ಒಡಿಯೂರು ಶ್ರೀ ಸಂಸ್ಥಾನಕ್ಕೆ ಶ್ರೀಮದ್ ಎಡನೀರು ಮಠದ ನೂತನ ಪೀಠಾಧಿಪತಿ ಭೇಟಿ
ಜಗದ್ಗುರು ಶ್ರೀ ಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ಶ್ರೀ ಮದ್ ಎಡನೀರು ಮಠದ ನೂತನ ಪೀಠಾಧಿಪತಿಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ (ಶ್ರೀ ಜಯರಾಮ ಮಂಜತ್ತಾಯ)ಯವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಕ್ಕೆ ಭೇಟಿ ನೀಡಿ ಶ್ರೀ ದತ್ತಾಂಜನೇಯ ದೇವರ ಹಾಗೂ ಶ್ರೀ ನಿತ್ಯಾನಂದ ಗುಹಾಲಯದಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವರ ದರ್ಶನ ಪಡೆದರು. ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಶುಭಹಾರೈಸಿದರು.
ವೇ|ಬ್ರಹ್ಮಶ್ರೀ| ರವೀಶ ತಂತ್ರಿ ಕುಂಟಾರು, ಶ್ರೀ ಎಡನೀರು ಮಠದ ಪುರೋಹಿತರಾದ ಶ್ರೀ ಗೋಪಾಲಕೃಷ್ಣ ಅಡಿಗ ಉಪಸ್ಥಿತರಿದ್ದರು. ಒಡಿಯೂರು ಶ್ರೀ ಸಂಸ್ಥಾನದ ಪುರೋಹಿತರಾದ ವೇ|ಮೂ| ಚಂದ್ರಶೇಖರ ಉಪಾಧ್ಯಾಯ ಹಾಗೂ ವೈದಿಕ ವೃಂದ, ಸಹಸಂಸ್ಥೆಗಳ ಪ್ರಮುಖರಾದ ಶ್ರೀ ಎ. ಸುರೇಶ್ ರೈ, ಶ್ರೀ ಎ. ಅಶೋಕ್ ಕುಮಾರ್, ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಶ್ರೀ ಪಿ. ಲಿಂಗಪ್ಪ ಗೌಡ, ಶ್ರೀ ಮಲಾರು ಜಯರಾಮ ರೈ, ಶ್ರೀ ಗಣಪತಿ ಭಟ್ ಸೇರಾಜೆ, ಶ್ರೀ ಯಶವಂತ ವಿಟ್ಲ, ಶ್ರೀ ಸುಬ್ರಹ್ಮಣ್ಯ ಒಡಿಯೂರು, ಶ್ರೀ ಶಶಿಧರ ಶೆಟ್ಟಿ ಜಮ್ಮದಮನೆ ಇವರುಗಳು ಬರಮಾಡಿಕೊಂಡರು.