ಒಡಿಯೂರು ಶ್ರೀಗಳ ಸಂತಾಪ

ಬಹು ಭಾಷಾ ಸ್ವರ ಸಾಮ್ರಾಟ, ಸಂಗೀತವನ್ನೇ ತನ್ನ ಉಸಿರಾಗಿಸಿಕೊಂಡ ಸಂಗೀತ ಸಾರ್ವಭೌಮ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಾದಲೀನರಾದುದು ಭಾರತದ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮೂಲತಃ ತೆಲುಗಿನವರಾದರೂ ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಪ್ರೀತಿ, ಅಭಿಮಾನ ಅಸಾಧಾರಣವಾದುದು. ಬೌತಿಕವಾಗಿ ಅವರು ಕಣ್ಮರೆಯಾದರೂ ಅವರ ಗಾನಮಾಧುರ್ಯ ಸದಾ ಹಸಿರಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಆರಾಧ್ಯಮೂರ್ತಿ ಶ್ರೀ ದತ್ತಾಂಜನೇಯ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.