ಶ್ರೀ ಕೆ. ಜನಾರ್ದನ ಶೆಟ್ಟಿ ಬಂಡಿತ್ತಡ್ಕ ಅವರ ನಿಧನಕ್ಕೆ ಒಡಿಯೂರು ಶ್ರೀಗಳ ಸಂತಾಪ

ಗಾಂಧೀಜಿ ಪ್ರಣೀತ ಬುನಾದಿ ಶಿಕ್ಷಣ ತರಬೇತಿ ಪಡೆದು ಶಿಕ್ಷಣವನ್ನೇ ಜೀವನವಾಗಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಅನನ್ಯ ಶಿಕ್ಷಕ ಶ್ರೀ ಕೆ. ಜನಾರ್ದನ ಶೆಟ್ಟಿ ಬಂಡಿತ್ತಡ್ಕ ಅವರ ನಿಧನಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ.

ನಿವೃತ್ತಿಯ ಬಳಿಕ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಸ್ಮರಣೀಯ. ಅಧ್ಯಾತ್ಮದ ಒಲವುಳ್ಳವರಾಗಿದ್ದ ಅವರು ಪ್ರಾಮಾಣಿಕತೆ, ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡಿದ್ದರು. ಇವರು ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರ ತೀರ್ಥರೂಪರು. ಅವರ ಆತ್ಮಕ್ಕೆ ಸಾಯುಜ್ಯವನ್ನು ಆರಾಧ್ಯಮೂರ್ತಿ ಶ್ರೀ ದತ್ತಾಂಜನೇಯ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.