ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸುಳ್ಯ ಸಮಿತಿಯ ಸರಣಿ ಕಾರ್ಯಕ್ರಮಗಳಿಗೆ ಚಾಲನೆ


ಸುಳ್ಯ, ಜ.26: “ನಮ್ಮ ಬದುಕಿಗೂ ಒಂದು ಸಂವಿಧಾನ ಬೇಕು. ಅದುವೇ ಧರ್ಮ. ಮಾನವೀಯತೆಯ ಬದುಕು ಅಗತ್ಯ. ಬದುಕೇ ಒಂದು ಸಂದೇಶವಾಗಬೇಕು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಷಷ್ಠ್ಯಬ್ದ ಆಚರಣೆಯಂಗವಾಗಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸುಳ್ಯ ಸಮಿತಿಯ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀರಾಮ ತಾರಕ ಮಂತ್ರ ಹಾಗೂ ಹನುಮಾನ್ ಚಾಲೀಸ್ ಪಠಣ ನೆರವೇರಿಸಿ ಆಶೀರ್ವಚನಗೈದರು.
ಸಮಾರಂಭದಲ್ಲಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಕೋಶಾಧಿಕಾರಿ ಶ್ರೀ ಎ. ಸುರೇಶ್ ರೈ, ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್, ನ್ಯಾಯವಾದಿಗಲಾದ ಶ್ರೀ ಜಯಪ್ರಕಾಶ್ ರೈ, ಸುಳ್ಯ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಎನ್.ಎ. ರಾಮಚಂದ್ರ, ಕಾರ್ಯಾಧ್ಯಕ್ಷ ಶ್ರೀ ಕೆ.ಟಿ. ವಿಶ್ವನಾಥ್, ಕೋಶಾಧಿಕಾರಿ ಶ್ರೀ ರಾಧಾಕೃಷ್ಣ ಪಕಳ, ಪ್ರಧಾನ ಕಾರ್ಯದರ್ಶಿ ಶ್ರೀ ಪುಷ್ಪರಾಜ ಗಾಂಭೀರ್, ಉಪಸ್ಥಿತರಿದ್ದರು.
ಸುಳ್ಯ ಸಮಿತಿಯ ಅಧ್ಯಕ್ಷ ಶ್ರೀ ವಿಶ್ವನಾಥ ರೈ ಕಳಂಜ ಇವರು ಸ್ವಾಗತಿಸಿದರು. ಶ್ರೀ ಗಣೇಶ್ ಪಿಲಿಕಜೆ ಕಾರ್ಯಕ್ರಮ ನಿರೂಪಿಸಿದರು.