರು. ಸಮಿತಿಯ ಕೋಶಾಧಿಕಾರಿ ಶ್ರೀ ಎ. ಸುರೇಶ್ ರೈ, ಜತೆ ಕೋಶಾಧಿಕಾರಿಗಳಾದ ಶ್ರೀ ಎ. ಅಶೋಕ್ ಕುಮಾರ್, ಶ್ರೀ ಪಿ. ಲಿಂಗಪ್ಪ ಗೌಡ, ಬಿ.ಸಿ. ರೋಡ್ ರಂಗೋಲಿಯ ಮ್ಹಾಲಕ ಶ್ರೀ ಚಂದ್ರಹಾಸ ಡಿ. ಶೆಟ್ಟಿ, ಶ್ರೀ ಗಣಪತಿ ಭಟ್ ಸೇರಾಜೆ, ಶ್ರೀ ಯಶವಂತ ವಿಟ್ಲ, ಶ್ರೀ ವೇಣುಗೋಪಾಲ ಮಾರ್ಲ, ಶ್ರೀ ಎ. ಜಯಪ್ರಕಾಶ್ ಶೆಟ್ಟಿ, ಶ್ರೀ ಪದ್ಮನಾಭ ಒಡಿಯೂರು ಮೊದಲಾದವರು ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ನವನೀತ ಶೆಟ್ಟಿ ಕದ್ರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜ್ಞಾನವಾಹಿನಿಯಲ್ಲಿ ಪೂಜ್ಯ ಶ್ರೀಗಳು ಆಧ್ಯಾತ್ಮಿಕ ಚಿಂತನೆಗಳ ದಿವ್ಯೋಪನ್ಯಾಸ ನೀಡುವರು. ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಅವರು ವಚನ ಸಾಹಿತ್ಯವನ್ನು ವಾಚಿಸುವರು.